ಮಹಾರಾಷ್ಟ್ರದಲ್ಲಿ ಶೀಘ್ರದಲ್ಲೇ ಶಿವಸೇನಾ ಮುಖ್ಯಮಂತ್ರಿ!

ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ಹಿಂತೆಗೆದುಕೊಳ್ಳುವುದು ಬಾಲ ಠಾಕ್ರೆ ಅವರ ಕನಸಾಗಿತ್ತು. ಅದಕ್ಕಾಗಿಯೇ ನಾವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡೆವು ಎಂದು ಸಂಜಯ್ ರೌತ್ ಹೇಳಿದ್ದಾರೆ.

Last Updated : Oct 9, 2019, 08:54 AM IST
ಮಹಾರಾಷ್ಟ್ರದಲ್ಲಿ ಶೀಘ್ರದಲ್ಲೇ ಶಿವಸೇನಾ ಮುಖ್ಯಮಂತ್ರಿ! title=

ಮುಂಬೈ: ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಶಿವಸೇನೆಯಿಂದ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಶಿವಸೇನೆ ಮುಖಂಡ ಸಂಜಯ್ ರೌತ್ ಹೇಳಿದ್ದಾರೆ.

ಮುಂಬೈನಲ್ಲಿ ನಡೆದ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಶಿವಸೇನೆ ಪಕ್ಷದಿಂದ ಒಬ್ಬರು ಮುಖ್ಯಮಂತ್ರಿ ಆಗಲಿದ್ದಾರೆ. ಇಂದು ನಾವು ಶಾಂತವಾಗಿದ್ದೇವೆ. ಆದರೆ ಹೀಗೆ ಮುಂದುವರಿಯುವುದು ಸಾಧ್ಯವಿಲ್ಲ. ನಾವು ಮೈತ್ರಿಯಲ್ಲಿರುವುದರಿಂದ ಕೆಲವು ವಿಷಯಗಳನ್ನು ಜಾಗರೂಕತೆಯಿಂದ ಮಾತನಾಡಬೇಕಿದೆ ಎಂದಿದ್ದಾರೆ.

ಮುಂದುವರೆದು ಮಾತನಾಡಿದ ಅವರು, "ನಾವು ಕೇವಲ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಯೋಜಿಸುತ್ತಿಲ್ಲ; ನಮ್ಮ ಧ್ವಜವನ್ನು ಸಚಿವಾಲಯದ ಮೇಲೆ ಹಾರಿಸಲು ನಾವು ಬಯಸುತ್ತೇವೆ. ಅಂದು ಯಾರೂ ನೋಟು ಅಮಾನ್ಯೀಕರಣದ ವಿರುದ್ಧ ಧ್ವನಿ ಎತ್ತುವ ಧೈರ್ಯ ಮಾಡಲಿಲ್ಲ. ಆದರೆ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ನೋಟು ಅಮಾನ್ಯೀಕರಣ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ ಎಂದು ಧೈರ್ಯವಾಗಿ ಹೇಳಿದರು ಎಂದು ಸಂಜಯ್ ತಿಳಿಸಿದರು. 

ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ಹಿಂತೆಗೆದುಕೊಳ್ಳುವುದು ಬಾಲ ಠಾಕ್ರೆ ಅವರ ಕನಸಾಗಿತ್ತು. ಅದಕ್ಕಾಗಿಯೇ ನಾವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡೆವು ಎಂದು ಹೇಳಿರುವ ಸಂಜಯ್, ರಾಮ ಮಂದಿರ ನಿರ್ಮಾಣದಲ್ಲಿ ಬಳಸಲಾಗುವ ಮೊದಲ ಇಟ್ಟಿಗೆಯ ಮೇಲೆ ಶಿವಸೇನೆಯ ಹೆಸರನ್ನು ಬರೆಯಲಾಗುವುದು ಎಂದು ರೌತ್ ಪ್ರತಿಪಾದಿಸಿದರು. 

Trending News