ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಆಗುತ್ತಾ? ಏನಂದ್ರು ಬಿಜೆಪಿ ನಾಯಕ

ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಅವರು ಇನ್ನೂ ಇಬ್ಬರು ರಾಜ್ಯ ಸಚಿವರು 15 ದಿನಗಳಲ್ಲಿ ರಾಜೀನಾಮೆ ನೀಡಲಿದ್ದಾರೆ ಆಗ ರಾಜ್ಯವು ರಾಷ್ಟ್ರಪತಿಗಳ ಆಡಳಿತಕ್ಕೆ ಸೂಕ್ತವಾಗಲಿದೆ ಎಂದು ಹೇಳಿದ್ದಾರೆ.

Last Updated : Apr 8, 2021, 04:46 PM IST
  • ಮಾಜಿ ರಾಜ್ಯ ಗೃಹ ಸಚಿವ ಅನಿಲ್ ದೇಶ್ಮುಖ್ ಅವರು ಮುಂಬೈ ಪೊಲೀಸರಲ್ಲಿ ತಮ್ಮ ಸೇವೆಯನ್ನು ಮುಂದುವರೆಸಲು ₹ 2 ಕೋಟಿ ಬೇಡಿಕೆ ಇಟ್ಟಿದ್ದಾರೆ ಮತ್ತು ಇನ್ನೊಬ್ಬ ಸಚಿವ ಅನಿಲ್ ಪರಬ್ ಅವರು ಗುತ್ತಿಗೆದಾರರಿಂದ ಹಣ ಸಂಗ್ರಹಿಸುವಂತೆ ಕೇಳಿಕೊಂಡಿದ್ದಾರೆ ಎಂದು ಪತ್ರವೊಂದರಲ್ಲಿ ಅಮಾನತುಗೊಂಡ ಕಾಪ್ ಸಚಿನ್ ವಾಜೆ ಪತ್ರವೊಂದರಲ್ಲಿ ಹೇಳಿಕೊಂಡಿದ್ದಾರೆ.
ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಆಗುತ್ತಾ? ಏನಂದ್ರು ಬಿಜೆಪಿ ನಾಯಕ  title=
file photo

ನವದೆಹಲಿ: ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಅವರು ಇನ್ನೂ ಇಬ್ಬರು ರಾಜ್ಯ ಸಚಿವರು 15 ದಿನಗಳಲ್ಲಿ ರಾಜೀನಾಮೆ ನೀಡಲಿದ್ದಾರೆ ಆಗ ರಾಜ್ಯವು ರಾಷ್ಟ್ರಪತಿಗಳ ಆಡಳಿತಕ್ಕೆ ಸೂಕ್ತವಾಗಲಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ-'ಶಿವಸೇನಾ ಬಳೆ ತೊಟ್ಟಿದೆ' ಎಂದ ಫಡ್ನವೀಸ್ ಹೇಳಿಕೆಗೆ ಆದಿತ್ಯ ಠಾಕ್ರೆ ತಿರುಗೇಟು ನೀಡಿದ್ದು ಹೀಗೆ....!

ಮಾಜಿ ರಾಜ್ಯ ಗೃಹ ಸಚಿವ ಅನಿಲ್ ದೇಶ್ಮುಖ್ ಅವರು ಮುಂಬೈ ಪೊಲೀಸರಲ್ಲಿ ತಮ್ಮ ಸೇವೆಯನ್ನು ಮುಂದುವರೆಸಲು ₹ 2 ಕೋಟಿ ಬೇಡಿಕೆ ಇಟ್ಟಿದ್ದಾರೆ ಮತ್ತು ಇನ್ನೊಬ್ಬ ಸಚಿವ ಅನಿಲ್ ಪರಬ್ ಅವರು ಗುತ್ತಿಗೆದಾರರಿಂದ ಹಣ ಸಂಗ್ರಹಿಸುವಂತೆ ಕೇಳಿಕೊಂಡಿದ್ದಾರೆ ಎಂದು ಪತ್ರವೊಂದರಲ್ಲಿ ಅಮಾನತುಗೊಂಡ ಕಾಪ್ ಸಚಿನ್ ವಾಜೆ ಪತ್ರವೊಂದರಲ್ಲಿ ಹೇಳಿಕೊಂಡಿದ್ದಾರೆ.

ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ಸಿಂಗ್ ಅವರ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಸಿಬಿಐ ತನಿಖೆಗೆ ಬಾಂಬೆ ಹೈಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ಹಿರಿಯ ಎನ್‌ಸಿಪಿ ಮುಖಂಡ ಅನಿಲ್ ದೇಶ್ಮುಖ್ ಸೋಮವಾರ ರಾಜ್ಯ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಆದರೆ ಶಿವಸೇನೆ ಮುಖಂಡ ಅನಿಲ್ ಪರಬ್ ಈ ಆರೋಪಗಳನ್ನು ನಿರಾಕರಿಸಿದ್ದಾರೆ.

ಇದನ್ನು ಓದಿ-ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿ ಉಸ್ತುವಾರಿಯಾಗಿ ದೇವೇಂದ್ರ ಫಡ್ನವೀಸ್ ನೇಮಕ

ಇಂದು ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಕಾಂತ್ ಪಾಟೀಲ್,ಭವಿಷ್ಯದಲ್ಲಿ ಏನಿದೆ ಎಂಬುದು ಸಾಮಾನ್ಯ ಜನರ ಊಹೆ' ಎಂದು ಹೇಳಿದರು.ಇನ್ನೂ 15 ದಿನಗಳಲ್ಲಿ ಇಬ್ಬರು ರಾಜ್ಯ ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ. ಕೆಲವರು ಈ ಮಂತ್ರಿಗಳ ವಿರುದ್ಧ ನ್ಯಾಯಾಲಯಕ್ಕೆ ಹೋಗುತ್ತಾರೆ ಮತ್ತು ನಂತರ ಅವರು ತ್ಯಜಿಸಬೇಕಾಗುತ್ತದೆ" ಎಂದು ಹೇಳಿದರು.ಸಾರಿಗೆ ಸಚಿವ ಅನಿಲ್ ಪರಬ್ ವಿರುದ್ಧದ ಆರೋಪಗಳನ್ನು ಅನಿಲ್ ದೇಶ್ಮುಖ್ ವಿರುದ್ಧದ ಆರೋಪಗಳ ತನಿಖೆಯೊಂದಿಗೆ ಕೂಡಿಸುವ ಸಾಧ್ಯತೆಯಿದೆ ಎಂದು ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ.

ಇದನ್ನೂ ಓದಿ: Sharjeel Usmani: 'ಹಿಂದೂ ಸಮಾಜ ಕೊಳೆತುಹೋಗಿದೆ, ಲಿಂಚಿಂಗ್ ನಡೆಸಿ ಪೂಜೆ ಮಾಡುತ್ತಾರೆ'

ಮಹಾರಾಷ್ಟ್ರವು ರಾಷ್ಟ್ರಪತಿಗಳ ಆಡಳಿತಕ್ಕೆ ಸೂಕ್ತವಾದ ಪ್ರಕರಣವಾಗಿದೆ.ರಾಜ್ಯದಲ್ಲಿ ಏನು ನಡೆಯುತ್ತಿದೆ, ಇಲ್ಲಿ ರಾಷ್ಟ್ರಪತಿಗಳ ಆಡಳಿತವನ್ನು ಹೇರಲು ಇನ್ನೇನು ಬೇಕು ಎಂದು ತಜ್ಞರು ವಿವರಿಸಬೇಕು ಎಂದರು.ನಾಗ್ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿಯ ಹಿರಿಯ ಮುಖಂಡ ದೇವೇಂದ್ರ ಫಡ್ನವೀಸ್ (Devendra Fadnavis) ಅವರು ತಮ್ಮ ಪತ್ರದಲ್ಲಿ ವಾಜೆ ಹೇಳಿಕೊಂಡ ವಿಚಾರಗಳು ಗಂಭೀರವಾಗಿದೆ ಮತ್ತು ಇದರ ಬಗ್ಗೆ ಚರ್ಚಿಸುವ ಅವಶ್ಯಕತೆಯಿದೆ ಎಂದು ಹೇಳಿದರು. ಹೊರಬರುತ್ತಿರುವ ಮತ್ತು ನಡೆಯುತ್ತಿರುವ ಸಂಗತಿಗಳು ಮಹಾರಾಷ್ಟ್ರ ಮತ್ತು ರಾಜ್ಯ ಪೊಲೀಸರ ಪ್ರತಿಷ್ಠೆಗೆ ಒಳ್ಳೆಯದಲ್ಲ.

ಸಿಬಿಐ ಅಥವಾ ಇನ್ನಾವುದೇ ಸಮರ್ಥ ಪ್ರಾಧಿಕಾರವು ಪತ್ರದ ವಿಷಯದ ಬಗ್ಗೆ ತನಿಖೆ ನಡೆಸಿ ಸತ್ಯವನ್ನು ಹೊರತರಬೇಕು ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News