Lockdown: ಪತ್ನಿಯ ಔಷಧಿ ಖಾಲಿಯಾಗಿದ್ದಕ್ಕೆ 70 ವರ್ಷದ ವೃದ್ಧ ಮಾಡಿದ್ದೇನು?

ಅಜ್ಮೋದಿನ್ ಪಠಾಣ್ ತನ್ನ ಹೆಂಡತಿಯ ಮೇಲಿನ ಅಚಲ ಪ್ರೀತಿಗೆ ಉತ್ತಮ ಉದಾಹರಣೆಯಾಗಿದ್ದಾರೆ.  

Last Updated : Mar 30, 2020, 01:07 PM IST
Lockdown: ಪತ್ನಿಯ ಔಷಧಿ ಖಾಲಿಯಾಗಿದ್ದಕ್ಕೆ 70 ವರ್ಷದ ವೃದ್ಧ ಮಾಡಿದ್ದೇನು? title=

ಸೋಲಾಪುರ: ಕೊರೊನಾವೈರಸ್ COVID-19  ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ದೇಶಾದ್ಯಂತ ಲಾಕ್ ಡೌನ್ (Lockdown) ಇರುವ ಕಾರಣ ರಸ್ತೆಗಳು ನಿಶ್ಶಬ್ಧವಾಗಿವೆ. ಅಂತಹ ಪರಿಸ್ಥಿತಿಯಲ್ಲಿ, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ನಡೆಯುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಹೀಗಾಗಿ, ಜನರು ಕೆಲ ಅಗತ್ಯ ವಸ್ತುಗಳಿಗಾಗಿ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅದೇ ಸಮಯದಲ್ಲಿ, 70 ವರ್ಷದ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಔಷಧಿ ತರಲು 70 ಕಿ.ಮೀ.  ಪ್ರಯಾಣಿಸಿರುವ ಘಟನೆ ನಡೆದಿದೆ.

ಲಾಕ್‌ಡೌನ್ ಜೊತೆಗೆ, ಮಹಾರಾಷ್ಟ್ರದಲ್ಲಿ  ಕೊರೊನಾವೈರಸ್ (Coronavirus) COVID-19 ತಡೆಗಟ್ಟಲು ಕರ್ಫ್ಯೂ ಸಹ ಅನ್ವಯಿಸಲಾಗಿದೆ. ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಅಕ್ಕಲ್‌ಕೋಟ್‌ನ ದರ್ಶನಾಲ್ ಗ್ರಾಮದ ಹಿರಿಯರಾದ ಅಜ್ಮೋದುದ್ದೀನ್ ಪಠಾಣ್ ಅವರು ಅನಾರೋಗ್ಯ ಪೀಡಿತ ಪತ್ನಿಗಾಗಿ ಔಷಧಿಗಳನ್ನು ತರಲು 70 ಕಿ.ಮೀ. ಪ್ರಯಾಣಿಸಬೇಕಿತ್ತು. ಪಠಾಣ್ ಸಹಾಬ್ ಅವರ 67 ವರ್ಷದ ಪತ್ನಿ ಮುಮ್ತಾಜ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರ ಪತ್ನಿ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಮತ್ತು ಅವರು ಔಷಧಿಯನ್ನು ತೆಗೆದುಕೊಳ್ಳುವುದು ಬಹಳ ಮುಖ್ಯವಾಗಿತ್ತು. ಇದಕ್ಕಾಗಿ ವೈದ್ಯರು ಔಷಧಿ ಬರೆದು ಕೊಟ್ಟಿದ್ದರು.

