Mega Defence Deal - ನವದೆಹಲಿ: ಭದ್ರತಾ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (CCS) ಬುಧವಾರ 83 ತೇಜಸ್ ಲೈಟ್ ಯುದ್ಧ ವಿಮಾನಗಳ ವಾಯುಪಡೆ ಸೇರ್ಪಡೆಗೆ ಅನುಮೋದನೆ ನೀಡಿದೆ . ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ತಯಾರಿಸಿರುವ ಈ ವಿಮಾನಗಳಿಗೆ 48 ಸಾವಿರ ಕೋಟಿ ರೂ. ಡೀಲ್ ಮಾಡಿಕೊಳ್ಳಲಾಗಿದೆ. ಇದು ಇಲ್ಲಿಯವರೆಗೆ ಭಾರತ ಮಾಡಿಕೊಂಡ ಅತಿದೊಡ್ಡ ಸ್ವದೇಶಿ ರಕ್ಷಣಾ ಒಪ್ಪಂದವಾಗಿದೆ.
ಪ್ರಧಾನಿ ಮೋದಿ ನೇತೃತ್ವದ ಕ್ಯಾಬಿನೆಟ್ ಸಮಿತಿಯಿಂದ ಡೀಲ್ ಫೈನಲ್
ಮಾರ್ಚ್ 2020 ರಲ್ಲಿ, ಡಿಫೆನ್ಸ್ ಅಕ್ವಿಸಿಷನ್ ಕೌನ್ಸಿಲ್ 83 ಅಡ್ವಾನ್ಸ್ಡ್ ಮಾರ್ಕ್ 1 ಎ ಆವೃತ್ತಿ ತೇಜಸ್ ವಿಮಾನಗಳನ್ನು ಖರೀದಿಸಲು ಅನುಮೋದನೆ ನೀಡಿತ್ತು. ಈಗ ಪಿಎಂ ಮೋದಿ ನೇತೃತ್ವದ ಸಿಸಿಎಸ್ ಈ ಒಪ್ಪಂದವನ್ನು ಅಂತಿಮಗೊಳಿಸಿದೆ.
ಇದನ್ನು ಓದಿ- Mission Blue: ಸಾಗರದಿಂದ ಆಗಸದವರೆಗೆ ಭಾರತೀಯ ಶೌರ್ಯಕ್ಕೆ ಸಿಗಲಿದೆ ನೂತನ ಶಕ್ತಿ
ಟ್ವೀಟ್ ಮಾಡುವ ಮೂಲಕ ರಕ್ಷಣಾ ಸಚಿವರು
ಡೀಲ್ ಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, "ಪಿಎಂ ಮೋದಿ ನೇತೃತ್ವದ ಸಿಸಿಎಸ್ ಇಂದು ಅತಿದೊಡ್ಡ ಸ್ವದೇಶಿ ಹಾಗೂ ಐತಿಹಾಸಿಕ ರಕ್ಷಣಾ ಒಪ್ಪಂದವನ್ನು ಅಂಗೀಕರಿಸಿದೆ. ಈ ಒಪ್ಪಂದದ ಮೌಲ್ಯ 48 ಸಾವಿರ ಕೋಟಿ ರೂ. ಆಗಿದ್ದು, ಇದು ಸ್ವದೇಶಿ 'ಎಲ್ಸಿಎ ತೇಜಸ್' ಮೂಲಕ ನಮ್ಮ ವಾಯುಪಡೆಯ ನೌಕಾಪಡೆಯ ಬಲವನ್ನು ಹೆಚ್ಚಿಸಲಿದೆ. ಈ ಒಪ್ಪಂದವು ಭಾರತದ ರಕ್ಷಣಾ ಉತ್ಪಾದನೆಯ ಕ್ಷೇತ್ರದಲ್ಲಿ ಗೇಮ್ ಚೆಂಜರ್ ಎಂದು ಸಾಬೀತಾಗಲಿದೆ" ಎಂದು ಹೇಳಿದ್ದಾರೆ.
The CCS chaired by PM Sh. @narendramodi today approved the largest indigenous defence procurement deal worth about 48000 Crores to strengthen IAF’s fleet of homegrown fighter jet ‘LCA-Tejas’. This deal will be a game changer for self reliance in the Indian defence manufacturing.
— Rajnath Singh (@rajnathsingh) January 13, 2021
ಇದನ್ನು ಓದಿ- ಲಡಾಖ್ ನಲ್ಲಿ ಭಾರತೀಯ ಸೈನಿಕರಿಗಾಗಿ ನಿರ್ಮಾಣಗೊಂಡ ವಿಶೇಷ ಮನೆಗಳು, -40 ಡಿಗ್ರಿ ತಾಪಮಾನ ಕೂಡ ಪರಿಣಾಮ ಬೀರಲ್ಲ
ತೇಜಸ್ ವಿಮಾನವು ಮುಂದಿನ ವರ್ಷಗಳಲ್ಲಿ ಭಾರತೀಯ ವಾಯುಪಡೆಗೆ 'ಬೆನ್ನೆಲುಬು' ಎಂದು ಸಾಬೀತಾಗಲಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ಎಚ್ಎಎಲ್ ತನ್ನ ಎರಡನೇ ಸಾಲಿನ ಉತ್ಪಾದನೆಯನ್ನು ನಾಸಿಕ್ ಮತ್ತು ಬೆಂಗಳೂರು ವಿಭಾಗಗಳಲ್ಲಿ ಪ್ರಾರಂಭಿಸಿದೆ. ವಿಶೇಷವೆಂದರೆ, ಈ ಒಪ್ಪಂದವು ಈ ಹಿಂದೆ ಮಾಡಿದ 40 ಯುದ್ಧ ವಿಮಾನಗಳ ಒಪ್ಪಂದಕ್ಕಿಂತ ಭಿನ್ನವಾಗಿದೆ. ಮುಂದಿನ ಆರು ರಿಂದ ಏಳು ವರ್ಷಗಳಲ್ಲಿ ಈ ವಿಮಾನಗಳನ್ನು ದೇಶದ ವಾಯುಸೇನೆಯಲ್ಲಿ ಸೇರ್ಪಡೆಯಾಗಲಿದೆ.
ಇದನ್ನು ಓದಿ-ಎಲ್ಎಸಿಯಲ್ಲಿ T-90 ಟ್ಯಾಂಕ್ಗಳು ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ನಿಯೋಜಿಸಿದ ಭಾರತ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.