ಲಡಾಖ್ನಲ್ಲಿ 4.7 ತೀವ್ರತೆಯಲ್ಲಿ ಭೂಕಂಪ

   

Updated: Dec 9, 2017 , 05:57 PM IST
ಲಡಾಖ್ನಲ್ಲಿ 4.7 ತೀವ್ರತೆಯಲ್ಲಿ ಭೂಕಂಪ
ಸಾಂದರ್ಭಿಕ ಚಿತ್ರ

ಜಮ್ಮು: ಶನಿವಾರ ಸಂಜೆ 4:13ರ ಸಮಯದಲ್ಲಿ ಲಡಾಖ್ ನಲ್ಲಿ 4.7 ರಷ್ಟು ತೀವ್ರತೆಯಲ್ಲಿ ಭೂಕಂಪ  ಸಂಭವಿಸಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ. 

ಡಿಸೆಂಬರ್ 7 ರಂದು 5.4ರ ತೀವ್ರತೆಯಲ್ಲಿ ಸಂಭವಿಸಿದ ಭೂಕಂಪದ ನಂತರ ರಿಕ್ಟರ್ ಸ್ಕೇಲ್ನಲ್ಲಿ ದಾಖಲೆಯಾದ ಮತ್ತೊಂದು ವರದಿಯಾಗಿದೆ. ಕಾಶ್ಮೀರ ಕಣಿವೆಯಲ್ಲಿಯೂ ಭೂಕಂಪದ ಅನುಭವವಾಗಿದೆ. 

ಭೂಕಂಪನ ಮಾಹಿತಿ ಕೇಂದ್ರವು ಭಾರತ-ಚೀನಾ ಗಡಿ ಸಮೀಪದ ಲಡಾಖ್ ಪ್ರದೇಶದ  ಸಮೀಪದಲ್ಲಿದ್ದು, ಯಾವುದೇ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.