ಜಾರ್ಖಂಡ್ ಎನ್ಕೌಂಟರ್ ನಲ್ಲಿ ನಾಲ್ವರು ನಕ್ಸಲರಿಗೆ ಗಾಯ, ಓರ್ವ ಸೈನಿಕ ಹುತ್ಮಾತ್ಮ

ಜಾರ್ಖಂಡ್ ನ ದುಮ್ಕಾ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಓರ್ವ ಭದ್ರತಾ ಸಿಬ್ಬಂದಿಯೊಬ್ಬ ತನ್ನ ಜೀವವನ್ನು ಕಳೆದುಕೊಂಡಿದ್ದಾನೆ ಮತ್ತು ಇತರ ನಾಲ್ವರು ಗಾಯಗೊಂಡಿದ್ದಾರೆ ಎಂದು ದುಮ್ಕಾ ಪೊಲೀಸ್ ಅಧೀಕ್ಷಕ ಎಸ್.ಪಿ.ರಮೇಶ್ ಎಎನ್ಐಗೆ ತಿಳಿಸಿದ್ದಾರೆ.

Last Updated : Jun 2, 2019, 12:41 PM IST
ಜಾರ್ಖಂಡ್ ಎನ್ಕೌಂಟರ್ ನಲ್ಲಿ ನಾಲ್ವರು ನಕ್ಸಲರಿಗೆ ಗಾಯ, ಓರ್ವ ಸೈನಿಕ ಹುತ್ಮಾತ್ಮ    title=
photo:ANI

ನವದೆಹಲಿ: ಜಾರ್ಖಂಡ್ ನ ದುಮ್ಕಾ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಓರ್ವ ಭದ್ರತಾ ಸಿಬ್ಬಂದಿಯೊಬ್ಬ ತನ್ನ ಜೀವವನ್ನು ಕಳೆದುಕೊಂಡಿದ್ದಾನೆ ಮತ್ತು ಇತರ ನಾಲ್ವರು ಗಾಯಗೊಂಡಿದ್ದಾರೆ ಎಂದು ದುಮ್ಕಾ ಪೊಲೀಸ್ ಅಧೀಕ್ಷಕ ಎಸ್.ಪಿ.ರಮೇಶ್ ಎಎನ್ಐಗೆ ತಿಳಿಸಿದ್ದಾರೆ.

ಎನ್ಕೌಂಟರ್ ನಲ್ಲಿ ಗಾಯಗೊಂಡ ಸೈನಿಕರನ್ನು ಹೆಲಿಕಾಪ್ಟರ್ನಲ್ಲಿ ಚಿಕಿತ್ಸೆಗಾಗಿ ರಾಂಚಿಗೆ ಸಾಗಿಸಲಾಗಿದೆ ಎಂದು ಜೀ ಮೀಡಿಯಾಗೆ ಮೂಲಗಳು ತಿಳಿಸಿವೆ. ರಣೇಶ್ವರ್ ಪೊಲೀಸ್ ಠಾಣೆಯ ವ್ಯಾಪ್ತಿಯ ಕತಲಿಯಾ ಗ್ರಾಮದ ಸಮೀಪ ಈ ಎನ್ಕೌಂಟರ್ ನಡೆಯಿತು. ಈ ಎನ್ಕೌಂಟರ್ ಸಂದರ್ಭದಲ್ಲಿ ತನಗಾದ ಗುಂಡಿನ ಗಾಯಗಳಿಗೆ ಚಿಕಿತ್ಸೆ ನೀಡುತ್ತಿರುವಾಗ ಜವಾನ್ ನೀರಾಜ್ ಛತ್ರಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

ಸುಮಾರು 15-20 ನಕ್ಸಲರು ಶಿಕರಿಪದಾ ಮತ್ತು ರಣೇಶ್ವರ ಕಾಡಿನಲ್ಲಿ ಅಡಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಭದ್ರತಾ ಪಡೆ ಮತ್ತು ಪೊಲೀಸ್ ಸಿಬ್ಬಂದಿಗಳ ತಂಡವು ಅರಣ್ಯಕ್ಕೆ ತಲುಪಿದಾಗ, ನಕ್ಸಲರು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.ಈಗ ಈಗ ಅಧಿಕಾರಿಗಳು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಮೇ 28 ರಂದು ಜಾರ್ಖಂಡ್ ನ ಸಾರೈಕೆಲ್ಲದ ಕುಚಾಯ್ ಪ್ರದೇಶದಲ್ಲಿ ಐಇಡಿ ಸ್ಫೋಟದದಿಂದಾಗಿ  ಕನಿಷ್ಠ 21 ಮಂದಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು .

Trending News