ಜನಸಾಮಾನ್ಯರಿಗೆ ಹಣದುಬ್ಬರದ ದೊಡ್ಡ ಹೊಡೆತ; ಅಗತ್ಯ ಔಷಧಿಗಳ ಬೆಲೆಗಳಲ್ಲಿ ಏರಿಕೆ!

Medicines Price Hike: ಹಣದುಬ್ಬರದಿಂದ ಕಂಗೆಟ್ಟಿರುವ ಸಾಮಾನ್ಯ ಜನರಿಗೆ ಮತ್ತೊಂದು ಶಾಕ್ ಸಿಗಲಿದೆ. ಏಕೆಂದರೆ ಏಪ್ರಿಲ್ 1ರಿಂದ ನೋವು ನಿವಾರಕ, ಆ್ಯಂಟಿಬಯೋಟಿಕ್ ಸೇರಿದಂತೆ ಹಲವು ಅಗತ್ಯ ಔಷಧಿಗಳ ಬೆಲೆ ಏರಿಕೆಯಾಗಲಿದೆ.

Written by - Puttaraj K Alur | Last Updated : Mar 28, 2023, 01:10 PM IST
  • ಹಣದುಬ್ಬರದಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ಮತ್ತೊಂದು ಆಘಾತ
  • ಏಪ್ರಿಲ್ 1ರಿಂದ ಅಗತ್ಯ ಔಷಧಿಗಳ ಬೆಲೆ ಮತ್ತಷ್ಟು ಏರಿಕೆಯಾಗಲಿದೆ
  • 900 ಔಷಧಿಗಳ ಬೆಲೆಗಳಲ್ಲಿ ಶೇ.12ರಷ್ಟು ಹೆಚ್ಚಳವಾಗುವ ಸಾಧ್ಯತೆ
ಜನಸಾಮಾನ್ಯರಿಗೆ ಹಣದುಬ್ಬರದ ದೊಡ್ಡ ಹೊಡೆತ; ಅಗತ್ಯ ಔಷಧಿಗಳ ಬೆಲೆಗಳಲ್ಲಿ ಏರಿಕೆ! title=
ಅಗತ್ಯ ಔಷಧಗಳ ಬೆಲೆ ಏರಿಕೆ

ನವದೆಹಲಿ: ಹಣದುಬ್ಬರದಿಂದ ಬಳಲುತ್ತಿರುವ ಜನಸಾಮಾನ್ಯರಿಗೆ ಏಪ್ರಿಲ್ 1ರಂದು ಮತ್ತೊಂದು ಆಘಾತ ಎದುರಾಗಲಿದ್ದು, ಅಗತ್ಯ ಔಷಧಿಗಳ ಬೆಲೆ ಮತ್ತಷ್ಟು ಏರಿಕೆಯಾಗಲಿದೆ. ಏಪ್ರಿಲ್ 1ರಿಂದ ನೋವು ನಿವಾರಕಗಳು ಮತ್ತು ಪ್ರತಿಜೀವಕಗಳು ಸೇರಿದಂತೆ ಅನೇಕ ಅಗತ್ಯ ಔಷಧಿಗಳ ಬೆಲೆಗಳು ಹೆಚ್ಚಾಗಲಿವೆ. ವಾರ್ಷಿಕ ಸಗಟು ಬೆಲೆ ಸೂಚ್ಯಂಕದಲ್ಲಿ (WPI) ಬದಲಾವಣೆಗೆ ಅನುಗುಣವಾಗಿ ಔಷಧೀಯ ಕಂಪನಿಗಳಿಗೆ ಹೆಚ್ಚಳಕ್ಕೆ ಅನುಮತಿ ನೀಡಲು ಸರ್ಕಾರ ಸಿದ್ಧವಾಗಿದೆ.

