Sarkari Naukri: ನೇರ ನೇಮಕಾತಿ, 10ನೇ ತರಗತಿ ಪಾಸ್ ಆದವರಿಗೆ ಸುವರ್ಣಾವಕಾಶ

Oil India Recruitment 2021:  ವಾಕ್-ಇನ್ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸಂದರ್ಶನಕ್ಕೆ (Sarkari Naukri 2021) ಫೆಬ್ರವರಿ 25 ರಿಂದ 2021 ಮಾರ್ಚ್ 22 ರವರೆಗೆ ಹಾಜರಾಗಬಹುದು. ಅಧಿಸೂಚನೆ oil-india.com ನಲ್ಲಿ ಲಭ್ಯವಿದೆ.

Written by - Yashaswini V | Last Updated : Feb 23, 2021, 11:25 AM IST
  • ವಾಕ್-ಇನ್ ಸಂದರ್ಶನದ ಮೂಲಕ ನೇರ ನೇಮಕಾತಿ ಮಾಡಲಾಗುತ್ತದೆ
  • ಸಂದರ್ಶನಗಳು ಫೆಬ್ರವರಿ 25 ರಿಂದ 2021 ಮಾರ್ಚ್ 22 ರವರೆಗೆ ನಡೆಯಲಿದೆ
  • ಈ ಹುದ್ದೆಗಳಲ್ಲಿ ಆಯ್ದ ಅಭ್ಯರ್ಥಿಗಳಿಗೆ ಸಂಬಳವೂ ವಿಭಿನ್ನವಾಗಿರುತ್ತದೆ
Sarkari Naukri: ನೇರ ನೇಮಕಾತಿ, 10ನೇ ತರಗತಿ ಪಾಸ್ ಆದವರಿಗೆ ಸುವರ್ಣಾವಕಾಶ  title=
Oil India Recruitment 2021

ನವದೆಹಲಿ: ಸರ್ಕಾರಿ ಉದ್ಯೋಗ (Sarkari Naukri) ಉತ್ತಮ ಅವಕಾಶಕ್ಕಾಗಿ ಕಾಯುತ್ತಿರುವವರಿಗೆ ಇಲ್ಲಿದೆ ಗುಡ್ ನ್ಯೂಸ್. ಫಿಶಿಂಗ್ ಆಪರೇಟರ್, ಎಲ್‌ಪಿಜಿ ಆಪರೇಟರ್, ಡ್ರಿಲ್ಲಿಂಗ್ / ವರ್ಕ್‌ಓವರ್ ಅಸಿಸ್ಟೆಂಟ್ ಆಪರೇಟರ್ ಮತ್ತು ಡ್ರಿಲ್ಲಿಂಗ್ / ವರ್ಕ್‌ಓವರ್ ಮೆಕ್ಯಾನಿಕ್ ಹುದ್ದೆಗಳಿಗೆ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡುವ ಮೂಲಕ ಆಯಿಲ್ ಇಂಡಿಯಾ ಅರ್ಜಿಗಳನ್ನು ಆಹ್ವಾನಿಸಿದೆ.

ಈ ಬಗ್ಗೆ ವಿವರವಾದ ಅಧಿಸೂಚನೆಯನ್ನು ಆಯಿಲ್ ಇಂಡಿಯಾ ಅಧಿಕೃತ ವೆಬ್‌ಸೈಟ್ ಆಯಿಲ್-ಇಂಡಿಯಾ.ಕಾಂ (oil-india.com)ನಲ್ಲಿ ನೀಡಿದೆ. ವಾಕ್-ಇನ್ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 2021 ಫೆಬ್ರವರಿ 25 ರಿಂದ ಮಾರ್ಚ್ 22 ರವರೆಗೆ ಸಂದರ್ಶನಕ್ಕೆ ಹಾಜರಾಗಬಹುದು.

ಪೋಸ್ಟ್‌ಗಳ ವಿವರಣೆ

  • ಫಿಶಿಂಗ್ ಆಪರೇಟರ್: 01 ಪೋಸ್ಟ್
  • ಎಲ್‌ಪಿಜಿ (LPG) ಆಪರೇಟರ್: 07 ಪೋಸ್ಟ್ಗಳು
  • ಡ್ರಿಲ್ಲಿಂಗ್ / ವರ್ಕ್‌ಓವರ್ ಆಪರೇಟರ್: 04 ಪೋಸ್ಟ್‌ಗಳು
  • ಡ್ರಿಲ್ಲಿಂಗ್ / ವರ್ಕ್ಓವರ್ ಮೆಕ್ಯಾನಿಕ್: 04 ಪೋಸ್ಟ್‌ಗಳು
  • ಡ್ರಿಲ್ಲಿಂಗ್  / ವರ್ಕ್‌ಓವರ್ ಸಹಾಯಕ ಆಪರೇಟರ್: 32 ಹುದ್ದೆಗಳು
  • ಒಟ್ಟು: 48 ಪೋಸ್ಟ್‌ಗಳು

