ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಬಗ್ಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಆಯುಷ್ಮಾನ್ ಕುರಾನಾ...!

 ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಈಗ ಬಾಲಿವುಡ್ ನಲ್ಲಿ ಬಿರುಗಾಳಿ ಎಬ್ಬಿಸಿದೆ. ಬಹುತೇಕರು ನಿರ್ದೇಶಕರು ಕೇವಲ ಸ್ಟಾರ್ ಮಕ್ಕಳಿಗೆ ಮಾತ್ರ ಹೆಚ್ಚಿನ ಆಧ್ಯತೆ ನೀಡುತ್ತಾರೆ ಎಂದು ಆರೋಪಿಸಲಾಗಿದೆ ಅದರಲ್ಲೂ ಕರಣ್ ಜೋಹರ್ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಟೀಕೆಗಳನ್ನು ಎದುರಿಸುತ್ತಿದ್ದಾರೆ.

Last Updated : Jun 18, 2020, 05:59 PM IST
ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಬಗ್ಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಆಯುಷ್ಮಾನ್ ಕುರಾನಾ...! title=

ನವದೆಹಲಿ: ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಈಗ ಬಾಲಿವುಡ್ ನಲ್ಲಿ ಬಿರುಗಾಳಿ ಎಬ್ಬಿಸಿದೆ. ಬಹುತೇಕರು ನಿರ್ದೇಶಕರು ಕೇವಲ ಸ್ಟಾರ್ ಮಕ್ಕಳಿಗೆ ಮಾತ್ರ ಹೆಚ್ಚಿನ ಆಧ್ಯತೆ ನೀಡುತ್ತಾರೆ ಎಂದು ಆರೋಪಿಸಲಾಗಿದೆ ಅದರಲ್ಲೂ ಕರಣ್ ಜೋಹರ್ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಟೀಕೆಗಳನ್ನು ಎದುರಿಸುತ್ತಿದ್ದಾರೆ.

ಇದಕ್ಕೆ ಪೂರಕವಾಗಿ ನಟ ಆಯುಷ್ಮಾನ್ ಖುರಾನಾ ಅವರ 2015 ರ ಪುಸ್ತಕದಿಂದ ಅವರು ಹೇಗೆ ನಟರಾದರು ಎಂಬುದರ ಕುರಿತು ಆಯ್ದ ಭಾಗವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಕರಣ್ ಜೋಹರ್ ಕಚೇರಿ ತಾವು ಕೇವಲ ಸ್ಟಾರ್ ನಟರ ಜೊತೆ ಮಾತ್ರ ಕೆಲಸ ಮಾಡುವುದು ಎಂದು ಹೇಳಿರುವುದನ್ನು ಬರೆದುಕೊಂಡಿದ್ದಾರೆ.

ಕ್ರ್ಯಾಕಿಂಗ್ ದಿ ಕೋಡ್: ಮೈ ಜರ್ನಿ ಇನ್ ಬಾಲಿವುಡ್‌ ಎಂಬ ತನ್ನ ಪುಸ್ತಕದಲ್ಲಿ ಆಯುಷ್ಮಾನ್ ಖುರಾನಾ ಅವರು ರೇಡಿಯೋ ಜಾಕಿಯಾಗಿ ಕೆಲಸ ಮಾಡುವಾಗ ಒಮ್ಮೆ ಕರಣ್ ಜೋಹರ್ ಅವರನ್ನು ಸಂದರ್ಶಿಸಿದ್ದರು ಎಂದು ಬಹಿರಂಗಪಡಿಸಿದ್ದಾರೆ; ನಂತರ, ಅವರು ಜೋಹರ್ ಅವರ ನಟನೆಯ ಮಹತ್ವಾಕಾಂಕ್ಷೆಯ ಬಗ್ಗೆ ಹೇಳಿದರು ಮತ್ತು ಅವರ ಸಂಖ್ಯೆಯನ್ನು ಕೇಳಿದ್ದಕ್ಕೆ ಲ್ಯಾಂಡ್ ಲೈನ್ ಸಂಖ್ಯೆಯನ್ನು ನೀಡಿದರು.

ಇದನ್ನೂ ಓದಿ: #Don'tSayBhangi : ಭಂಗಿ ಎಂದು ಕರೆಯದಂತೆ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಮನವಿ

'ನಾನು ಅವರನ್ನು ಭೇಟಿಯಾದಾಗ ಕರಣ್ ನನಗೆ ಅವರ ಕಚೇರಿಗೆ ಲ್ಯಾಂಡ್‌ಲೈನ್ ಸಂಖ್ಯೆಯನ್ನು ಕೊಟ್ಟರು. ನಾನು ಆಗಲೇ ತಿಳಿದುಕೊಳ್ಳಬೇಕಾಗಿತ್ತು. ಆದರೆ ನಾನು ತುಂಬಾ ಉತ್ಸುಕನಾಗಿದ್ದೆ! ನಾನು ಯಾವಾಗ ಕರೆ ಮಾಡಬೇಕೆಂದು ನಿಖರವಾಗಿ ಯೋಜಿಸಿದೆ: ಕೆಲವೊಮ್ಮೆ ಬೆಳಿಗ್ಗೆ 11: 30 ರ ಸುಮಾರಿಗೆ,ಆದರೆ ಆಗ ಅವರು ಅವರು ಉಪಾಹಾರ ಮುಗಿಸಿರುತ್ತಾರೆ.ಆಗ ಸಾಕಷ್ಟು ಸಮಯ ಲಬ್ಯವಿರುತ್ತದೆ 'ಎಂದು ಖುರಾನಾ ಬರೆಯುತ್ತಾರೆ.

'ಮರುದಿನ ಅವರು ನನಗೆ ನೀಡಿದ ಸಂಖ್ಯೆಯನ್ನು ನಾನು ಡಯಲ್ ಮಾಡಿದೆ. ಕರಣ್ ಅವರು ಕಚೇರಿಯಲ್ಲಿಲ್ಲ ಎಂದು ಅವರು ಹೇಳಿದರು. ಅದರ ನಂತರದ ದಿನ ನಾನು ಮತ್ತೆ ಕರೆ ಮಾಡಿದೆ. ವರು ಬ್ಯುಸಿಯಾಗಿದ್ದಾರೆ ಎಂದು ಅವರು ಹೇಳಿದರು. ಅಂತಿಮವಾಗಿ, ಅವರು 'ನಾವು ಸ್ಟಾರ್ ಗಳೊಂದಿಗೆ ಮಾತ್ರ ಕೆಲಸ ಮಾಡುತ್ತೇವೆ ಮತ್ತು ನಿಮ್ಮೊಂದಿಗೆ ಕೆಲಸ ಮಾಡಲು ಸಾಧ್ಯವಿಲ್ಲ' ಎಂದು ಅವರು ಸ್ಪಷ್ಟವಾಗಿ ಹೇಳಿದರು.

ಬಾಲಿವುಡ್ ನಲ್ಲಿ ನಡೆಯುತ್ತಿರುವ ಸ್ವಜನಪಕ್ಷಪಾತದ ಕುರಿತಾಗಿ ಮತ್ತೆ ಚರ್ಚೆ ಎದ್ದಿರುವ ಬೆನ್ನಲ್ಲೇ ಈ ಭಾಗ ವೈರಲ್ ಆಗಿದೆ.
 

Trending News