JEE Advanced 2021 Dates:ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಜನವರಿ 7 ರಂದು ಗುರುವಾರ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಗಳ ದಿನಾಂಕವನ್ನು ಪ್ರಕಟಿಸಲಿದ್ದಾರೆ. ಇದರೊಂದಿಗೆ ಅವರು ಐಐಟಿಗೆ ಪ್ರವೇಶಕ್ಕೆ ಅಗತ್ಯವಾದ ಅರ್ಹತೆಯ ಮಾನದಂಡಗಳ ಬಗ್ಗೆಯೂ ಮಾಹಿತಿ ನೀಡಲಿದ್ದಾರೆ. ಶಿಕ್ಷಣ ಸಚಿವರು ಈ ಬಗ್ಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಮಾಹಿತಿ ನೀಡಿದ್ದಾರೆ.
ಮೂಲಗಳಿಂದ ದೊರೆತ ಮಾಹಿತಿಯ ಪ್ರಕಾರ, ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಗುರುವಾರ ಸಂಜೆ 6 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದು, ಈ ಸಮಯದಲ್ಲಿ ಅವರು ಜೆಇಇ ಅಡ್ವಾನ್ಸ್ಡ್ ದಿನಾಂಕಗಳನ್ನು ಪ್ರಕಟಿಸಲಿದ್ದಾರೆ.
My dear students,
I will announce the eligibility criteria for admission in #IITs & the date of #JEE Advanced on 7th Jan at 6 PM.
Stay tuned! pic.twitter.com/PHvDj2xzd5— Dr. Ramesh Pokhriyal Nishank (@DrRPNishank) January 4, 2021
ಇದನ್ನು ಓದಿ- JEE NEET ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆಗೆ ಮುಂದಾದ ಮೋದಿ ಸರ್ಕಾರ
ಜೆಇಇ ಮುಖ್ಯ ಪರೀಕ್ಷೆಯಲ್ಲಿ ಬದಲಾವಣೆ (JEE Main 2021 Exam)
ಈ ಹಿಂದೆ ನಡೆಸಲಾಗಿರುವ ವೆಬ್‌ನಾರ್‌ನಲ್ಲಿ, ಶಿಕ್ಷಣ ಸಚಿವರು ಕರೋನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಎಂಜಿನಿಯರಿಂಗ್ ಪ್ರವೇಶಕ್ಕಾಗಿ ಜೆಇಇ ಮುಖ್ಯ 2021 ರಲ್ಲಿನ ಬದಲಾವಣೆಗಳ ಬಗ್ಗೆ ಚರ್ಚಿಸಿದ್ದರು. ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಈ ಬಾರಿ ವಿದ್ಯಾರ್ಥಿಗಳಿಗೆ 4 ಬಾರಿ ಅವಕಾಶ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ- NEET, JEE Main 2021 Syllabus Change! NTA ಗೆ ಶಿಕ್ಷಣ ಸಚಿವಾಲಯ ನೀಡಿದೆ ಈ ಗೈಡ್ ಲೈನ್ಸ್
ಈ ಬಾರಿ ಜೆಇಇ ಮುಖ್ಯ(JEE Mains) ಪರೀಕ್ಷೆ 2021ನ್ನು ನಾಲ್ಕು ಬಾರಿ ನಡೆಸಲಾಗುತ್ತಿದೆ. ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA) ಮೂಲಕ ನಡೆಸಲಾಗುವುದು. ಮೊದಲ ಸೆಶನ್ ಫೆಬ್ರವರಿ 22 ರಿಂದ 2021 ಫೆಬ್ರವರಿ 25 ರವರೆಗೆ ನಡೆಯಲಿದೆ. ಇದರ ನಂತರ, ಎರಡನೇ ಸೆಶನ್ ಮಾರ್ಚ್ನಲ್ಲಿ, ಏಪ್ರಿಲ್ನಲ್ಲಿ ಮೂರನೇ ಮತ್ತು ಮೇನಲ್ಲಿ ನಾಲ್ಕನೆ ಸೆಶನ್ ನಡೆಯಲಿದೆ. ಈ ಪರೀಕ್ಷೆಯನ್ನು ದೇಶದ 13 ಭಾಷೆಗಳಲ್ಲಿ ನಡೆಸಲಾಗುತ್ತಿದೆ. ಇದಲ್ಲದೆ, ಪರೀಕ್ಷೆಯ ಸಿಲೆಬಸ್ ಅನ್ನು ಸ್ವಲ್ಪ ಕಡಿಮೆ ಮಾಡಲಾಗಿದೆ. ಈ ಮೊದಲು ಈ ಪ್ರವೇಶ ಪರೀಕ್ಷೆಯನ್ನು ವರ್ಷಕ್ಕೆ ಎರಡು ಬಾರಿ ನಡೆಸಲಾಗುತ್ತಿತ್ತು.
ಇದನ್ನು ಓದಿ- JEE Main 2021: ಪರೀಕ್ಷೆಯ ಅಧಿಸೂಚನೆಯನ್ನು ಅಧಿಕೃತ ವೆಬ್ ಸೈಟ್ ನಿಂದ ತೆಗೆದುಹಾಕಿದ NTA, ಕಾರಣ ಇಲ್ಲಿದೆ
ದೇಶದ ಪ್ರಮುಖ ಐಐಟಿಗಳು, ಎನ್‌ಐಟಿಗಳು ಸೇರಿದಂತೆ ಎಲ್ಲಾ ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ ಪ್ರವೇಶಕ್ಕಾಗಿ ಜೆಇಇ ಮುಖ್ಯ ಪರೀಕ್ಷೆಯನ್ನು ನಡೆಸಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.