ಇಂದೋರ್‌ ವಿದ್ಯುತ್ ಕೇಂದ್ರದಲ್ಲಿ ಬೆಂಕಿ, ವಿದ್ಯುತ್ ಇಲ್ಲದೆ ಪರದಾಡಿದ ಜನ

ಇಂದೋರ್‌ನ ಮುಖ್ಯ ವಿದ್ಯುತ್ ಸರಬರಾಜು ಕೇಂದ್ರದಲ್ಲಿ ಗುರುವಾರ ರಾತ್ರಿ ಬೆಂಕಿ ಸಂಭವಿಸಿದ್ದು ಟ್ರಾನ್ಸ್‌ಪಾರ್ಮರ್‌ಗಳು ಸಂಪೂರ್ಣವಾಗಿ ಭಸ್ಮವಾಗಿವೆ. 

Updated: May 31, 2019 , 12:22 PM IST
ಇಂದೋರ್‌ ವಿದ್ಯುತ್ ಕೇಂದ್ರದಲ್ಲಿ ಬೆಂಕಿ, ವಿದ್ಯುತ್ ಇಲ್ಲದೆ ಪರದಾಡಿದ ಜನ
Pic Courtesy: ANI

ಇಂದೋರ್: ಇಂದೋರ್‌ನ ಮುಖ್ಯ ವಿದ್ಯುತ್ ಸರಬರಾಜು ಕೇಂದ್ರದಲ್ಲಿ ಗುರುವಾರ ರಾತ್ರಿ ಬೆಂಕಿ ಸಂಭವಿಸಿದ್ದು ಟ್ರಾನ್ಸ್‌ಪಾರ್ಮರ್‌ಗಳು ಸಂಪೂರ್ಣವಾಗಿ ಭಸ್ಮವಾಗಿವೆ. ಪರಿಣಾಮವಾಗಿ ನಗರದಾದ್ಯಂತ ವಿದ್ಯುತ್ ಇಲ್ಲದೆ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. 

ಮುಖ್ಯ ವಿದ್ಯುತ್ ಸರಬರಾಜು ಕೇಂದ್ರದಲ್ಲಿ ಬೆಂಕಿ ಅವಘಡದ ವಿಷಯ ಸ್ಥಳಕ್ಕೆ ಧಾವಿಸಿದ 10 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು. ಶುಕ್ರವಾರ ಬೆಳಿಗ್ಗೆ ಕೂಡ ಬೆಂಕಿ ನಂದಿಸುವ ಕಾರ್ಯಚರಣೆ ಮುಂದುವರೆದಿದೆ.

ವಿದ್ಯುತ್ ಸರಬರಾಜು ಕೇಂದ್ರದಲ್ಲಿ  ಟ್ರಾನ್ಸ್‌ಫಾರ್ಮರ್‌ಗಳು ಪಕ್ಕ ಪಕ್ಕ ಹೊಂದಿಕೊಂಡೇ ಇದ್ದ ಕಾರಣ ಒಂದು ಟ್ರಾನ್ಸ್‌ಫಾರ್ಮರ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಬಹುಬೇಗ ಇತರ ಟ್ರಾನ್ಸ್‌ಫಾರ್ಮರ್‌ಗೆ ತಗುಲಿ ಬೆಂಕಿ ಜ್ವಾಲೆಯಂತೆ ಹರಡಲು ಕಾರಣವಾಗಿದೆ ಎಂದು ಅಗ್ನಿಶಾಮಕದಳ ಅಧಿಕಾರಿಗಳು ತಿಳಿಸಿದ್ದಾರೆ.