Justice NV Ramana Next CJI: ನ್ಯಾ. N.V.ರಮಣ ದೇಶದ ಮುಂದಿನ CJI, ಏಪ್ರಿಲ್ 24ಕ್ಕೆ ಅಧಿಕಾರ ಸ್ವೀಕಾರ

Justice NV Ramana Next CJI - ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾದ S.A. ಬೋಬ್ದೆ ಬರುವ ಏಪ್ರಿಲ್ 23, 2021 ರಂದು CJI ಹುದ್ದೆಯಿಂದ ನಿವೃತ್ತರಾಗುತ್ತಿದ್ದಾರೆ. ಇನ್ನೊಂದೆಡೆ ನ್ಯಾಯಮೂರ್ತಿ ರಮಣ 26 ಆಗಸ್ಟ್ 2022 ರಂದು ಸೇವಾ ನಿವೃತ್ತಿ ಹೊಂದುತ್ತಿದ್ದಾರೆ.

Written by - Nitin Tabib | Last Updated : Apr 6, 2021, 01:43 PM IST
  • ಜಸ್ಟಿಸ್ ಎನ್.ವಿ. ರಮಣ ಭಾರತದ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆ.
  • ಅವರನ್ನು ಸುಪ್ರಿಂನ 48ನೆ ಮುಖ್ಯ ನ್ಯಾಯಮೂರ್ತಿಯನ್ನಾಗಿ ಘೋಷಿಸಿದ ರಾಷ್ಟ್ರಪತಿ ರಾಮನಾಥ್ ಕೊವಿಂದ್.
  • ಏಪ್ರಿಲ್ 24 ರಂದು ಅಧಿಕಾರ ಸ್ವೀಕಾರ.
Justice NV Ramana Next CJI: ನ್ಯಾ. N.V.ರಮಣ ದೇಶದ ಮುಂದಿನ CJI, ಏಪ್ರಿಲ್ 24ಕ್ಕೆ ಅಧಿಕಾರ ಸ್ವೀಕಾರ title=
New Chief Justice Of India (Photo Courtesy-PIB Twitter)

ನವದೆಹಲಿ: Justice NV Ramana Next CJI - ನ್ಯಾಯಮೂರ್ತಿ ನೂಥಲಪತಿ ವೆಂಕಟ ರಮಣ (Nuthalapati Venkata Ramana) ಅವರನ್ನು ಮಂಗಳವಾರ ಭಾರತದ ಮುಂದಿನ ಮುಖ್ಯ ನ್ಯಾಯಾಧೀಶರನ್ನಾಗಿ ನಿಯುಕ್ತಿ ಮಾಡಲಾಗಿದೆ. ಈ ಕುರಿತು ಸರ್ಕಾರ ಹೊರಡಿಸಿರುವ ಅಧಿಸೂಚನೆ ಪ್ರಕಾರ ನ್ಯಾಯ ಮೂರ್ತಿ NV ರಮಣ ಏಪ್ರಿಲ್ 24ರಂದು ಭಾರತದ 48ನೆ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸಲಿದ್ದು, ಹಾಲಿ CJI ಶರದ್ ಅರವಿಂದ್ ಬೋಬ್ದೆ (CJI Sharad Arvind Bobde)ಅವರಿಂದ ಖಾಲಿ ಆಗಲಿರುವ ಜಾಗವನ್ನು ತುಂಬಲಿದ್ದಾರೆ. ನ್ಯಾಯಮೂರ್ತಿ ಬೋಬ್ದೆ, ಏಪ್ರಿಲ್ 23 ರಂದು ನಿವೃತ್ತರಾಗಲಿದ್ದು ಅವರು ಪದತ್ಯಾಗ ಮಾಡಲಿದ್ದಾರೆ. ಫೆಬ್ರುವರಿ 17, 2014 ರಲ್ಲಿ ಸುಪ್ರೀಂ ಕೋರ್ಟ್ (Supreme Court Of India) ನ ನ್ಯಾಯಾಧೀಶರಾಗಿ ನಿಯುಕ್ತರಾದ NV ರಮಣ ಆಗಸ್ಟ್ 26, 2022ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.

ಇದನ್ನೂ ಓದಿ-SC Ruling on Women Army Officers - ಸೇನೆಯಲ್ಲಿ ಮಹಿಳೆಯರ ಶಾಶ್ವತ ಆಯೋಗ, Supreme Court ನಿಂದ ತೀಕ್ಷ್ಣ ಟಿಪ್ಪಣಿ

ಇದನ್ನೂ ಓದಿ-Loan Moratorium: ಸಂಪೂರ್ಣ ಸಾಲಮನ್ನಾ ಸಾಧ್ಯವಿಲ್ಲ, Moratorium ಅವಧಿ ವಿಸ್ತರಣೆಯೂ ಸುಪ್ರೀಂ ನಕಾರ

NV ರಮಣ (Justice NV Ramana)ಕುರಿತಾದ ಸಂಕ್ಷಿಪ್ತ ಮಾಹಿತಿ
ಆಗಸ್ಟ್ 27, 1957ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೋನ್ನಾವರಂ ಗ್ರಾಮದ ಓರ್ವ ರೈತ ಕುಟುಂಬದಲ್ಲಿ ಜನಿಸಿರುವ ನೂಥಲಪತಿ ವೆಂಕಟ ರಮಣ ಫೆಬ್ರುವರಿ 10, 1983ರಂದು ವಕೀಲರಾಗಿ ಸನದು ಸ್ವೀಕರಿಸಿ, ಆಂಧ್ರಪ್ರದೇಶದ ಹೈ ಕೋರ್ಟ್ ನಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿದಾರೆ. ಬಳಿಕ ಜೂನ್ 27, 2000ಕ್ಕೆ ಅವರು ಆಂಧ್ರಪ್ರದೇಶದ ಉಚ್ಛನ್ಯಾಯಾಲಯದ ಸ್ಥಾಯಿ ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು. ಬಳಿಕ ಸೆಪ್ಟೆಂಬರ್ 2, 2013 ರಲ್ಲಿ ಅವರು ದೆಹಲಿ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಯಿತು ಮತ್ತು ಫೆಬ್ರುವರಿ 17, 2014 ರಲ್ಲಿ ಅವರು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ಆಯ್ಕೆಗೊಂಡರು

ಇದನ್ನೂ ಓದಿ-ಸಿಜೆಐ ಎಸ್ ಎ ಬೋಬ್ದೆ ಉತ್ತರಾಧಿಕಾರಿಯನ್ನು ಶಿಫಾರಸ್ಸು ಮಾಡಲು ಕೇಳಿದ ಸರ್ಕಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News