ಐಶ್ವರ್ಯ ರೈ ಜೊತೆ ಲಾಲೂ ಪುತ್ರನ ಮದುವೆ!

ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಐಶ್ವರ್ಯ ರೈ ಅವರನ್ನು ವಿವಾಹವಾಗಲಿದ್ದಾರೆ. 

Last Updated : Apr 6, 2018, 10:30 AM IST
ಐಶ್ವರ್ಯ ರೈ ಜೊತೆ ಲಾಲೂ ಪುತ್ರನ ಮದುವೆ! title=

ನವದೆಹಲಿ : ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಐಶ್ವರ್ಯ ರೈ ಅವರನ್ನು ವಿವಾಹವಾಗಲಿದ್ದಾರೆ. 

ಇದೇನಿದು? ಐಶ್ವರ್ಯ ರೈ ಅವರಿಗೆ ಈಗಾಗಲೇ ಮದುವೆಯಾಗಿದೆಯಲ್ಲಾ ! ಮತ್ತೊಂದು ಮದುವೆನಾ? ಹಾಗಾದ್ರೆ ಅಭಿಷೇಕ್ ಬಚ್ಚನ್ ಏನಾದ್ರು? ಅಂತೆಲ್ಲಾ ಪ್ರಶ್ನೆಗಳು ನಿಮ್ಮಲ್ಲಿ ಮೂಡುತ್ತಿರಬಹುದಲ್ಲವೇ? ಆದರೆ ಲಾಲೂ ಪ್ರಸಾದ್ ಯಾದವ್ ಮಗ ಐಶ್ವರ್ಯಾ ರೈ ಅವರನ್ನು ಮದುವೆ ಆಗುತ್ತಿರುವುದಂತೂ ಸತ್ಯ. ಆದರೆ ಈ ಐಶ್ವರ್ಯ ಬಾಲಿವುಡ್ ನಟಿ, ವಿಶ್ವಸುಂದರಿ ರೈ ಅಲ್ಲ. ಈಕೆ ಆರ್ ಜೆಡಿ ನಾಯಕ ಚಂದ್ರಿಕಾ ರೈ ಅವರ ಪುತ್ರಿ. 

ಹೌದು, ಬಿಹಾರದ ಮಾಜಿ ಮುಖ್ಯಮಂತ್ರಿ ದರೋಗ ಪ್ರಸಾದ್ ರೈ ಮೊಮ್ಮಗಳು ಮತ್ತು RJD ನಾಯಕ ಮತ್ತು ಬಿಹಾರ ಸಾರಿಗೆ ಸಚಿವ ಚಂದ್ರಿಕಾ ರೈ ಅವರ ಮಗಳಾದ ಐಶ್ವರ್ಯ ರೈ ಮತ್ತು ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಮಗ ತೇಜಸ್ ಪ್ರತಾಪ್ ಅವರಿಗೆ ಇದೇ ಏಪ್ರಿಲ್ 18ರಂದು ಪಾಟ್ನಾದ ಮಯೂರ ಹೋಟೆಲ್ ನಲ್ಲಿ ನಿಶ್ಚಿತಾರ್ಥ ನಡೆಯಲಿದೆ ಎನ್ನಲಾಗಿದೆ. 

ಪಾಟ್ನಾದ ನೊಟ್ರೆ ಡೆಮೆ ಅಕಾಡೆಮಿಯಲ್ಲಿ ವಿದ್ಯಾಭ್ಯಾಸ ಮುಗಿಸಿರುವ ಐಶ್ವರ್ಯ ಉನ್ನತ ಶಿಕ್ಷಣಕ್ಕಾಗಿ ದೆಹಲಿಗೆ ತೆರಳಿದ್ದಾರೆ. ಮೇವು ಹಣಗರದಲ್ಲಿ ಲಾಲೂ ಪ್ರಸಾದ್ ಯಾದವ್‌ ಜೈಲು ಸೇರಿದ ಬಳಿಕ ತೇಜ್‌ ಪ್ರತಾಪ್‌ ಯಾದವ್‌ ರಾಜಕೀಯದಲ್ಲಿ ಸಕ್ರೀಯರಾಗಿದ್ದು ಆರ್‌ಜೆಡಿ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಲಾಲೂ ಪ್ರಸಾದ್ ಯಾದವ್ ಮತ್ತು ರಾಬ್ರಿ ದೇವಿ ದಂಪತಿಗೆ 7 ಜನ ಪುತ್ರಿಯರು ಮತ್ತು ಇಬ್ಬರು ಪುತ್ರರಿದ್ದಾರೆ.

Trending News