28 ವರ್ಷಗಳ ಬಳಿಕ ದೇವಾಲಯಕ್ಕೆ ಬಂತು ಆನೆ! ಹೊರ ಪ್ರಪಂಚ ಕಾಣುತ್ತಿದ್ದಂತೆಯೇ ಮಾವುತನನ್ನು ತಿವಿದು ಕೊಂದ ಮದಗಜ

Mahout Killed By Tusker:36 ವರ್ಷದ ಮಾವುತನನ್ನು ಚಂದ್ರಶೇಖರನ್ ಆನೆ ಕೊಂದಿದೆ.  ಆನೆಗೆ ನೀರು ಕೊಡಲು ಹೋದ ತಕ್ಷಣ ಆನೆ ಆತನನ್ನು ಎತ್ತಿ ಎಸೆದಿದೆ.

Written by - Ranjitha R K | Last Updated : Nov 9, 2023, 02:36 PM IST
  • ಕೇರಳದ ತ್ರಿಶೂರ್‌ನಿಂದ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ
  • ಮಾವುತನನ್ನು ಹತ್ಯೆ ಮಾಡಿದ ಆನೆ
  • ಭಯಾನಕವಾಗಿದೆ ಚಂದ್ರಶೇಖರನ್ ಇತಿಹಾಸ
 28 ವರ್ಷಗಳ ಬಳಿಕ ದೇವಾಲಯಕ್ಕೆ ಬಂತು ಆನೆ! ಹೊರ ಪ್ರಪಂಚ ಕಾಣುತ್ತಿದ್ದಂತೆಯೇ ಮಾವುತನನ್ನು ತಿವಿದು ಕೊಂದ ಮದಗಜ  title=

Mahout Killed By Tusker : ಕೇರಳದ ತ್ರಿಶೂರ್‌ನಿಂದ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ವಾಸ್ತವವಾಗಿ, ಇಲ್ಲಿ ಚಂದ್ರಶೇಖರನ್ ಎಂಬ ಆನೆಯು ಮಾವುತನನ್ನು ಹತ್ಯೆ ಮಾಡಿದೆ. 28 ವರ್ಷಗಳ ನಂತರ ಈ ಆನೆಯನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಲಾಗಿತ್ತು.   ಮಾವುತ ಆನೆಗೆ ನೀರು ಕುಡಿಸುತ್ತಿದ್ದ ಸಂದರ್ಭದಲ್ಲಿ ಸಿಟ್ಟಿಗೆದ್ದ ಆನೆ ಮಾವುತನನ್ನು ಎತ್ತಿ ಬಿಸಾಡಿದೆ. ಮಾತ್ರವಲ್ಲ ತನ್ನ ದಂತದಿಂದ ತಿವಿದಿದೆ. 

ಆನೆಯ ಕೋಪಕ್ಕೆ ಮಾವುತ ಬಲಿ :
36 ವರ್ಷದ ಮಾವುತನನ್ನು ಚಂದ್ರಶೇಖರನ್ ಆನೆ ಕೊಂದಿದೆ.  ಮುಖ್ಯ ಮಾವುತ ರಜೆಯಲ್ಲಿದ್ದು, ಅವರ ಜಾಗಕ್ಕೆ ಮತ್ತೊಬ್ಬ ಮಾವುತ ರತೀಶ್ ಬಂದಿದ್ದರು. ಆನೆಗೆ ನೀರು ಕೊಡಲು ಹೋದ ತಕ್ಷಣ ಆನೆ ಆತನನ್ನು ಎತ್ತಿ ಎಸೆದಿದೆ. ಘಟನೆಯ ನಂತರ ಗಾಯಾಳು ರತೀಶ್ ನನ್ನು ತಕ್ಷಣ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಪ್ರಯೋಜನವಾಗಲಿಲ್ಲ. 

ಇದನ್ನೂ ಓದಿ :Daily GK Quiz: ಭಾರತದ ಮೊದಲ ವಿಶ್ವ ಪರಂಪರೆಯ ನಗರ ಯಾವುದು..?

ಭಯಾನಕವಾಗಿದೆ ಚಂದ್ರಶೇಖರನ್ ಇತಿಹಾಸ :  
ಆನೆ ಮೊದಲಿನಿಂದಲೂ ಕೋಪ ಸ್ವಭಾವದ್ದಾಗಿತ್ತು. ಈ ಹಿಂದೆಯೂ  ಚಂದ್ರಶೇಖರನ್ ಇಂತಹ  ಕೃತ್ಯ ಎಸಗಿದ್ದ. ಆತನ ಆಕ್ರಮಣಕಾರಿ ಸ್ವಭಾವದಿಂದಾಗಿ, ಕಳೆದ 3 ದಶಕಗಳಿಂದಲೂ ಆತನನ್ನು ಹೊರಗೆ ಕರೆದುಕೊಂಡು ಬಂದಿರಲಿಲ್ಲ. ಇದಕ್ಕೂ ಮುನ್ನ ಕೂಡಾ ಚಂದ್ರಶೇಖರನ್ ಮಾವುತ, ಸಹ ಆನೆಗಳ ಮೇಲೆ ದಾಳಿ ಮಾಡಿದ್ದ ಎನ್ನಲಾಗಿದೆ.  ಇದೀಗ ಹಬ್ಬ ಎನ್ನುವ ಕಾರಣಕ್ಕೆ ಆತನನ್ನು ಹೊರಗೆ ಕರೆತರಲಾಗಿತ್ತು. 

ಚಂದ್ರಶೇಖರನ್ ಎಲ್ಲಿ ವಾಸಿಸುತ್ತಾರೆ? :
ಗುರುವಾಯೂರಿನಲ್ಲಿರುವ ಈ ಆನೆ ಶಿಬಿರವನ್ನು ದೇವಸ್ಥಾನದ ಆಡಳಿತ ಮಂಡಳಿ ನಡೆಸುತ್ತಿದೆ. ಪ್ರಸ್ತುತ ಚಂದ್ರಶೇಖರನ್ ಸೇರಿದಂತೆ ಸುಮಾರು 60 ಆನೆಗಳು ಇಲ್ಲಿ ವಾಸಿಸುತ್ತಿವೆ. ಇಲ್ಲಿ ಆನೆಗಳಿಗೆ ಹಲವು ಬಗೆಯ ಉತ್ಸವಗಳಲ್ಲಿ ಪಾಲ್ಗೊಳ್ಳುವ ಬಗ್ಗೆ ತರಬೇತಿ ನೀಡಲಾಗುತ್ತದೆ. ಇಲ್ಲಿಂದ ಅನೇಕ ಆನೆಗಳು ಮೆರವಣಿಗೆ ಮತ್ತು ಧಾರ್ಮಿಕ ಪ್ರಯಾಣಕ್ಕೆ ಹೋಗುತ್ತವೆ.

ಇದನ್ನೂ ಓದಿ : ಜಮ್ಮು-ಕಾಶ್ಮೀರದ ಶೋಪಿಯಾನ್‌ನಲ್ಲಿ ಎನ್‌ಕೌಂಟರ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News