ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ 'ಕೈ'ಹಿಡಿದ ಸಂಸದ ಕೀರ್ತಿ ಆಜಾದ್

ದರ್ಭಂಗಾ ಸಂಸದ ಹಾಗೂ ಮಾಜಿ ಕ್ರಿಕೆಟ್ ಆಟಗಾರ ಕೀರ್ತಿ ಆಜಾದ್ ಸೋಮವಾರದಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಆಜಾದ್ ಅವ್ರು ಇತ್ತೀಚಿಗಷ್ಟೇ ಬಿಜೆಪಿಯಿಂದ ಅವರನ್ನು ಉಚ್ಚಾಟಿಸಲಾಗಿತ್ತು ಈ ಹಿನ್ನಲೆಯಲ್ಲಿ ಈಗ ಅವರು ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

Last Updated : Feb 18, 2019, 01:53 PM IST
ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ 'ಕೈ'ಹಿಡಿದ ಸಂಸದ ಕೀರ್ತಿ ಆಜಾದ್  title=
Photo courtesy: Twitter

ನವದೆಹಲಿ: ದರ್ಭಂಗಾ ಸಂಸದ ಹಾಗೂ ಮಾಜಿ ಕ್ರಿಕೆಟ್ ಆಟಗಾರ ಕೀರ್ತಿ ಆಜಾದ್ ಸೋಮವಾರದಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಆಜಾದ್ ಅವ್ರು ಇತ್ತೀಚಿಗಷ್ಟೇ ಬಿಜೆಪಿಯಿಂದ ಅವರನ್ನು ಉಚ್ಚಾಟಿಸಲಾಗಿತ್ತು ಈ ಹಿನ್ನಲೆಯಲ್ಲಿ ಈಗ ಅವರು ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಇದೇ ಫೆ.15 ರಂದೇ ಅವರು ಕಾಂಗ್ರೆಸ್ ಪಕ್ಷವನ್ನು ಸೇರಬೇಕಾಗಿತ್ತು ಆದರೆ ಪುಲ್ವಾಮಾ ಘಟನೆಯಾದ ನಂತರ ಸೈನಿಕರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಪಕ್ಷ ಸೇರ್ಪಡೆ ದಿನಾಂಕವನ್ನು ಮುಂದೂಡಿದರು.ಈಗ ಪಕ್ಷಕ್ಕೆ ಸೇರ್ಪಡೆಯಾದ ನಂತರ ಟ್ವೀಟ್ ಮಾಡಿರುವ ಕೀರ್ತಿ ಆಜಾದ್ " ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದೆ. ಪುಲ್ವಾಮಾ ದಾಳಿಯಲ್ಲಿ ಸೈನಿಕರು ಹುತಾತ್ಮರಾದ ಕಾರಣ  ದೇಶವು 3 ದಿನಗಳ ಕಾಲ ಶೋಕಾಚರಣೆಯಲ್ಲಿತ್ತು ವ್ಯಕ್ತಿ ಹಾಗೂ ಪಕ್ಷಕ್ಕಿಂತ ದೇಶ ಮತ್ತು ಸೈನಿಕರು ದೊಡ್ಡವರು ಎಂದು ಟ್ವೀಟ್ ಮಾಡಿದ್ದಾರೆ.

ಕೀರ್ತಿ ಆಜಾದ್ ಆವರು ಕೇಂದ್ರ ಮಂತ್ರಿ ಡಿಡಿಸಿಎ ನೇತೃತ್ವವಹಿಸಿದ್ದ ಸಂದರ್ಭದಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಬಹಿರಂಗವಾಗಿ ಜೈಟ್ಲಿಯವರನ್ನು ಟೀಕಿಸಿದ್ದರು.ಇದಕ್ಕೆ ಕಾಂಗ್ರೆಸ್ ಕೂಡ ಆಜಾದ್ ರಿಗೆ  ಬೆಂಬಲ ನೀಡಿತ್ತು. ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಶಕೀಲ್ ಅಹಮದ್ ಮಾತನಾಡಿ " ಅವರು ಕಾಂಗ್ರೆಸ್  ಪಕ್ಷವನ್ನು ಸೇರಬೇಕು,ಅವರ ತಂದೆ ಕಾಂಗ್ರೆಸ್ಸಿಗರಾಗಿದ್ದರು,ಅವರ ನರನಾಡಿಯಲ್ಲಿ ಕಾಂಗ್ರೆಸ್ ನ ರಕ್ತ ಹರಿಯುತ್ತಿದೆ ಎಂದು ಹೇಳಿದ್ದರು.

Trending News