ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಭೇಟಿ ಮಾಡಿದ ಕಾಮಿಡಿ ಕಿಂಗ್ ಕಪಿಲ್ ಶರ್ಮಾ

ಕಿರುತೆರೆಯಲ್ಲಿ ತಮ್ಮ ಕಾಮಿಡಿ ಶೋನಿಂದಲೇ ಸಾಕಷ್ಟು ಖ್ಯಾತಿ ಗಳಿಸಿರುವ ಕಪಿಲ್ ಶರ್ಮಾ ಈಗ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಅವರ ಪತ್ನಿ ಗುರುಶರಣ್ ಕೌರ್ ಅವರನ್ನು ಭೇಟಿ ಮಾಡಿದ್ದಾರೆ.

Last Updated : Feb 5, 2019, 06:28 PM IST
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಭೇಟಿ ಮಾಡಿದ ಕಾಮಿಡಿ ಕಿಂಗ್ ಕಪಿಲ್ ಶರ್ಮಾ title=
photo:ANI

ನವದೆಹಲಿ: ಕಿರುತೆರೆಯಲ್ಲಿ ತಮ್ಮ ಕಾಮಿಡಿ ಶೋನಿಂದಲೇ ಸಾಕಷ್ಟು ಖ್ಯಾತಿ ಗಳಿಸಿರುವ ಕಪಿಲ್ ಶರ್ಮಾ ಈಗ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಅವರ ಪತ್ನಿ ಗುರುಶರಣ್ ಕೌರ್ ಅವರನ್ನು ಭೇಟಿ ಮಾಡಿದ್ದಾರೆ.

ಈಗ ಭೇಟಿ ಮಾಡಿದ ನಂತರ ಟ್ವಿಟ್ಟರ್ ನಲ್ಲಿ ಫೋಟೋ ಶೇರ್ ಮಾಡಿಕೊಂಡಿರುವ ಕಪಿಲ್ ಶರ್ಮಾ "ಧನ್ಯವಾದಗಳು ಮನಮೋಹನ್ ಸಿಂಗ್ ಜಿ ನಿಮ್ಮ ಆತಿಥ್ಯಕ್ಕೆ ,ನಮ್ಮ ನಡುವಿನ ಮುಕ್ತ ಮಾತುಕತೆಗೆ ಮತ್ತು ನಮ್ಮ ಅಮೃತಸರದ ಮೂಲದ ಬಗ್ಗೆ, ಕಾಲೇಜ್ ಹಾಗೂ ಅಲ್ಲಿನ ಫುಡ್ ಬಗ್ಗೆ ಚರ್ಚೆ ಮಾಡಿದ್ದಕ್ಕೆ, ನಿಮ್ಮಂತ ಸರಳ ಸ್ಟೇಟ್ಸ್ ಮನ್ ರನ್ನು ಭೇಟಿ ಮಾಡಿದ್ದು ನಿಜಕ್ಕೂ ಗೌರವದ ಸಂಗತಿ ಮತ್ತು ಮೇಡಂ ಅವರ ಆಶೀರ್ವಾದವನ್ನು ಪಡೆದಿದ್ದು ಕೂಡ ವಿಶೇಷ" ಎನ್ನುವಂತೆ ಅವರು ಟ್ವೀಟ್ ಮಾಡಿದ್ದಾರೆ   

ಕೆಲವು ದಿನಗಳ ಹಿಂದೆ ಕಪಿಲ್ ಶರ್ಮಾ ಪ್ರಧಾನಿ ನರೇಂದ್ರ ಮೋದಿ ಮುಂಬೈಯಲ್ಲಿ ನಡೆದ ಭಾರತೀಯ ಸಿನಿಮಾದ ರಾಷ್ಟ್ರೀಯ ಮ್ಯೂಸಿಯಂ ಉದ್ಘಾಟನಾ ಸಮಾರಂಭದಲ್ಲಿ ಭೇಟಿಯಾಗಿದ್ದರು.ಆ ಉದ್ಘಾಟನಾ ಸಮಾರಂಭದಲ್ಲಿ ಹಲವು ಬಾಲಿವುಡ್ ನಟರು ಉಪಸ್ಥಿತರಿದ್ದರು.

Trending News