ಸಾಲ ಮನ್ನಾ ರೈತರನ್ನು ಸೋಮಾರಿಗಳನ್ನಾಗಿ ಮಾಡುತ್ತದೆ- ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್

ಕೃಷಿ ಸಾಲ ಮನ್ನಾ ರೈತರನ್ನು ಸೋಮಾರಿಗಳನ್ನಾಗಿ ಮಾಡುತ್ತದೆ ಎಂದು ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Last Updated : May 1, 2019, 06:39 PM IST
ಸಾಲ ಮನ್ನಾ ರೈತರನ್ನು ಸೋಮಾರಿಗಳನ್ನಾಗಿ ಮಾಡುತ್ತದೆ- ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ title=

ನವದೆಹಲಿ: ಕೃಷಿ ಸಾಲ ಮನ್ನಾ ರೈತರನ್ನು ಸೋಮಾರಿಗಳನ್ನಾಗಿ ಮಾಡುತ್ತದೆ ಎಂದು ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ  ಸಂದರ್ಶನದಲ್ಲಿ ಮಾತನಾಡಿರುವ ಸಿಎಂ ಖಟ್ಟರ್ "ಹರ್ಯಾಣದಲ್ಲಿನ ಕೃಷಿ ಸಮುದಾಯವು ಅರ್ಥಿಕ ಹಿಂದುಳಿದಿರುವಿಕೆಗಿನ ಕಾರಣಗಳನ್ನು ನಿರ್ಮೂಲನೆ ಮಾಡಲು ಬಯಸಿದೆ. ಒಂದು ವೇಳೆ ನೀವು ಏನನ್ನಾದರೂ ಉಚಿತವಾಗಿ ಪಡೆದಾಗ ಜನರು ಸೋಮಾರಿಗಳಾಗುತ್ತಾರೆ.ಅವರು ಎಲ್ಲ ಕಡೆ ಸಾಲವನ್ನು ತೆಗೆದುಕೊಂಡು ಕೊನೆಗೆ ಹಣಕಾಸಿನ ನಿರ್ವಹಣೆ ಮಾಡಲು ಸಾಧ್ಯವಾಗುವುದಿಲ್ಲ.ಈ ರೀತಿಯ ಯೋಜನೆಗಳು ಕೆಲವು ರಾಜ್ಯಗಳಲ್ಲಿನ ರೈತರಿಗೆ ಸಹಾಯವಾಗಬಹುದು ಆದರೆ ಅದು ನಮ್ಮ ರಾಜ್ಯದಲ್ಲಿ ಇಲ್ಲ" ಎಂದು ತಿಳಿಸಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿರುವ ನ್ಯಾಯ ಯೋಜನೆ ಬಗ್ಗೆ ಉಲ್ಲೇಖಿಸಿ ಮಾತನಾಡಿದ ಸಿಎಂ ಖಟ್ಟರ್ ಎಲ್ಲ ಯೋಜನೆಗಳನ್ನು ಸ್ಥಗಿತಗೊಳಿಸಿದಾಗ ಮಾತ್ರ ಈ ಯೋಜನೆಯನ್ನು ಜಾರಿಗೆ ತರಬಹುದು ಎಂದು ವ್ಯಂಗ್ಯವಾಡಿದ್ದಾರೆ.ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಈ ಯೋಜನೆ ಆರ್ಥಿಕ ಪ್ರಗತಿಯಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತರಲಿದೆ ಎಂದು ಹೇಳಿತ್ತು.     

 

Trending News