ಕೇಂದ್ರ ರಾಜ್ಯ ಖಾತೆ ರೈಲ್ವೆ ಸಚಿವ ಸುರೇಶ್ ಅಂಗಡಿ ಇನ್ನಿಲ್ಲ

ಕೇಂದ್ರ ಖಾತೆ ರಾಜ್ಯ ರೈಲ್ವೆ ಸಚಿವ ಸುರೇಶ್ ಅಂಗಡಿ ಬುಧವಾರ ಸಂಜೆ ದೆಹಲಿಯಲ್ಲಿ ನಿಧನರಾದರು.

Updated: Sep 23, 2020 , 09:30 PM IST
ಕೇಂದ್ರ ರಾಜ್ಯ ಖಾತೆ ರೈಲ್ವೆ ಸಚಿವ ಸುರೇಶ್ ಅಂಗಡಿ ಇನ್ನಿಲ್ಲ
file photo

ನವದೆಹಲಿ: ಕೇಂದ್ರ ಖಾತೆ ರಾಜ್ಯ ರೈಲ್ವೆ ಸಚಿವ ಸುರೇಶ್ ಅಂಗಡಿ ಬುಧವಾರ ಸಂಜೆ ದೆಹಲಿಯಲ್ಲಿ ನಿಧನರಾದರು.

ಸೆಪ್ಟೆಂಬರ್ 11 ರಂದು ಅವರಿಗೆ ಕೊರೊನಾ ಧೃಡಪಟ್ಟಿರುವುದನ್ನು ತಮ್ಮ ಟ್ವಿಟ್ಟರ್ ಖಾತೆ ಮೂಲಕ ತಿಳಿಸಿದ್ದರು.ಈಗ ಚಿಕಿತ್ಸೆ ಫಲಕಾರಿಯಾಗದೆ ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿಗೆ ಕೊರೊನಾ ಧೃಢ

ರಾಜೀವ್ ಚಂದ್ರಶೇಖರ್ ಅವರು ಟ್ವೀಟ್ ಮಾಡಿ ಸಂಸದನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಸುರೇಶ ಅಂಗಡಿ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ' ಕೇಂದ್ರ ರಾಜ್ಯ ಖಾತೆ ರೈಲ್ವೆ ಸಚಿವರಾದ ಸುರೇಶ ಅಂಗಡಿ ನಿಧನರಾಗಿರುವುದು ನನಗೆ ತೀವ್ರ ದುಃಖವನ್ನು ತರಿಸಿದೆ,ಅವರು ನನಗೆ ಸಣ್ಣ ಸಹೋದರನಿದ್ದಂತೆ. ಅವರ ನಿಧನದಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ' ಎಂದು ಸಂತಾಪ ಸೂಚಿಸಿದ್ದಾರೆ.