ಇದನ್ನೂ ಓದಿ - Indian Railway Recruitment 2021: 10, 12ನೇ ತರಗತಿ ಪಾಸ್ ಆದವರಿಗೆ ರೈಲ್ವೆಯಲ್ಲಿ ಉದ್ಯೋಗಾವಕಾಶ

ಶೈಕ್ಷಣಿಕ ವಿದ್ಯಾರ್ಹತೆ :
10 ನೇ ತರಗತಿ ಪಾಸ್ ಆಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ (Govt Jobs) ಅರ್ಜಿ ಅರ್ಹರಾಗಿದ್ದಾರೆ.

ವಯೋಮಿತಿ :
ಸಂದರ್ಶನದಲ್ಲಿ ಭಾಗವಹಿಸಲು ಅಭ್ಯರ್ಥಿಯ ವಯಸ್ಸು 18 ವರ್ಷದಿಂದ 40 ವರ್ಷ ವಯಸ್ಸಿನವರಾಗಿರಬೇಕು. ಅಭ್ಯರ್ಥಿಗಳು ತಮ್ಮ ಹುಟ್ಟಿದ ದಿನಾಂಕದ ಮಾನ್ಯ ಪುರಾವೆಗಳನ್ನು ಸಲ್ಲಿಸಬೇಕಾಗುತ್ತದೆ.

ವೇತನ ಪ್ರಮಾಣ :
ಈ ಹುದ್ದೆಗಳಲ್ಲಿ ಆಯ್ದ ಅಭ್ಯರ್ಥಿಗಳಿಗೆ ಸಂಬಳವೂ ವಿಭಿನ್ನವಾಗಿರುತ್ತದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ 15,700 / - ರಿಂದ 18,400 / - ವರೆಗಿನ ವೇತನ ಪ್ರಮಾಣ ಲಭ್ಯವಿರಲಿದೆ.

ವಾಕ್-ಇನ್ ಸಂದರ್ಶನದ ದಿನಾಂಕಗಳು :

  • ಫಿಶಿಂಗ್ ಆಪರೇಟರ್: 25 ಫೆಬ್ರವರಿ 2021
  • ಎಲ್ಪಿಜಿ ಆಪರೇಟರ್: 01 ಮಾರ್ಚ್ 2021
  • ಡ್ರಿಲ್ಲಿಂಗ್ / ವರ್ಕ್‌ಓವರ್ ಆಪರೇಟರ್: 08 ಮಾರ್ಚ್ 2021
  • ಡ್ರಿಲ್ಲಿಂಗ್ / ವರ್ಕ್ಓವರ್ ಮೆಕ್ಯಾನಿಕ್: 15 ಮಾರ್ಚ್ 2021
  • ಡ್ರಿಲ್ಲಿಂಗ್ / ವರ್ಕ್‌ಓವರ್ ಸಹಾಯಕ ಆಪರೇಟರ್: 22 ಮಾರ್ಚ್ 2021

ಇದನ್ನೂ ಓದಿ - SSC: ಡಿಗ್ರಿ ಆದವರಿಗೆ ಸಿಹಿ ಸುದ್ದಿ: SSC ಯಲ್ಲಿ 6506 ಹುದ್ದೆಗಳ ನೇಮಕಾತಿಗೆ ಅರ್ಜಿ!

ಸಂದರ್ಶನ ಸ್ಥಳ :
ಈ ವಿಳಾಸದಲ್ಲಿ ಅಭ್ಯರ್ಥಿಗಳು ವಾಕ್-ಇನ್ ಸಂದರ್ಶನಕ್ಕೆ ಹಾಜರಾಗಬೇಕಾಗುತ್ತದೆ.
ವಿಳಾಸ: ಸಿಬ್ಬಂದಿ ಕಲ್ಯಾಣ ಕಚೇರಿ,
ನೌಕರರ ಸಂಬಂಧ ಇಲಾಖೆ, ನೆಹರೂ ಮೈದಾನ,
ಆಯಿಲ್ ಇಂಡಿಯಾ ಲಿಮಿಟೆಡ್, ದುಲಿಯಾಜನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News