ಔಷಧಿಗಳ ಬೆಲೆಗಳಲ್ಲಿ ಶೇ.12ರಷ್ಟು ಏರಿಕೆ

ಹಣದುಬ್ಬರದ ವಿರುದ್ಧ ಹೋರಾಡುತ್ತಿರುವ ಸಾಮಾನ್ಯ ಜನರಿಗೆ ಇದು ದೊಡ್ಡ ಹೊಡೆತವಾಗಿದೆ. ಏಕೆಂದರೆ ಔಷಧ ಬೆಲೆ ನಿಯಂತ್ರಕ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (NPPA)ವು ಸೋಮವಾರದಂದು ಸರ್ಕಾರವು ಸೂಚಿಸಿರುವ ವಾರ್ಷಿಕ ಸಗಟು ಬೆಲೆ ಸೂಚ್ಯಂಕದಲ್ಲಿ (WPI) ವಾರ್ಷಿಕ ಬದಲಾವಣೆಯು ಶೇ.12.12ರಷ್ಟು ಬೆಲೆ ಹೆಚ್ಚಳವಾಗಲಿದೆ ಎಂದು ಹೇಳಿದೆ. ಹೆಚ್ಚುತ್ತಿರುವ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ಫಾರ್ಮಾ ಕಂಪನಿಗಳು ಔಷಧಿಗಳ ಬೆಲೆ ಹೆಚ್ಚಿಸಲು ಒತ್ತಾಯಿಸುತ್ತಿವೆ.  

ಇದನ್ನೂ ಓದಿ: God Sent Us A Gift: ಹೆಣ್ಣು ಮಗುವಿಗೆ ತಂದೆಯಾದ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್!

900 ಔಷಧಿಗಳ ಬೆಲೆ ಹೆಚ್ಚಳ

ವರದಿಯ ಪ್ರಕಾರ ನೋವು ನಿವಾರಕಗಳು, ಸೋಂಕು ನಿವಾರಕಗಳು, ಪ್ರತಿಜೀವಕಗಳು ಮತ್ತು ಹೃದಯ ಔಷಧಿಗಳು ಸೇರಿದಂತೆ ಸುಮಾರು 900 ಔಷಧಿಗಳ ಬೆಲೆಯು ಶೇ.12ಕ್ಕಿಂತ ಹೆಚ್ಚು ಹೆಚ್ಚಾಗಬಹುದು. ಉಳಿದ ಔಷಧಿಗಳು ನಾನ್-ಶೆಡ್ಯೂಲ್ಡ್ ಔಷಧಿಗಳ ವರ್ಗದಲ್ಲಿ ಬರುತ್ತವೆ ಮತ್ತು ಅವುಗಳ ಬೆಲೆಗಳನ್ನು ಶೇ.10ರಷ್ಟು ಹೆಚ್ಚಿಸಬಹುದು. ನಿಯಮಗಳ ಪ್ರಕಾರ ಸರ್ಕಾರದ ಅನುಮತಿಯಿಲ್ಲದೆ ನಿಗದಿತ ಔಷಧಿಗಳ ಬೆಲೆ ಹೆಚ್ಚಿಸಲಾಗುವುದಿಲ್ಲ.

ಇದರ ಆಧಾರದ ಮೇಲೆ ಬೆಲೆ ಹೆಚ್ಚಳ

ಔಷಧ ಬೆಲೆ ನಿಯಂತ್ರಕ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (NPPA) ಹಿಂದಿನ ಕ್ಯಾಲೆಂಡರ್ ವರ್ಷದ ವಾರ್ಷಿಕ ಸಗಟು ಬೆಲೆ ಸೂಚ್ಯಂಕ (WPI) ಪ್ರಕಾರ ಪ್ರತಿವರ್ಷ 1ನೇ ಏಪ್ರಿಲ್ ಅಥವಾ ಮೊದಲು ನಿಗದಿತ ಸೂತ್ರೀಕರಣಗಳ ಸೀಲಿಂಗ್ ಬೆಲೆಯನ್ನು ಪರಿಷ್ಕರಿಸಲು ಅನುಮತಿಸಲಾಗಿದೆ. ಔಷಧ ಬೆಲೆ ನಿಯಂತ್ರಣ ಆದೇಶ 2013ರ ಕಲಂ 16ರಲ್ಲಿ ಈ ನಿಟ್ಟಿನಲ್ಲಿ ನಿಯಮವಿದೆ. ಇದರ ಆಧಾರದ ಮೇಲೆ NPPA ಪ್ರತಿವರ್ಷ ಔಷಧಿಗಳ ಬೆಲೆಗಳನ್ನು ಪರಿಷ್ಕರಿಸುತ್ತದೆ ಮತ್ತು ಹೊಸ ಬೆಲೆಗಳು ಏಪ್ರಿಲ್ 1ರಿಂದ ಅನ್ವಯವಾಗುತ್ತವೆ.

ಇದನ್ನೂ ಓದಿ: Nitin Gadkari : 'ನನ್ನ ಕೆಲಸ ಇಷ್ಟವಾಗಿದ್ರೆ ಮತ ಹಾಕಿ, ಇಲ್ಲದಿದ್ರೆ ಹಾಕಬೇಡಿ, ನಾನು ಬೆಣ್ಣೆ ಹಚ್ಚುವುದಿಲ್ಲ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

Trending News