ಪತಿ ಸಾವಿನ ಚಿಂತೆಯಲ್ಲೇ ಆಸ್ಪತ್ರೆ ಸೇರಿದ ಕರುಣಾನಿಧಿ ಪತ್ನಿ

ಅನಾರೋಗ್ಯದಿಂದಾಗಿ ಬಳಲುತ್ತಿದ್ದ ದಯಾಳು ಅಮ್ಮಾಲ್ ಅವರನ್ನು ಮಂಗಳವಾರ ರಾತ್ರಿ 9 ಗಂಟೆ ಸಮಯದಲ್ಲಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.

Last Updated : Aug 29, 2018, 12:02 PM IST
ಪತಿ ಸಾವಿನ ಚಿಂತೆಯಲ್ಲೇ ಆಸ್ಪತ್ರೆ ಸೇರಿದ ಕರುಣಾನಿಧಿ ಪತ್ನಿ title=

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಕರುಣಾನಿಧಿ ಅವರ ಸಾವಿನ ಬೆನ್ನಲೇ ಅವರ ಪತ್ನಿ ದಯಾಳು ಅಮ್ಮಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಅನಾರೋಗ್ಯದಿಂದಾಗಿ ಬಳಲುತ್ತಿದ್ದ ದಯಾಳು ಅಮ್ಮಾಲ್ ಅವರನ್ನು ಮಂಗಳವಾರ ರಾತ್ರಿ 9 ಗಂಟೆ ಸಮಯದಲ್ಲಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅವರ ಆರೋಗ್ಯ ಸ್ಥಿತಿಯ ಬಗ್ಗೆ ಯಾವುದೇ ಹೆಚ್ಚುವರಿ ಮಾಹಿತಿ ಲಭ್ಯವಾಗಿಲ್ಲ. 

ದಯಾಳು ಅಮ್ಮಲ್ ಅವರು ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರ ತಾಯಿ. ದಿವಂಗತ ಡಿಎಂಕೆ ನಾಯಕ ಕರುಣಾನಿಧಿ ಅವರ ಎರಡನೇ ಪತ್ನಿ. ಎಂ.ಕೆ.ಅಲಗಿರಿ, ಎಂ.ಕೆ. ತಮಿಳರಸು ಮತ್ತು ಎಂ.ಕೆ. ಸೆಲ್ವಿ ಅವರ ತಾಯಿ ಕೂಡ. 

ಇತ್ತೀಚೆಗಷ್ಟೇ, ಬಹು ಅಂಗಾಂಗ ವೈಫಲ್ಯದಿಂದ ಎಂ.ಕರುಣಾನಿಧಿ ಅವರು ಚೆನ್ನೈನ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.

Trending News