Lokasabha Election 2024:  ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಯದುವೀರ್ ಒಡೆಯರ್, ಡಾ ಸಿ ಎನ್ ಮಂಜುನಾಥ್ ಗೆ ಟಿಕೆಟ್

2024 ರ ಲೋಕಸಭಾ ಚುನಾವಣೆಗಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಹೈಕಮಾಂಡ್ ಇಂದು ಬಿಡುಗಡೆ ಮಾಡಿದೆ.ಮೊದಲ ಪಟ್ಟಿಯಲ್ಲಿ ಒಟ್ಟು ಇಪ್ಪತ್ತು ಅಭ್ಯರ್ಥಿಗಳನ್ನು ಪಕ್ಷದ ಹೈಕಮಾಂಡ್ ಘೋಷಿಸಿದೆ.

Written by - Zee Kannada News Desk | Last Updated : Mar 13, 2024, 07:40 PM IST
  • ಇದೆ ವೇಳೆ ಪಕ್ಷ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಹಲವು ಹೊಸ ಹೆಸರುಗಳು ಸೇರ್ಪಡೆಯಾಗಿವೆ.
  • ಮಾಧ್ಯಮದಲ್ಲಿ ವರದಿಯಾದಂತೆ ಈ ಬಾರಿ ಮೈಸೂರು ಕ್ಷೇತ್ರ ಬಿಜೆಪಿ ಟಿಕೆಟ್ ಯದುವೀರ್ ಅವರಿಗೆ ದೊರೆಯಲಿದೆ ಎನ್ನುವ ಊಹಾಪೋಹಗಳು ಜೋರಾಗಿ ಕೇಳಿ ಬಂದಿದ್ದವು.
  • ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಕೊಕ್ ನೀಡಿ ಯದವೀರ್ ಒಡೆಯರ್ ಅವರಿಗೆ ಪಕ್ಷವು ಮಣೆ ಹಾಕಿದೆ.
Lokasabha Election 2024:  ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಯದುವೀರ್ ಒಡೆಯರ್, ಡಾ ಸಿ ಎನ್ ಮಂಜುನಾಥ್ ಗೆ ಟಿಕೆಟ್  title=

ನವದೆಹಲಿ: 2024 ರ ಲೋಕಸಭಾ ಚುನಾವಣೆಗಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಹೈಕಮಾಂಡ್ ಇಂದು ಬಿಡುಗಡೆ ಮಾಡಿದೆ.ಮೊದಲ ಪಟ್ಟಿಯಲ್ಲಿ ಒಟ್ಟು ಇಪ್ಪತ್ತು ಅಭ್ಯರ್ಥಿಗಳನ್ನು ಪಕ್ಷದ ಹೈಕಮಾಂಡ್ ಘೋಷಿಸಿದೆ.

ಇದೆ ವೇಳೆ ಪಕ್ಷ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಹಲವು ಹೊಸ ಹೆಸರುಗಳು ಸೇರ್ಪಡೆಯಾಗಿವೆ.ಮಾಧ್ಯಮದಲ್ಲಿ ವರದಿಯಾದಂತೆ ಈ ಬಾರಿ ಮೈಸೂರು ಕ್ಷೇತ್ರ ಬಿಜೆಪಿ ಟಿಕೆಟ್ ಯದುವೀರ್ ಒಡೆಯರ್ ಅವರಿಗೆ ದೊರೆಯಲಿದೆ ಎನ್ನುವ ಊಹಾಪೋಹಗಳು ಜೋರಾಗಿ ಕೇಳಿ ಬಂದಿದ್ದವು.ಈ ವದಂತಿಗಳು ಈಗ ನಿಜವಾಗಿವೆ. ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಮೈಸೂರು ಕ್ಷೇತ್ರದ ಟಿಕೆಟ್ಗೆ ಕೊಕ್ ನೀಡಿ ಯದವೀರ್ ಒಡೆಯರ್ ಅವರಿಗೆ ಬಿಜೆಪಿ ಪಕ್ಷವು ಮಣೆ ಹಾಕಿದೆ.ಇನ್ನೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ.ಸಿ.ಎನ್ ,ಮಂಜುನಾಥ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.

ಮೊದಲ ಪಟ್ಟಿಯಲ್ಲಿ ಬಿಜೆಪಿ ಟಿಕೆಟ್ ಪಡೆದಿರುವ ಪಡೆದಿರುವ ಅಭ್ಯರ್ಥಿಗಳು

ಚಿಕ್ಕೋಡಿ -ಅನ್ನಾಸಾಹೇಬ್ ಶಂಕರ್ ಜೊಲ್ಲೆ 
ಬಾಗಲಕೋಟೆ -ಪಿಸಿ ಗದ್ದಿಗೌಡರ್
ಬಿಜಾಪುರ -ರಮೇಶ್ ಜಿಗಜಿಣಗಿ
ಗುಲಬರ್ಗಾ -=ಉಮೇಶ್ ಜಾದವ್ 
ಬೀದರ್ -ಭಗವಂತ್ ಖೂಬಾ 
ಕೊಪ್ಪಳ -ಬಸವರಾಜ್ ಕ್ಯಾವತೂರ್ 
ಬಳ್ಳಾರಿ -ಬಿ ಶ್ರೀರಾಮುಲು 
ಹಾವೇರಿ-ಬಸವರಾಜ್ ಬೊಮ್ಮಾಯಿ 
ಧಾರವಾಡ-ಪ್ರಹ್ಲಾದ್ ಜೋಶಿ
ದಾವಣಗೇರಿ =ಗಾಯತ್ರಿ ಸಿದ್ದೇಶ್ವರ್ 
ಶಿವಮೊಗ್ಗ-ಬಿ ವೈ ರಾಘವೇಂದ್ರ 
ಉಡುಪಿ ಚಿಕ್ಕಮಗಳೂರು-ಕೋಟಾ ಶ್ರೀನಿವಾಸ್ ಪೂಜಾರಿ 
ದಕ್ಷಿಣ ಕನ್ನಡ-ಬೃಜೇಶ್ ಚೌತಾ 
ತುಮಕೂರು-ವಿ ಸೋಮಣ್ಣ  
ಮೈಸೂರು-ಯದುವೀರ್ ಒಡೆಯರ್ 
ಚಾಮರಾಜನಗರ-ಎಸ್ ಬಾಲರಾಜ್ 
ಬೆಂಗಳೂರು ಗ್ರಾಂ- ಸಿ.ಎನ್.ಮಂಜುನಾಥ್ 
ಬೆಂಗಳೂರು ಉತ್ತರ-ಶೋಭಾ ಕರಂದ್ಲಾಜೆ 
ಬೆಂಗಳೂರು ಸೆಂಟ್ರಲ್ -ಪಿಸಿ ಮೋಹನ್ 
ಬೆಂಗಳೂರು ದಕ್ಷಿಣ -ತೇಜಸ್ವಿ ಸೂರ್ಯ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News