ಲಾಲ್ ಬಹಾದ್ದೂರ್ ಶಾಸ್ತ್ರಿ: ರಾಷ್ಟ್ರೀಯ ಭದ್ರತೆಯ ಅಗ್ರ ಪ್ರತಿಪಾದಕ

Lal Bahadur Shastri : ಅಕ್ಟೋಬರ್ 2, 1904ರಂದು, ಉತ್ತರ ಪ್ರದೇಶದ ಮುಘಲ್‌ಸರಾಯ್‌ನಲ್ಲಿ ಶಾಸ್ತ್ರಿಯವರು ಜನಿಸಿದರು.‌ ಅವರು ಸಣ್ಣ ವಯಸ್ಸಿಗೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ, ಮಹಾತ್ಮಾ ಗಾಂಧಿಯವರ ಬೆಂಬಲಿಗರಾದರು.  

Written by - Girish Linganna | Last Updated : Oct 2, 2023, 12:59 PM IST
  • ಭಾರತದ ಎರಡನೆಯ ಪ್ರಧಾನ ಮಂತ್ರಿ
  • ರಾಷ್ಟ್ರೀಯ ಭದ್ರತೆಯ ಅಗ್ರ ಪ್ರತಿಪಾದಕ
  • ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನ್ಮದಿನ
ಲಾಲ್ ಬಹಾದ್ದೂರ್ ಶಾಸ್ತ್ರಿ: ರಾಷ್ಟ್ರೀಯ ಭದ್ರತೆಯ ಅಗ್ರ ಪ್ರತಿಪಾದಕ  title=
ಲಾಲ್ ಬಹಾದ್ದೂರ್ ಶಾಸ್ತ್ರಿ

Lal Bahadur Shastri Jayanti : ಭಾರತದ ಎರಡನೆಯ ಪ್ರಧಾನ ಮಂತ್ರಿಯಾದ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಭಾರತದ ರಕ್ಷಣೆ ಮತ್ತು ಭದ್ರತಾ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದರು. ಅಕ್ಟೋಬರ್ 2, 1904ರಂದು, ಉತ್ತರ ಪ್ರದೇಶದ ಮುಘಲ್‌ಸರಾಯ್‌ನಲ್ಲಿ ಶಾಸ್ತ್ರಿಯವರು ಜನಿಸಿದರು.‌ ಅವರು ಸಣ್ಣ ವಯಸ್ಸಿಗೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ, ಮಹಾತ್ಮಾ ಗಾಂಧಿಯವರ ಬೆಂಬಲಿಗರಾದರು. ಅವರು ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಮತ್ತು ಸ್ವತಂತ್ರ ಭಾರತದಲ್ಲಿ ಗೃಹ ಸಚಿವ, ವಿದೇಶಾಂಗ ವ್ಯವಹಾರಗಳ ಸಚಿವ, ರೈಲ್ವೇ ಸಚಿವ ಸೇರಿದಂತೆ ವಿವಿಧ ಸ್ಥಾನಗಳನ್ನು, ಜವಾಬ್ದಾರಿಗಳನ್ನು ಅಲಂಕರಿಸಿದ್ದರು.

