ಔಷಧಿ ತರಲು 30 ರೂ. ಕೇಳಿದ ಪತ್ನಿಗೆ ತಲಾಖ್ ನೀಡಿದ ಪತಿ!

ಔಷಧಿ ತೆಗೆದುಕೊಳ್ಳಲು 30 ರೂಪಾಯಿ ಕೊಡಿ ಎಂದು ಪತಿಯ ಬಳಿ ಕೇಳಿದ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಘಟನೆ ಉತ್ತರ ಪ್ರದೇಶದ ಹಾಪುರದಲ್ಲಿ ನಡೆದಿದೆ.

Updated: Aug 13, 2019 , 05:58 PM IST
ಔಷಧಿ ತರಲು 30 ರೂ. ಕೇಳಿದ ಪತ್ನಿಗೆ ತಲಾಖ್ ನೀಡಿದ ಪತಿ!

ಹಾಪುರ: ಆರೋಗ್ಯ ಸರಿಯಿಲ್ಲ, ಔಷಧಿ ತೆಗೆದುಕೊಳ್ಳಲು 30 ರೂಪಾಯಿ ಕೊಡಿ ಎಂದು ಪತಿಯ ಬಳಿ ಕೇಳಿದ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಘಟನೆ ಉತ್ತರ ಪ್ರದೇಶದ ಹಾಪುರದಲ್ಲಿ ನಡೆದಿದೆ.

"ನನ್ನ ಮಗಳು ಆರೋಗ್ಯ ಸರಿಯಿಲ್ಲ. ಆಸ್ಪತ್ರೆಗೆ ಹೋಗಬೇಕು, ಔಷಧಿ ತರಬೇಕು, ಹಣ ಕೊಡಿ ಎಂದು ಕೇಳಿದ್ದಕ್ಕೆ, ಆಕೆಯ ಗಂಡ ತಲಾಖ್ ನೀಡಿದ್ದಾನೆ. ಅಲ್ಲದೆ, ಆಕೆಯನ್ನು ಮನೆಯಿಂದ ಹೊರಹಾಕಲಾಗಿದೆ" ಎಂದು ಮಹಿಳೆಯ ತಾಯಿ ಹೇಳಿದ್ದಾರೆ. 

"ಮೂರು ವರ್ಷಗಳ ಹಿಂದೆ ಈತನನ್ನು ಮದುವೆಯಾಗಿದ್ದೆ. ಹುಷಾರಿಲ್ಲ, ಮಾತ್ರೆ ತರಲು ಕೇವಲ 30 ರೂಪಾಯಿ ಕೇಳಿದ್ದಕ್ಕೆ ತಲಾಖ್ ನೀಡಿ, ಮನೆಯಿಂದಲೇ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೆ, ತನ್ನ ಇಬ್ಬರು ಮಕ್ಕಳನ್ನೂ ತನ್ನಿಂದ ದೂರ ಮಾಡಿದ್ದಾರೆ" ಎಂದು ಸಂತ್ರಸ್ತ ಮಹಿಳೆ ಅಳಲು ತೋಡಿಕೊಂಡಿದ್ದಾಳೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಎಸ್‌ಪಿ ಹಪೂರ್ ರಾಜೇಶ್ ಸಿಂಗ್, "ಕೆಲವು ದಿನಗಳ ಹಿಂದೆ ತನ್ನ ಪತಿ ತ್ರಿವಳಿ ನೀಡಿದ್ದಾಗಿ ಮಹಿಳೆಯೊಬ್ಬರು ನೀಡಿರುವ ದೂರನ್ನು ನಾವು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದ್ದಾರೆ.