ಪುಷ್ಪ 2 ದಿ ರೂಲ್ : 'ಪುಷ್ಪ ಪುಷ್ಪ' ಮೊದಲ ಹಾಡು ಬಿಡುಗಡೆ

Pusha 2 The Rule : ಬಹುನಿರೀಕ್ಷಿತ ಅಲ್ಲು ಅಭಿನಯದ ಪುಷ್ಪ 2 ದಿ ರೂಲ್ ಸಿನಿಮಾದ ಮೊದಲ ಲಿರಿಕಲ್ ಹಾಡು ಬಿಡುಗಡೆಯಾಗಿದ್ದು,  6 ಭಾಷೆಗಳಲ್ಲಿ ಇಂದು ರಿಲೀಸ್ ಆಗಿದೆ. 

Written by - Zee Kannada News Desk | Last Updated : May 1, 2024, 06:26 PM IST
  • ‘ಪುಷ್ಪ ಪುಷ್ಪ’ ಶೀರ್ಷಿಕೆಯ ಈ ಹಾಡು ಪುಷ್ಪ ರಾಜ್ ಅವರನ್ನು ಪರಿಚಯಿಸುತ್ತದೆ
  • ಇದರ ಸಂಪೂರ್ಣ ಗಮನ ಅಲ್ಲು ಅರ್ಜುನ್ ಪಾತ್ರದ ಮೇಲಿದೆ.
  • ಪುಷ್ಪ 2 ದಿ ರೂಲ್ ಎಂಬ ಶೀರ್ಷಿಕೆಯಡಿಯಲ್ಲಿ ಈ ವರ್ಷ ಆಗಸ್ಟ್ 15 ರಂದು ಚಿತ್ರ ಬಿಡುಗಡೆಯಾಗಲಿದೆ.
ಪುಷ್ಪ 2 ದಿ ರೂಲ್ : 'ಪುಷ್ಪ ಪುಷ್ಪ' ಮೊದಲ ಹಾಡು ಬಿಡುಗಡೆ title=

Pushpa 2 the rule first song release : ಸುಕುಮಾರ್ ಅವರ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹದ್ ಫಾಸಿಲ್ ಅಭಿನಯದ ಪುಷ್ಪ 2: ದಿ ರೂಲ್ ಇದೇ ಆಗಸ್ಟ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಇಂದು ಸಿನಿಮಾ ತನ್ನ ಮೊದಲ ಹಾಡನ್ನು ಬಿಡುಗಡೆಗೊಳಿಸಿದೆ. 

ಇದನ್ನು ಓದಿ : ದೆಹಲಿಯ 60ಕ್ಕೂ ಹೆಚ್ಚು ಎನ್‌ಸಿಆರ್ ಶಾಲೆಗಳ ಬಾಂಬ್ ಭೀತಿ: ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಭೇಟಿ 

4-ನಿಮಿಷ-19-ಸೆಕೆಂಡ್ ಉದ್ದವಿರುವ ಮೊದಲ ಹಾಡು ಅಲ್ಲು ಪಾತ್ರದ ಪುಷ್ಪಾ ರಾಜ್ ಅವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಸಾಹಿತ್ಯವಾಗಿದೆ. ಸುಕುಮಾರ್ ಅವರ ಅಲ್ಲು ಅರ್ಜುನ್ , ರಶ್ಮಿಕಾ ಮಂದಣ್ಣ, ಫಹದ್ ಫಾಸಿಲ್ ಅಭಿನಯದ ಪುಷ್ಪಾ 2: ದಿ ರೂಲ್ ಚಿತ್ರದ ಮೊದಲ ಹಾಡನ್ನು  ಅನ್ನು ಮೇ 1 ರಂದು ಬಿಡುಗಡೆ ಮಾಡಿದ್ದಾರೆ. ಪುಷ್ಪ ಪುಷ್ಪ ಎಂಬ ಶೀರ್ಷಿಕೆಯಡಿ, ದೇವಿ ಶ್ರೀ ಪ್ರಸಾದ್ ಅವರು ನಕಾಶ್ ಅಜೀಜ್ ಮತ್ತು ದೀಪಕ್ ಅವರ ಗಾಯನದೊಂದಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. 

ಮೊದಲ ಹಾಡನ್ನು  ಇಂದು ಬೆಳಿಗ್ಗೆ 11 ಗಂಟೆಗೆ ಬಿಡುಗಡೆ ಮಾಡಬೇಕಿತ್ತು ಆದರೆ ತಯಾರಕರು ಸಂಜೆ 5 ಕ್ಕೆ ಹಾಡನ್ನು ಬಿಡುಗಡೆಗೊಳಿಸಿದ್ದಾರೆ. ಈ ಚಿತ್ರವು 2021 ರ ಪುಷ್ಪ: ದಿ ರೈಸ್ ಚಿತ್ರದ ಮುಂದುವರಿದ ಭಾಗವಾಗಿ,  ಪುಷ್ಪ 2 ದಿ ರೂಲ್ ಎಂಬ ಶೀರ್ಷಿಕೆಯಡಿಯಲ್ಲಿ ಈ ವರ್ಷ ಆಗಸ್ಟ್ 15 ರಂದು ಚಿತ್ರ ಬಿಡುಗಡೆಯಾಗಲಿದೆ.

ಇದನ್ನು ಓದಿ : ಚೆನ್ನೈನ ಐಸಿಎಫ್‌ನಿಂದ ಮೊದಲ ವಂದೇ ಭಾರತ್ ಮೆಟ್ರೋ ಆರಂಭ 

 ‘ಪುಷ್ಪ ಪುಷ್ಪ’ ಶೀರ್ಷಿಕೆಯ ಈ ಹಾಡು ಪುಷ್ಪ ರಾಜ್ ಅವರನ್ನು ಪರಿಚಯಿಸುತ್ತದೆ. ಇದೊಂದು ಲಿರಿಕಲ್ ಸಾಂಗ್ ಆಗಿದ್ದು, ಇದರ ಸಂಪೂರ್ಣ ಗಮನ ಅಲ್ಲು ಅರ್ಜುನ್ ಪಾತ್ರದ ಮೇಲಿದೆ. ಚಿತ್ರದ ಮೊದಲ ಭಾಗದಲ್ಲಿ ಅಂದರೆ 'ಪುಷ್ಪ: ದಿ ರೈಸ್'ನಲ್ಲಿ ಕಾಣಿಸಿಕೊಂಡಿರುವ ಪುಷ್ಪಾ ಪುಷ್ಪರಾಜ್ ಅವರ ಗುಣಗಳನ್ನು ಹಾಡಿನ ಪ್ರತಿಯೊಂದು ಪದವೂ ಹೇಳುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News