2019ರ ಲೋಕಸಭಾ ಚುನಾವಣೆಗೆ ಎಸ್ಪಿ ಜೊತೆ ಯಾವುದೇ ಮೈತ್ರಿ ಇಲ್ಲ: ಮಾಯಾವತಿ

2019ರ ಲೋಕಸಭೆ ಚುನಾವಣೆಗಾಗಿ ಬಹುಜನ ಸಮಾಜವಾದಿ ಪಕ್ಷ ಮತ್ತು ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ನಡುವೆ ಯಾವುದೇ ಮೈತ್ರಿ ಇಲ್ಲ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಭಾನುವಾರ ಸ್ಪಷ್ಟಪಡಿಸಿದ್ದಾರೆ.

Last Updated : Mar 4, 2018, 07:05 PM IST
2019ರ ಲೋಕಸಭಾ ಚುನಾವಣೆಗೆ ಎಸ್ಪಿ ಜೊತೆ ಯಾವುದೇ ಮೈತ್ರಿ ಇಲ್ಲ: ಮಾಯಾವತಿ  title=

2019ರ ಲೋಕಸಭೆ ಚುನಾವಣೆಗಾಗಿ ಬಹುಜನ ಸಮಾಜವಾದಿ ಪಕ್ಷ ಮತ್ತು ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ನಡುವೆ ಯಾವುದೇ ಮೈತ್ರಿ ಇಲ್ಲ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಭಾನುವಾರ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಇದುವರೆಗೆ ಈ ಎರಡೂ ಪಕ್ಷಗಳ ಮೈತ್ರಿ ಕುರಿತು ಇದ್ದ ಎಲ್ಲ ವದಂತಿಗಳಿಗೂ ತೆರೆ ಬಿದ್ದಂತಾಗಿದೆ. 

ಈ ಕುರಿತು ಲಖನೌನಲ್ಲಿ ಪತ್ರಿಕಾಗೊಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಮಾಯಾವತಿ, 2019 ಲೋಕಸಭೆ ಚುನಾವಣೆಗೆ ಬಿಎಸ್ಪಿ ಮತ್ತು ಎಸ್ಪಿ ಮೈತ್ರಿಕೂಟದ ಬಗ್ಗೆ ಇದ್ದ ಎಲ್ಲ ವದಂತಿಗಳು ಸುಳ್ಳು ಮತ್ತು ಆಧಾರರಹಿತವಾಗಿವೆ. ಬಿಎಸ್ಪಿ ಯಾವುದೇ ರಾಜಕೀಯ ಪಕ್ಷದೊಂದಿಗೆ ಮೈತ್ರಿ ಹೊಂದಿಲ್ಲ ಎಂದು ಸ್ಪಷ್ಟಪಡಿಸಲು ಇಚ್ಚಿಸುತ್ತೇನೆ ಎಂದು ಹೇಳಿದರು.

ಆದಾಗ್ಯೂ, ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಭಾರೀ ಸೋಲಿನಿಂದ ಹೊರ ಬರಲು ಇದೀಗ ನಡೆಯಲಿರುವ ಗೋರಖ್‌ಪುರ್‌ ಮತ್ತು ಫುಲ್ಪುರ್ ಲೋಕಾಸಭಾ ಉಪ ಚುನಾವಣೆಯಲ್ಲಿ ಬಿಎಸ್ಪಿ ಮತ್ತು ಎಸ್ಪಿ ಪರಸ್ಪರ ಅಭ್ಯರ್ಥಿಗಳಿಗೆ ಬೆಂಬಲ ನೀಡುವುದಾಗಿ ಮಾಯಾವತಿ ಹೇಳಿದ್ದಾರೆ. 

"ಲೋಕಸಭಾ ಕ್ಷೇತ್ರಗಳಾದ ಫುಲ್ಪುರ್ ಮತ್ತು ಗೋರಖ್ಪುರ ಉಪಚುನಾವಣೆಗೆ ನಾವು ಯಾವುದೇ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತಿಲ್ಲ. ನಮ್ಮ ಪಕ್ಷದ ಸದಸ್ಯರು ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ'' ಎಂದು ಮಾಯಾವತಿ ಹೇಳಿದರು.

ಅಖಿಲೇಶ್ ಯಾದವ್ ಪಕ್ಷದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಕುರಿತು ಸೂಚನೆ ನೀಡಿದ ಮಾಯಾವತಿ, ಈ ಭಾರಿಯ ಲೋಕಸಭಾ ಉಪಚುನಾವಣೆಯಲ್ಲಿ ನಾವು ಎಸ್ಪಿಗೆ ಬೆಂಬಲ ನಿದಲಿದ್ದು, ಅದಕ್ಕೆ ಪ್ರತಿಯಾಗಿ ಎಸ್ಪಿಯು ನಮ್ಮ ರಾಜ್ಯಸಭಾ ಅಭ್ಯರ್ಥಿಗೆ ಬೆಂಬಲ ನೀಡಲಿದೆ ಎಂದು ಅವರು ಹೇಳಿದರು.

ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಪರಾಭಾವಗೊಳಿಸಲು ಎಸ್ಪಿ ಇಂದ ಬಿಎಸ್ಪಿ ಗೆ ಮತ್ತು ಬಿಎಸ್ಪಿ ಇಂದ ಎಸ್ಪಿಗೆ ಮತಗಳನ್ನು ವರ್ಗಾವಣೆ ಮಾದಿಕೊಂಡ ಮಾತ್ರಕ್ಕೆ ಅದನ್ನು ಚುನಾವಣಾ ಮೈತ್ರಿ ಎಂದು ಅರ್ಥೈಸಿಕೊಳ್ಳುವುದು ತಪ್ಪು ಎಂದು ಎಂದು ಮಾಯಾವತಿ ಹೇಳಿದರು. 

Trending News