ನವದೆಹಲಿ: ಬೆಂಗಳೂರು ಮತ್ತು ಇತರ ಆರು ನಗರಗಳಲ್ಲಿ ಶನಿವಾರದಿಂದ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗುವುದು ಎಂದು ರಾಜ್ಯ ಸರ್ಕಾರ ಗುರುವಾರದಂದು ಘೋಷಿಸಿದೆ.
ಇದನ್ನೂ ಓದಿ: ವಿಮಾನಯಾನ ಕಂಪನಿಗಳ ಕ್ರಮಕ್ಕೆ ಸರ್ಕಾರದ ಖಂಡನೆ ; ಲಾಕ್ ಡೌನ್ ವೇಳೆ ರದ್ದಾದ ಟಿಕೆಟ್ ದರ ಮರುಪಾವತಿಗೆ ಸೂಚನೆ
ಪ್ರಧಾನಿ ನರೇಂದ್ರ ಮೋದಿ ಅವರು ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ನಿಭಾಯಿಸಲು ಹೊಸ ನಿರ್ಬಂಧಗಳನ್ನು ಘೋಷಿಸುವಂತೆ ರಾಜ್ಯಗಳನ್ನು ಒತ್ತಾಯಿಸಿದರು.ಏಪ್ರಿಲ್ 20 ರವರೆಗೆ ಜಾರಿಯಲ್ಲಿರುವ ಕರ್ಫ್ಯೂ ಮೈಸೂರು, ಮಂಗಳೂರು, ಕಲಬುರಗಿ, ಬೀದರ್, ತುಮಕುರು ಮತ್ತು ಮಣಿಪಾಲದಲ್ಲೂ ಹೇರಲಾಗುವುದು ಎಂದು ಮಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದರು. ಇದೆ ವೇಳೆ ಎಂದಿನಂತೆ ಅಗತ್ಯ ಸೇವೆಗಳು ಮುಂದುವರಿಯಲಿವೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಕೊರೊನಾ ನಿಯಂತ್ರಣಕ್ಕೆ ರಾಜ್ಯಗಳಿಗೆ ಪಂಚಸೂತ್ರವನ್ನಿತ್ತ ಪ್ರಧಾನಿ ಮೋದಿ
ಅತಿ ಹೆಚ್ಚಿನ ಕೊರೊನಾ ಪ್ರಕರಣಗಳನ್ನು ಹೊಂದಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರ, ಛತ್ತೀಸ್‌ಗಡ, ಉತ್ತರ ಪ್ರದೇಶ, ದೆಹಲಿ, ಮಧ್ಯಪ್ರದೇಶ, ತಮಿಳುನಾಡು, ಗುಜರಾತ್, ಕೇರಳ ಮತ್ತು ಪಂಜಾಬ್‌ನ ಹೊರತಾಗಿ 10 ರಾಜ್ಯಗಳಲ್ಲಿ ಕರ್ನಾಟಕವೂ ಸೇರಿದೆ, ಇದು ದೈನಂದಿನ COVID-19 ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡಿದೆ.ಭಾರತದ COVID-19 ಪ್ರಕರಣಗಳು ಕೇವಲ ಎರಡು ತಿಂಗಳಲ್ಲಿ 13 ಪಟ್ಟು ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ಜನರು ತೋರಿಸುತ್ತಿರುವ ನಿರ್ಲಕ್ಷ್ಯವೇ ಕೊರೊನಾ ಪ್ರಕರಣಗಳ ಹೆಚ್ಚಳಕ್ಕೆ ಕಾರಣ ಎಂದು ವೈದಕೀಯ ತಜ್ಞರು ತಿಳಿಸಿದ್ದಾರೆ.ದೇಶದಲ್ಲಿ ಈಗಾಗಲೇ ಪ್ರತಿದಿನಕ್ಕೆ ಒಂದು ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ.
ಇದನ್ನೂ ಓದಿ: Bengaluru in Section 144: ಬೆಂಗಳೂರಿನಲ್ಲಿ ಸೆಕ್ಷನ್ 144 ಜಾರಿ! ಜಿಮ್, ಸ್ವಿಮಿಂಗ್ ಫೂಲ್ ಏಪ್ರಿಲ್ 20 ರವರೆಗೆ ಬಂದ್!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.