ಮದ್ಯಪ್ರೀಯರಿಗೆ ನೆಮ್ಮದಿಯ ಸುದ್ದಿ ಪ್ರಕಟಿಸಿದ ಸರ್ಕಾರ

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಮದ್ಯದ ಮೇಲೆ ವಿಧಿಸಲಾಗಿರುವ ಶೇ.70 ರಷ್ಟು ಕೊರೊನಾ ಟ್ಯಾಕ್ಸ್ ಅನ್ನು ಹಿಂದಕ್ಕೆ ಪಡೆಯಲಾಗುತ್ತಿದೆ. ಹೀಗಾಗಿ ಜೂನ್ 10 ರಿಂದ ದೆಹಲಿಯಲ್ಲಿ ಮತ್ತೆ ಮದ್ಯ ಅಗ್ಗವಾಗಲಿದೆ. ಅಷ್ಟೇ ಅಲ್ಲ ಇದರ ಜೊತೆಗೆ ಮದ್ಯದ ಮೇಲೆ ಶೇ.5 ರಷ್ಟು ವ್ಯಾಟ್ ಹೆಚ್ಚಿಸಲಾಗುತ್ತಿದೆ. ಸದ್ಯ ಮದ್ಯದ ಮೇಲೆ ಶೇ.20ರಷ್ಟು ವ್ಯಾಟ್ ವಿಧಿಸಲಾಗುತ್ತಿದೆ.

Last Updated : Jun 7, 2020, 02:22 PM IST
ಮದ್ಯಪ್ರೀಯರಿಗೆ ನೆಮ್ಮದಿಯ ಸುದ್ದಿ ಪ್ರಕಟಿಸಿದ ಸರ್ಕಾರ title=

ನವದೆಹಲಿ: ದೆಹಲಿಯಲ್ಲಿ ಜೂನ್ 10 ರಿಂದ ಮದ್ಯ ಅಗ್ಗವಾಗಲಿದೆ. ಶೇ. 70 ರಷ್ಟು ಕರೋನಾ ಸೆಸ್ ಅನ್ನು ದೆಹಲಿ ಸರ್ಕಾರ ಹಿಂಪಡೆಯಲು ನಿರ್ಧರಿಸಿದೆ. ಇದರ ಜೊತೆಗೆ ದೆಹಲಿ ಸರ್ಕಾರ ಮದ್ಯದ ಮೇಲಿನ ವ್ಯಾಟ್ ಅನ್ನು ಶೇ 5 ರಷ್ಟು ಹೆಚ್ಚಿಸಲು ನಿರ್ಧರಿಸಿದೆ. ಹೀಗಾಗಿ ಇನ್ಮುಂದೆ ಮದ್ಯದ ಬೆಲೆಯ ಮೇಲೆ ಶೇ 25 ರಷ್ಟು ವ್ಯಾಟ್ ವಿಧಿಸಲಾಗುವುದು. ಇದುವರೆಗೆ ಶೇ.20 ವ್ಯಾಟ್ ಮಾತ್ರ ಮದ್ಯಕ್ಕೆ ಅನ್ವಯವಾಗುತ್ತಿತ್ತು.

ದೆಹಲಿಯಲ್ಲಿ ಹೆಚ್ಚುತ್ತಿರುವ ಕರೋನಾ ಸೋಂಕಿನ ಪ್ರಕರಣಗಳ ನಡುವೆಯೇ ಸರ್ಕಾರ ಮದ್ಯದಂಗಡಿಗಳನ್ನು ತೆರೆಯುವ ನಿರ್ಧಾರ ಪ್ರಕಟಿಸಿತ್ತು. ಈ ಅವಧಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಮದ್ಯದಂಗಡಿಗಳಿಗೆ ಧಾವಿಸಿದ್ದರು. ಇದನ್ನು ತಡೆಯಲು ಸರ್ಕಾರ ಮದ್ಯದ ಬೆಲೆಯ ಮೇಲೆ ಶೇ.70 ರಷ್ಟು ಕೊರೊನಾ ಸೆಸ್ ವಿಧಿಸುವ ನಿರ್ಣಯ ಕೈಗೊಂಡಿತ್ತು.

ಲಾಕ್ ಡೌನ್ 3.0ರ ಅವಧಿಯಲ್ಲಿ ದೆಹಲಿಯಲ್ಲಿ ಮದ್ಯ ಮಾರಾಟ ಪುನಃ ಪ್ರಾರಂಭವಾಗಿತ್ತು. ಹೀಗಾಗಿ ಮೇ 4 ರಂದು ಮದ್ಯದಂಗಡಿಗಳಲ್ಲಿ ಭಾರಿ ಜನಸಂದಣಿ ನೆರದ ಕಾರಣಾ ಸಾಮಾಜಿಕ ಅಂತರ ಕಾಯುವ ನಿಯಮಕ್ಕೆ ಅಪಾರ ಹಾನಿ ಉಂಟಾಗಿತ್ತು. ಇದನ್ನು ತಡೆಯಲು ಪೊಲೀಸರು ಲಾಠಿಚಾರ್ಜ್ ಕೂಡ ನಡೆಸಿದ್ದರು.

ಇದಾದ ಬಳಿಕ ದೆಹಲಿಯ ಕೆಜ್ರಿವಾಲ್ ಸರ್ಕಾರ ಮೇ 5 ರಂದು ಮದ್ಯದ ಮೇಲೆ ಶೇ.70ರಷ್ಟು ಕೊರೊನಾ ಸೆಸ್ ವಿಧಿಸುವ ನಿರ್ಣಯ ಕೈಗೊಂಡಿತ್ತು. ಮದ್ಯದ ಮೇಲೆ ಕೊರೊನಾ ಸೆಸ್ ವಿಧಿಸಿದ ಬಳಿಕವೂ ಕೂಡ ಸಾರಾಯಿ ಅಂಗಡಿಗಳ ಮೇಲೆ ಭಾರಿ ಜನಸಂದಣಿ ಕಂಡುಬಂದಿತ್ತು. ಹೀಗಾಗಿ ಸರ್ಕಾರ ಬಲವಂತವಾಗಿ ಈ ನಿರ್ಣಯ ಕೈಗೊಂಡಿತ್ತು.

ಸದ್ಯ ದೇಶಾದ್ಯಂತ ಅನ್ ಲಾಕ್ -1 ಜಾರಿಯಲ್ಲಿದ್ದು, ಬರುವ ಸೋಮವಾರದಿಂದ ದೆಹಲಿಯಲ್ಲಿ ಧಾರ್ಮಿಕ ಸ್ಥಳಗಳು, ಮಾಲ್ ಗಳು ಹಾಗೂ ರೆಸ್ಟೋರೆಂಟ್ ಗಳನ್ನು ತೆರೆಯಲು ಅಲ್ಲಿನ ಸರ್ಕಾರ ಅನುಮತಿ ನೀಡಿದೆ. ಅಷ್ಟೇ ಅಲ್ಲ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಎಲ್ಲ ಆದೇಶಗಳನ್ನು ಪಾಲಿಸಲಾಗುವುದು ಎಂದು ಸರ್ಕಾರ ಹೇಳಿದೆ. ಆದರೆ. ಹೋಟೆಲ್ ಹಾಗೂ ಬ್ಯಾಂಕ್ವೆಟ್ ಹಾಲ್ ಗಳನ್ನೂ ಸದ್ಯ ತೆರೆಯಲಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

Trending News