ಗೋಮಾಂಸ ಮಾರಾಟ ಅನುಮಾನದ ಮೇಲೆ ಜಾರ್ಖಂಡ್ ನಲ್ಲಿ ಓರ್ವನ ಸಮೂಹ ಹತ್ಯೆ

ಜಾರ್ಖಂಡ್ ನಲ್ಲಿ ಗೋಮಾಂಸ ಮಾರಾಟದ ಅನುಮಾನದ ಮೇಲೆ ಜಾರ್ಖಂಡ್ ನಲ್ಲಿ ಗ್ರಾಮಸ್ಥರಿಂದ 34 ವರ್ಷದ ವ್ಯಕ್ತಿಯಯನ್ನು ಥಳಿಸಲಾಗಿದೆ.

Last Updated : Sep 23, 2019, 02:48 PM IST
ಗೋಮಾಂಸ ಮಾರಾಟ ಅನುಮಾನದ ಮೇಲೆ ಜಾರ್ಖಂಡ್ ನಲ್ಲಿ ಓರ್ವನ ಸಮೂಹ ಹತ್ಯೆ  title=
ಸಾಂದರ್ಭಿಕ ಚಿತ್ರ

ನವದೆಹಲಿ: ಜಾರ್ಖಂಡ್ ನಲ್ಲಿ ಗೋಮಾಂಸ ಮಾರಾಟದ ಅನುಮಾನದ ಮೇಲೆ ಜಾರ್ಖಂಡ್ ನಲ್ಲಿ ಗ್ರಾಮಸ್ಥರಿಂದ 34 ವರ್ಷದ ವ್ಯಕ್ತಿಯಯನ್ನು ಥಳಿಸಲಾಗಿದೆ.

ಈ ಘಟನೆ ಜಾರ್ಖಂಡ್ ನ ಖುಂಟಿ ಜಿಲ್ಲೆಯಲ್ಲಿ ನಡೆದಿದ್ದು, ಇತರ ಇಬ್ಬರು ವ್ಯಕ್ತಿಗಳ ಮೇಲೆ ಕೂಡ ಹಲ್ಲೆ ಮಾಡಲಾಗಿದೆ. ಈಗ ಈ ಘಟನೆ ಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಅಧಿಕಾರಿ 'ಬೆಳಿಗ್ಗೆ 10 ಗಂಟೆ ಸುಮಾರಿಗೆ, ಕಾರ್ರಾ ಪೊಲೀಸ್ ಠಾಣೆಯ ಉಸ್ತುವಾರಿ ಕೆಲವು ಗ್ರಾಮಸ್ಥರಿಂದ ತಿಳಿಸಲ್ಪಟ್ಟಿದ್ದು, ನಿಷೇಧಿತ ಮಾಂಸವನ್ನು ಮಾರಾಟ ಮಾಡುತ್ತಿದ್ದುದ್ದಕ್ಕೆ ಸ್ಥಳೀಯ ಗ್ರಾಮಸ್ಥರು ಹಿಡಿದು ವ್ಯಕ್ತಿಯನ್ನು ಥಳಿಸಿದರು' ಎಂದು ಹೇಳಿದ್ದಾರೆ.

ಈಗ ಘಟನೆಯಲ್ಲಿ ಹಲ್ಲೆಗೊಳಗಾದ ಮೂವರು ವ್ಯಕ್ತಿಗಳನ್ನು ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಕರೆದೊಯ್ಯಲಾಯಿತು, ಅವರಲ್ಲಿ ಒಬ್ಬರು - ಕೆಲೆಮ್ ಬಾರ್ಲಾ - ಅವರ ಗಾಯಗಳಿಂದ ಮೃತಪಟ್ಟಿದ್ದಾರೆ. ಈಗ ಶಂಕಿತರ ಪಟ್ಟಿಯ ಆಧಾರದ ಮೇಲೆ ಪೊಲೀಸರು ದಾಳಿ ನಡೆಸುತ್ತಿದ್ದಾರೆ. ಶಂಕಿತರನ್ನು ಅವರು ಪ್ರಶ್ನಿಸುತ್ತಿದ್ದಾರೆ ಮತ್ತು ಇತರರನ್ನು ಹಿಡಿಯಲು ತಂಡಗಳನ್ನು ರಚಿಸಿದ್ದಾರೆ ಎನ್ನಲಾಗಿದೆ.

ಜೂನ್ 17, 2019 ರಲ್ಲಿ, ಜಾರ್ಖಂಡ್‌ನ 24 ವರ್ಷದ ಯುವಕನನ್ನು (ತಬ್ರೆಜ್ ಅನ್ಸಾರಿ) ಕಂಬದಿಂದ ಗಂಟೆಗಟ್ಟಲೆ ಕಟ್ಟಿಹಾಕಿ ಥಳಿಸಿ ಜೈ ಶ್ರೀ ರಾಮ್ ಎಂದು ಜಪಿಸಲು ಒತ್ತಾಯಿಸಲಾಯಿತು. ಇದಾದ ನಾಲ್ಕು ದಿನಗಳ ನಂತರ ಜೂನ್ 22 ರಂದು ಆಸ್ಪತ್ರೆಯಲ್ಲಿ ಅವರು ಮೃತಪಟ್ಟರು. 

Trending News