ಗಮನಿಸಬೇಕಾದ ಸಂಗತಿಯೆಂದರೆ, ಮಾರ್ಚ್ 28 ರಂದು ದರ್ಶನಾಲ್ ಗ್ರಾಮ ಮತ್ತು ಅಕ್ಕಲ್ಕೋಟ್‌ನಲ್ಲಿರುವ ಅವರ ವೈದ್ಯಕೀಯ ಅಂಗಡಿಯಲ್ಲಿ ಔಷಧಿ ಸಿಗದಿದ್ದಾಗ, ಅವರು ತಮ್ಮ ಹೆಂಡತಿಯ ಔಷಧಿಯನ್ನು ತೆಗೆದುಕೊಳ್ಳಲು ಸೋಲಾಪುರ ನಗರಕ್ಕೆ ( ದರ್ಶನಾಲದಿಂದ ಸುಮಾರು 70 ಕಿ.ಮೀ.) ಕುದುರೆ ಸವಾರಿ ಮಾಡಿದ್ದಾರೆ.

ಅಜ್ಮೋದಿನ್ ಪಠಾಣ್ ತನ್ನ ಹೆಂಡತಿಯ ಬಗ್ಗೆ ಅಚಲವಾದ ಪ್ರೀತಿ ಹೊಂದಿರುವುದಕ್ಕೆ ಇದೊಂದು ಅದ್ಭುತ ಉದಾಹರಣೆಯಾಗಿದೆ. ಸೋಲಾಪುಲ್ ತಲುಪಿದ ನಂತರ, ಹಿರಿಯ ಅಜ್ಮೋದಿನ್ ಪಠಾಣ್ ತನ್ನ ಹೆಂಡತಿಯ ಔಷಧವನ್ನು ಹುಡುಕುತ್ತಾ ಹಲವಾರು ವೈದ್ಯಕೀಯ ಅಂಗಡಿಗಳಿಗೆ ಹೋದರು.

ಏತನ್ಮಧ್ಯೆ, ಅಜ್ಮೋದಿನ್ ಪಠಾಣ್ ಕುದುರೆಯ ಮೇಲೆ ಸವಾರಿ ಮಾಡುತ್ತಿರುವುದನ್ನು ನೋಡಿದ ಪೊಲೀಸರು ಆತನನ್ನು ಪ್ರಶ್ನಿಸಿದರು. ನಂತರ ಕಾರಣ ತಿಳಿದ ನಂತರ, ಪೊಲೀಸರು ಔಷಧಿ ದೊರೆಯುವ ಮೆಡಿಕಲ್ ಸ್ಟೋರ್  ಎಲ್ಲಿದೆ ಎಂಬ ಬಗ್ಗೆ ಮಾರ್ಗದರ್ಶನ ನೀಡಿದರು ಮತ್ತು ಉಪಾಹಾರವನ್ನೂ ಸಹ ನೀಡಿದರು. ವೃದ್ಧ ಅಜ್ಮೋದಿನ್ ಪಠಾಣ್ ಅವರು ಹಳ್ಳಿಯಿಂದ ಸೋಲಾಪುರ ತಲುಪಲು 2 ಗಂಟೆಗಳ ಕಾಲ ಸವಾರಿ ಮಾಡಿದರು.

ಹಿರಿಯ ಮಿರ್ ಅಜ್ಮೋದಿನ್ ಪಠಾಣ್, "ನಾನು ದರ್ಶನಾಲ್ ಗ್ರಾಮದಿಂದ ನನ್ನ ಪತ್ನಿಗಾಗಿ ಔಷಧಿ ಪಡೆಯಲು ಸೋಲಾಪುರಕ್ಕೆ ಬಂದಿದ್ದೇನೆ. ನಾನು ದರ್ಶನಾಲ್ ಗ್ರಾಮದಿಂದ ಬೆಳಿಗ್ಗೆ 8 ಗಂಟೆಗೆ ಹೊರಟೆ. ಬೆಳಿಗ್ಗೆ 10 ಗಂಟೆಗೆ ನಾನು ಸೋಲಾಪುರ ನಗರವನ್ನು ತಲುಪಿದ್ದೇನೆ. ಈಗ ನಾನು ಔಷಧದೊಂದಿಗೆ ಮನೆಗೆ ಮರಳುತ್ತೇನೆ" ಎಂದು ಹೇಳಿದರು.

Trending News