Mission Blue: ಸಾಗರದಿಂದ ಆಗಸದವರೆಗೆ ಭಾರತೀಯ ಶೌರ್ಯಕ್ಕೆ ಸಿಗಲಿದೆ ನೂತನ ಶಕ್ತಿ

ಚೀನಾದೊಂದಿಗಿನ ಉದ್ವಿಗ್ನತೆಯ ನಡುವೆ ಭಾರತದ ಸಾಮರ್ಥ್ಯದ ಬಗ್ಗೆ ಮತ್ತೊಂದು ಮಹತ್ವದ ಸುದ್ದಿ ಹೊರಹೊಮ್ಮಿದೆ. ಸಸಾಗರದಿಂದ ಆಗಸದವರೆಗೆ ಭಾರತೀಯ ಶೌರ್ಯ ಹೊಸ ಶಕ್ತಿ ಸಿಗಲಿದೆ. ಇದು ಭಾರತೀಯ ಸೇನೆಯ Mission Blue. ಈ ಮಿಷನ್ ಬ್ಲೂ ಅಡಿಯಲ್ಲಿ ಭಾರತದ ಉಭಯ ಮಿಲಿಟರಿ ಪಡೆಗಳು ಶಕ್ತಿಯನ್ನು ಪಡೆಯಲಿವೆ.

Last Updated : Jul 25, 2020, 06:42 PM IST
Mission Blue: ಸಾಗರದಿಂದ ಆಗಸದವರೆಗೆ ಭಾರತೀಯ ಶೌರ್ಯಕ್ಕೆ ಸಿಗಲಿದೆ ನೂತನ ಶಕ್ತಿ title=

ನವದೆಹಲಿ: ಚೀನಾದೊಂದಿಗಿನ ಉದ್ವಿಗ್ನತೆಯ ನಡುವೆ ಭಾರತದ ಸಾಮರ್ಥ್ಯದ ಬಗ್ಗೆ ಮತ್ತೊಂದು ಮಹತ್ವದ ಸುದ್ದಿ ಹೊರಹೊಮ್ಮಿದೆ. ಸಸಾಗರದಿಂದ ಆಗಸದವರೆಗೆ ಭಾರತೀಯ ಶೌರ್ಯ ಹೊಸ ಶಕ್ತಿ ಸಿಗಲಿದೆ. ಇದು ಭಾರತೀಯ ಸೇನೆಯ Mission Blue. ಈ ಮಿಷನ್ ಬ್ಲೂ ಅಡಿಯಲ್ಲಿ ಭಾರತದ ಉಭಯ ಮಿಲಿಟರಿ ಪಡೆಗಳು ಶಕ್ತಿಯನ್ನು ಪಡೆಯಲಿವೆ.

ಹೌದು, ಭಾರತ ಇದೀಗ ಅಮೆರಿಕದಿಂದ ಆರು ಪಿ -8 ಐ ವಿಮಾನಗಳನ್ನು ಖರೀದಿಸಲಿದೆ. ಪಿ -8 ಐ ವಿಮಾನದ ನೂತನ ಕಂತು ಭಾರತೀಯ ನೌಕಾಪಡೆಯ ಬಲವನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ.

ಇದಲ್ಲದೆ ಭಾರತಕ್ಕೆ ಅಮೆರಿಕದಿಂದ ಆರು ಪ್ರಿಡೇಟರ್ ಬಿ ಡ್ರೋನ್‌ಗಳು ಸಿಗಲಿವೆ. ಮಾರಣಾಂತಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ ಈ ಪ್ರಿಡೇಟರ್ ಡ್ರೋನ್‌ಗಳು ಶತ್ರುಗಳ ಗುರಿಗಳನ್ನು ಪತ್ತೆಹಚ್ಚಲು ಮತ್ತು ನಾಶಮಾಡಲು ಸಮರ್ಥವಾಗಿವೆ.

ಭಾರತೀಯ ನೌಕಾಪಡೆಗೆ ಸಮುದ್ರದಲ್ಲಿ ಪಿ 8 ಐ ವಿಮಾನದ ಹೊಸ ಕಂತು ಸಿಗಲಿದ್ದರೆ, ಭಾರತೀಯ ಸೇನೆ ಆಕಾಶದಲ್ಲಿ ಪ್ರಿಡೇಟರ್ ಬಿ ಡ್ರೋನ್ ಬಲವನ್ನು ಪಡೆಯಲಿದೆ.

ವಾಸ್ತವಿಕವಾಗಿ ಭಾರತ, ಅಮೆರಿಕಾದಿಂದ ಮತ್ತೆ ಆರು ಪ್ರೋಸಾಯಿಡನ್-8 ಐ ವಿಮಾನಗಳನ್ನು ಖರೀದಿಸಲಿದೆ. ವಿಮಾನ ಖರೀದಿಸಲು ಭಾರತ ಅಗತ್ಯ ಕ್ರಮವನ್ನು ಪ್ರಾರಂಭಿಸಿದೆ. ಭಾರತ-ಚೀನಾ ಬಿಕ್ಕಟ್ಟಿನ ನಡುವೆ ಭಾರತ ಖರೀದಿಸಲು ಹೊರಟಿರುವ ಪೋಸಿಡಾನ್ -8 ಐ ವಿಮಾನಗಳು ಪ್ರಮುಖ ಪಾತ್ರವಹಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಭಾರತವು 'ಪ್ರಿಡೇಟರ್-ಬಿ' ಮತ್ತು 'ಗ್ಲೋಬಲ್ ಹಾಕ್ ಡ್ರೋನ್‌ಗಳನ್ನು' ಖರೀದಿಸಲು ಸಾಧಯ್ವಾಗಲಿದೆ. ಏಕೆಂದರೆ ಯುಎಸ್ ತನ್ನ ಡ್ರೋನ್‌ಗಳನ್ನು ಮಾರಾಟ ಮಾಡುವ ನಿಯಮಗಳಲ್ಲಿ ಬದಲಾವಣೆಯನ್ನು ತಂದಿದೆ.

Trending News