ಕಾಶ್ಮೀರದ ಭವಿಷ್ಯ ನಿರ್ಧರಿಸಲಿದೆ ನ್ಯಾ.ಎನ್.ವಿ.ರಮಣ ನೇತೃತ್ವದ 'ಸುಪ್ರೀಂ' ಪೀಠ

ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನ ಪೀಠ ಅಕ್ಟೋಬರ್ 1 ರಿಂದ ಜಮ್ಮು ಮತ್ತು ಕಾಶ್ಮೀರ ವಿಚಾರವಾಗಿ ಕೇಂದ್ರದ ನಿರ್ಧಾರಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆ ನಡೆಸಲಿದೆ.

Last Updated : Sep 28, 2019, 05:51 PM IST
ಕಾಶ್ಮೀರದ ಭವಿಷ್ಯ ನಿರ್ಧರಿಸಲಿದೆ ನ್ಯಾ.ಎನ್.ವಿ.ರಮಣ ನೇತೃತ್ವದ 'ಸುಪ್ರೀಂ' ಪೀಠ title=
file photo

ನವದೆಹಲಿ: ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನ ಪೀಠ ಅಕ್ಟೋಬರ್ 1 ರಿಂದ ಜಮ್ಮು ಮತ್ತು ಕಾಶ್ಮೀರ ವಿಚಾರವಾಗಿ ಕೇಂದ್ರದ ನಿರ್ಧಾರಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆ ನಡೆಸಲಿದೆ.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ ಕೇಂದ್ರ ನಿರ್ಧಾರದ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳು ಸುಪ್ರೀಂಕೋರ್ಟ್ ಎದುರು ಬಂದಿದ್ದವು. ಆಗಸ್ಟ್ 28 ರಂದು ಸಿಜೆಐ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠವು ಐದು ನ್ಯಾಯಾಧೀಶರ ಪೀಠಕ್ಕೆ ಅಕ್ಟೋಬರ್‌ನಲ್ಲಿ ವಿಚಾರಣೆಗಾಗಿ ಮನವಿ ಸಲ್ಲಿಸಿತ್ತು. ಈ ಹಿನ್ನಲೆಯಲ್ಲಿ ಈ ವಿಚಾರವಾಗಿ ಅರ್ಜಿ ವಿಚಾರಣೆ ನಡೆಸಲು ನ್ಯಾಯಮೂರ್ತಿ ರಮಣ ನೇತೃತ್ವದ ನ್ಯಾಯಪೀಠ ರಚಿಸಲಾಗಿತ್ತು. 

ಇನ್ನೊಂದೆಡೆಗೆ ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಎದುರು ಬಂದಿದ್ದ ಅರ್ಜಿಗಳನ್ನು ಪರಿಗಣಿಸದಿರುವಂತೆ ಮನವಿ ಮಾಡಿತ್ತು, ಏಕೆಂದರೆ ಇದು ಗಡಿಯಾಚೆಗಿನ ಪರಿಣಾಮವನ್ನು ಬೀರಲಿದೆ ಎಂದು ಕೇಂದ್ರ ಸುಪ್ರೀಂಕೋರ್ಟ್ ಗೆ ತಿಳಿಸಿತ್ತು, ಆದರೆ ಈಗ ಸುಪ್ರೀಂಕೋರ್ಟ್ ಕೇಂದ್ರದ ಮನವಿಯನ್ನು ತಿರಸ್ಕರಿಸಿದೆ. ಜಮ್ಮು ಮತ್ತು ಕಾಶ್ಮೀರ ವಿಚಾರವಾಗಿ ಈಗ ಹಲವು ಅರ್ಜಿಗಳನ್ನು ಸಲ್ಲಿಸಲಾಗಿದೆ, ಅದರಲ್ಲಿ ನ್ಯಾಷನಲ್ ಕಾನ್ಸರೆನ್ಸ್ ನ ಸಂಸದರಾದ ಬಾರಾಮುಲ್ಲಾದ ಮೊಹಮ್ಮದ್ ಅಕ್ಬರ್ ಲೋನ್ ಮತ್ತು ಅನಂತ್‌ನಾಗ್‌ನ ಹಸ್ನೈನ್ ಮಸೂಡಿ ಅರ್ಜಿಗಳು ಸೇರಿವೆ.

ಜಮ್ಮು ಮತ್ತು ಕಾಶ್ಮೀರದ ಗೃಹ ಸಚಿವಾಲಯದ ಇಂಟರ್ಲೋಕ್ಯೂಟರ್‌ಗಳ ಮಾಜಿ ಸದಸ್ಯರಾಗಿದ್ದ ರಾಧಾ ಕುಮಾರ್, ಜಮ್ಮು ಮತ್ತು ಕೆ ಮಾಜಿ ಮುಖ್ಯ ಕಾರ್ಯದರ್ಶಿ ಹಿಂದಾಲ್ ಹೈದರ್ ತ್ಯಾಬ್ಜಿ, ನಿವೃತ್ತ ಏರ್ ವೈಸ್ ಮಾರ್ಷಲ್ ಕಪಿಲ್ ಕಾಕ್, ನಿವೃತ್ತ ಮೇಜರ್ ಜನರಲ್ ಅಶೋಕ್ ಕುಮಾರ್ ಮೆಹ್ತಾ , ಭಾರತ ಸರ್ಕಾರದ ಅಂತರರಾಜ್ಯ ಮಂಡಳಿಯ ಮಾಜಿ ಕಾರ್ಯದರ್ಶಿ ಅಮಿತಾಭಾ ಪಾಂಡೆ ಮತ್ತು ಕೇಂದ್ರ ಗೃಹ ಕಾರ್ಯದರ್ಶಿ ಜಿ.ಕೆ.ಪಿಳ್ಳೈ ಕೂಡ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

Trending News