Jobs in CISF : ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿ 2000 ಹುದ್ದೆಗಳಿಗೆ ನೊಟೀಫಿಕೇಶನ್

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿ ವಿವಿಧ ಹುದ್ದೆಗಳಿಗೆ ನೊಟೀಫಿಕೇಶನ್  ಜಾರಿಗೊಳಿಸಲಾಗಿದೆ. ಒಟ್ಟು 2000 ಹುದ್ದೆಗಳು ಖಾಲಿ ಇವೆ. ಇದು ಭಾರತೀಯ ಸೇನೆಯ ನಿವೃತ್ತ ಯೋಧರಿಗೆ ಇರುವ ಅವಕಾಶ. 

Written by - Ranjitha R K | Last Updated : Feb 23, 2021, 02:46 PM IST
  • ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿ ವಿವಿಧ ಹುದ್ದೆಗಳಿಗೆ ನೊಟೀಫಿಕೇಶನ್ ಜಾರಿ
  • ಒಟ್ಟು 2000 ಹುದ್ದೆಗಳು ಖಾಲಿ ಇವೆ.
  • ಇದು ಭಾರತೀಯ ಸೇನೆಯ ನಿವೃತ್ತ ಯೋಧರಿಗೆ ಇರುವ ಅವಕಾಶ.
Jobs in CISF : ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿ 2000 ಹುದ್ದೆಗಳಿಗೆ ನೊಟೀಫಿಕೇಶನ್ title=
ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿ 2000 ಹುದ್ದೆಗಳಿಗೆ ನೊಟೀಫಿಕೇಶನ್ (Photo twitter)

ಬೆಂಗಳೂರು : ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿ ವಿವಿಧ ಹುದ್ದೆಗಳಿಗೆ ನೊಟೀಫಿಕೇಶನ್ (Job Notification) ಜಾರಿಗೊಳಿಸಲಾಗಿದೆ. ಒಟ್ಟು 2000 ಹುದ್ದೆಗಳು ಖಾಲಿ ಇವೆ. ಇದು ಭಾರತೀಯ ಸೇನೆಯ ನಿವೃತ್ತ ಯೋಧರಿಗೆ ಇರುವ ಅವಕಾಶ.  ಒಂದು ವರ್ಷದ ಗುತ್ತಿಗೆ (Contract) ಅವಧಿಗೆ ಕೆಲಸ ಮಾಡಬೇಕಾಗುತ್ತದೆ. ಗುತ್ತಿಗೆಯನ್ನು ಕಾಲ ಕಾಲಕ್ಕೆ ವಿಸ್ತರಿಸಲಾಗುತ್ತದೆ. 

ನೋಟಿಫಿಕೇಶನ್ ನಲ್ಲಿರುವ ಮುಖ್ಯ ಮಾಹಿತಿ ಹೀಗಿದೆ. 

ವೇತನ ಮಿತಿ:
ವಿವಿಧ ಹುದ್ದೆಗಳ ವೇತನ ಮಿತಿ (Salary) 25,000 ದಿಂದ ಆರಂಭವಾಗಿ 45 ಸಾವಿರದ ತನಕ ಇರಲಿದೆ. 

ಖಾಲಿ ಇರುವ ಹುದ್ದೆಗಳು  :
ಎಸ್ಐ  - 63
ಎಎಸ್ಐಇ - 187
ಹೆಡ್ ಕಾನ್ಸ್ಟೇ ಬಲ್ - 424
ಕಾನ್ಸ್ಟೇ ಬಲ್ 1326
ಎಲ್ಲಾ ಸೇರಿ ಒಟ್ಟು 2000 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. 

ಇದನ್ನೂ ಓದಿ : Sarkari Naukri: ನೇರ ನೇಮಕಾತಿ, 10ನೇ ತರಗತಿ ಪಾಸ್ ಆದವರಿಗೆ ಸುವರ್ಣಾವಕಾಶ

ಇತರ ಮಾಹಿತಿ :
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮಾರ್ಚ್ 15, 2021
ವಯೋಮಿತಿ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 50 ವರ್ಷ ಮೀರಿರಬಾರದು
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

ಆಯ್ಕೆ ಪ್ರಕ್ರಿಯೆ : ಲಿಖಿತ ಪರೀಕ್ಷೆ, ಸಂದರ್ಶನ (Interview) ಮತ್ತು ಮೆರಿಟ್ ಆಧಾರ ಮೇಲೆ 

ಅರ್ಜಿ ಸಲ್ಲಿಕೆ ಹೇಗೆ.?
ಅರ್ಹ ಅಭ್ಯರ್ಥಿಗಳು davp.nic.in websiteಗೆ ಹೋಗಬಹುದು. ಅಲ್ಲೊಂದು ಸ್ಯಾಂಪಲ್ ಅರ್ಜಿ ನಮೂನೆ ಡೌನ್ ಲೋಡ್ ಮಾಡಿ ಅದನ್ನು ಭರ್ತಿ ಮಾಡಿ, ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ, ಮೇಲ್ ಮಾಡಬೇಕು. ಮೇಲ್ ಐಡಿ websiteನಲ್ಲೇ ಇದೆ. ಮೇಲ್ ಮಾಡುವಾಗ ಯಾವ ಹುದ್ದೆಗೆ ನೀವು ಅಪ್ಲಿಕೇಶನ್ ಹಾಕುತ್ತಿರೋ, ಅದನ್ನು ನಮೂದಿಸಬೇಕು. ಉದಾಹರಣೆ ಹೀಗಿದೆ “APPLICATION FOR ENGAGEMENT OF ExARMY PERSONNEL ON CONTRACTUAL BASIS IN CISF”..

ಇದನ್ನೂ ಓದಿ ಸರ್ಕಾರಿ ನೌಕರಿ ಹುಡುಕುತಿದ್ದೀರಾ..? ಇಲ್ಲಿದೆ ನಿಮಗೊಂದು ಛಾನ್ಸ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News