ಭಾರತದ ರಕ್ಷಣೆಗೆ ಸಂಬಂಧಿಸಿದಂತೆ ಶಾಸ್ತ್ರಿಯವರ ನಿರ್ಣಾಯಕ ನಾಯಕತ್ವಕ್ಕೆ 1965ರ ಭಾರತ - ಪಾಕಿಸ್ತಾನ ಯುದ್ಧ ಸೂಕ್ತ ಉದಾಹರಣೆಯಾಗಿದೆ. ಪಾಕಿಸ್ತಾನ ಆಪರೇಶನ್ ಗಿಬ್ರಾಲ್ಟರ್ ಅನ್ನು ಆರಂಭಿಸಿದಾಗ, ಭಾರತ ಪಾಕಿಸ್ತಾನಗಳ ನಡುವೆ ಯುದ್ಧ ಆರಂಭಗೊಂಡಿತು. ಆಪರೇಶನ್ ಗಿಬ್ರಾಲ್ಟರ್ ಹೆಸರಿನಲ್ಲಿ, ಪಾಕಿಸ್ತಾನ ಶಸ್ತ್ರಸಜ್ಜಿತ ಉಗ್ರಗಾಮಿಗಳನ್ನು ಜಮ್ಮು ಕಾಶ್ಮೀರದ ಒಳಗೆ ನುಗ್ಗಿಸಿ, ಭಾರತೀಯ ಆಡಳಿತದ ವಿರುದ್ಧ ದಂಗೆ ಆರಂಭಿಸಲು ಪ್ರಯತ್ನಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಲಾಲ್ ಬಹದ್ದೂರ್ ಶಾಸ್ತ್ರಿಯವರು ಭಾರತೀಯ ಸೇನೆಗೆ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ, ಪಾಕಿಸ್ತಾನದ ಪಶ್ಚಿಮ ಪಂಜಾಬ್ ಪ್ರಾಂತ್ಯದ ಲಾಹೋರ್ ಮತ್ತು ಸಿಯಾಲ್‌ಕೋಟ್‌ಗೆ ನುಗ್ಗಲು ಆದೇಶಿಸಿದರು. ಈ ಪ್ರತಿಕ್ರಿಯೆ ಪಾಕಿಸ್ತಾನಕ್ಕೆ ಆಶ್ಚರ್ಯಕರವಾಗಿ ಪರಿಣಮಿಸಿತ್ತು. ಅದರೊಡನೆ, ಪಾಕಿಸ್ತಾನದ ಮೇಲೆ ಅಪಾರ ಒತ್ತಡವನ್ನೂ ಹೇರಿತ್ತು. ಪಾಕಿಸ್ತಾನ ಕಾಶ್ಮೀರದಿಂದ ತನ್ನ ಸೇನೆಯನ್ನು ಹಿಂದಕ್ಕೆ ತಂದು, ತನ್ನ ಪ್ರದೇಶಗಳನ್ನು ರಕ್ಷಿಸುವ ಅನಿವಾರ್ಯತೆ ಎದುರಿಸಿತ್ತು. ಸೇನಾಪಡೆಯ ಬೆಂಬಲಕ್ಕಾಗಿ ಶಾಸ್ತ್ರಿಯವರು ಭಾರತೀಯ ವಾಯುಪಡೆ ಮತ್ತು ನೌಕಾಪಡೆಯನ್ನೂ ನಿಯೋಜಿಸಿದ್ದರು. ಅವರು ತನ್ನ ಜನಪ್ರಿಯ ಘೋಷವಾಕ್ಯವಾದ 'ಜೈ ಜವಾನ್, ಜೈ ಕಿಸಾನ್' ಮೂಲಕ ರಾಷ್ಟ್ರವನ್ನು ಒಗ್ಗೂಡಿಸಿದರು. ಅವರ ಘೋಷವಾಕ್ಯ ರಾಷ್ಟ್ರದ ಭದ್ರತೆ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಸೇನೆ ಮತ್ತು ಕೃಷಿ ಎರಡೂ ವಲಯಗಳು ಅತ್ಯಂತ ಮುಖ್ಯ ಎಂದು ಸೂಚಿಸಿತ್ತು.

ಇದನ್ನೂ ಓದಿ: ಭಾರತದ ಕರೆನ್ಸಿಯಲ್ಲಿ ಹಸನ್ಮುಖಿ ಗಾಂಧೀಜಿ ಭಾವಚಿತ್ರ: ಇದರ ಹಿಂದಿದೆ ಸ್ವಾರಸ್ಯಕರ ಸಂಗತಿ

ಶಾಸ್ತ್ರಿಯವರ ರಕ್ಷಣಾ ನೀತಿ 1962ರ ಭಾರತ - ಚೀನಾ ಯುದ್ಧದಿಂದ ಪ್ರಭಾವ ಪಡೆದಿತ್ತು. 1962ರ ಯುದ್ಧದ ಸಂದರ್ಭದಲ್ಲಿ, ಚೀನಾದ ಆಕ್ರಮಣಕಾರಿ ದಾಳಿಯ ಎದುರು ಭಾರತದ ಸೇನೆಯ ದೌರ್ಬಲ್ಯ ಮತ್ತು ತಾಂತ್ರಿಕ ಹಿನ್ನಡೆ ಅನುಭವಿಸಿತ್ತು. ಶಾಸ್ತ್ರಿಯವರಿಗೆ ಭಾರತೀಯ ಸೇನೆಯನ್ನು ಆಧುನೀಕರಿಸಿ, ಆ ಮೂಲಕವೇ ಭವಿಷ್ಯದಲ್ಲಿ ನೆರೆಯ ಶತ್ರುಗಳಿಂದ ಎದುರಾಗಬಲ್ಲ ಅಪಾಯವನ್ನು ತಪ್ಪಿಸಲು ಸಾಧ್ಯ ಎಂದು ಅರಿವಿಗೆ ಬಂದಿತ್ತು. ಅವರು ಭಾರತದ ರಕ್ಷಣಾ ಬಜೆಟನ್ನು ಹೆಚ್ಚಿಸಿ, ಸೋವಿಯತ್ ಒಕ್ಕೂಟದಂತಹ ಮಿತ್ರ ರಾಷ್ಟ್ರಗಳೊಡನೆ ಮಿಲಿಟರಿ ಸಂಬಂಧಗಳನ್ನು ಸ್ಥಾಪಿಸಿದರು. ಅವರು ಭಾರತದ ಪರಮಾಣು ಕಾರ್ಯಕ್ರಮಕ್ಕೂ ತನ್ನ ಬೆಂಬಲ ಸೂಚಿಸಿದ್ದರು. ಆ ಕಾರ್ಯಕ್ರಮ ರಕ್ಷಣಾ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸುವ ಗುರಿಯನ್ನು ಹೊಂದಿತ್ತು.

1966ರ ಜನವರಿ 11ರಂದು, ಉಜ್ಬೆಕಿಸ್ತಾನದ ತಾಷ್ಕೆಂಟ್‌ನಲ್ಲಿ ಪಾಕಿಸ್ತಾನದ ಅಧ್ಯಕ್ಷ ಆಯುಬ್ ಖಾನ್ ಅವರೊಡನೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲು ತೆರಳಿದ್ದ ಶಾಸ್ತ್ರಿಯವರು ನಿಧನರಾದರು. ಆ ಮೂಲಕ ಅವರ ಅಧಿಕಾರಾವಧಿ ಅಂತ್ಯಗೊಂಡಿತು. ಅವರಿಗೆ ನಿಧನಾನಂತರ, ದೇಶಕ್ಕೆ ಅವರು ನೀಡಿದ ಮಹೋನ್ನತ ಸೇವೆಯನ್ನು ಗುರುತಿಸಿ, ಭಾರತದ ಅತ್ಯುನ್ನತ ನಾಗರಿಕ ಪುರಸ್ಕಾರವಾದ ಭಾರತ ರತ್ನ ನೀಡಿ ಗೌರವಿಸಲಾಯಿತು. ಅವರನ್ನು ಪ್ರಜಾಪ್ರಭುತ್ವದ ಮೌಲ್ಯಗಳು, ಜಾತ್ಯಾತೀತತೆ, ಹಾಗೂ ಸಮಾಜವಾದವನ್ನು ಎತ್ತಿಹಿಡಿದು, ಲಕ್ಷಾಂತರ ಭಾರತೀಯರಿಗೆ ತನ್ನ ಧೈರ್ಯ, ಪ್ರಾಮಾಣಿಕತೆ ಮತ್ತು ಸರಳತೆಯಿಂದ ಸ್ಫೂರ್ತಿಯಾದ ನಾಯಕ ಎಂದು ಇಂದಿಗೂ ಸ್ಮರಿಸಲಾಗುತ್ತದೆ.

ಇದನ್ನೂ ಓದಿ: Gandhi Jayanti 2023: ನಿರ್ಭೀತ ಗಾಂಧೀಜಿಗೆ ಈ ವಿಷಯ ಯಾವಾಗಲೂ ಭಯದ ಕಾರಣವಾಗಿತ್ತು.. ಏಕೆ?

ಲೇಖಕರು  : ಗಿರೀಶ್ ಲಿಂಗಣ್ಣ (ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News