Ministry of Cooperation: ಸಹಕಾರಿ ಆಂದೋಲನವನ್ನು ಬಲಪಡಿಸಲು ಹೊಸ ಸಚಿವಾಲಯವನ್ನು ರಚಿಸಿದ ಮೋದಿ ಸರ್ಕಾರ

ಕ್ಯಾಬಿನೆಟ್ ವಿಸ್ತರಣೆಗೆ ಒಂದು ದಿನ ಮುಂಚಿತವಾಗಿ, ದೇಶದಲ್ಲಿ ಸಹಕಾರಿ ಆಂದೋಲನವನ್ನು ಬಲಪಡಿಸಲು ನರೇಂದ್ರ ಮೋದಿ ಸರ್ಕಾರ ‘ಸಹಕಾರ ಸಚಿವಾಲಯ’ ಎಂಬ ಪ್ರತ್ಯೇಕ ಸಚಿವಾಲಯವನ್ನು ರಚಿಸಿದೆ.  

Written by - Yashaswini V | Last Updated : Jul 7, 2021, 06:45 AM IST
  • ಕೇಂದ್ರ ಸಚಿವ ಸಂಪುಟ ವಿಸ್ತರಣೆಗೂ ಮೊದಲು ಹೊಸ ಸಚಿವಾಲಯವನ್ನು ರಚಿಸಲಾಯಿತು
  • ಸಹಕಾರದ ಮೂಲಕ ಸಮೃದ್ಧಿಯ ದೃಷ್ಟಿಯನ್ನು ಸಾಕಾರಗೊಳಿಸುವುದು ಇದರ ಉದ್ದೇಶ
  • ಇದನ್ನು ಬಜೆಟ್ ಘೋಷಣೆಯ ಸಮಯದಲ್ಲಿ ಹಣಕಾಸು ಸಚಿವರು ಘೋಷಿಸಿದ್ದರು
Ministry of Cooperation: ಸಹಕಾರಿ ಆಂದೋಲನವನ್ನು ಬಲಪಡಿಸಲು ಹೊಸ ಸಚಿವಾಲಯವನ್ನು ರಚಿಸಿದ ಮೋದಿ ಸರ್ಕಾರ title=
ಸಂಪುಟ ವಿಸ್ತರಣೆಗೂ ಮೊದಲು ಹೊಸ ಸಚಿವಾಲಯವನ್ನು ರಚಿಸಿದ ಮೋದಿ ಸರ್ಕಾರ

ನವದೆಹಲಿ: ದೇಶದಲ್ಲಿ ಸಹಕಾರಿ ಆಂದೋಲನವನ್ನು ಬಲಪಡಿಸಲು ಮೋದಿ ಸರ್ಕಾರ ಮಂಗಳವಾರ ಹೊಸ ‘ಸಹಕಾರ ಸಚಿವಾಲಯ’ ಎಂಬ ಪ್ರತ್ಯೇಕ ಸಚಿವಾಲಯವನ್ನು (Ministry of Cooperation) ಘೋಷಿಸಿದೆ. 'ಸಹಕಾರದಿಂದ ಸಮೃದ್ಧಿಯ' ದೃಷ್ಟಿಯನ್ನು ಸಾಕಾರಗೊಳಿಸಲು ಇದನ್ನು ರೂಪಿಸಲಾಗಿದೆ. ಈ ಹೊಸ ಸಚಿವಾಲಯವು ದೇಶದಲ್ಲಿ ಸಹಕಾರಿ ಆಂದೋಲನವನ್ನು ಬಲಪಡಿಸಲು ಪ್ರತ್ಯೇಕ ಆಡಳಿತ, ಕಾನೂನು ಮತ್ತು ನೀತಿ ಚೌಕಟ್ಟನ್ನು ಒದಗಿಸುತ್ತದೆ ಎಂದು ಸರ್ಕಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಇದು ಸಹಕಾರ ಸಂಸ್ಥೆಗಳನ್ನು ತಳಮಟ್ಟದ ಜನರಿಗೆ ನಿಜವಾದ ಆಧಾರಿತ ಚಳುವಳಿಗೆ ಸಹಾಯ ಮಾಡುತ್ತದೆ ಎನ್ನಲಾಗಿದೆ.

ಸಹಕಾರಿ ಸಂಸ್ಥೆಗಳಿಗೆ ವ್ಯವಹಾರವನ್ನು ಸುಲಭಗೊಳಿಸುವ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಮತ್ತು ಬಹು-ರಾಜ್ಯ ಸಹಕಾರಿ ಸಂಸ್ಥೆಗಳ (ಎಂಎಸ್‌ಸಿಎಸ್) ಅಭಿವೃದ್ಧಿಯನ್ನು ಶಕ್ತಗೊಳಿಸಲು ‘ಸಹಕಾರ ಸಚಿವಾಲಯ’ವು (Ministry of Cooperation) ಕೆಲಸ ಮಾಡುತ್ತದೆ.

ದೇಶದಲ್ಲಿ, ಸಹಕಾರಿ ಆಧಾರಿತ ಆರ್ಥಿಕ ಅಭಿವೃದ್ಧಿ ಮಾದರಿಯು ಬಹಳ ಪ್ರಸ್ತುತವಾಗಿದೆ, ಅಲ್ಲಿ ಪ್ರತಿಯೊಬ್ಬ ಸದಸ್ಯರು ಜವಾಬ್ದಾರಿಯುತ ಮನೋಭಾವದಿಂದ ಕೆಲಸ ಮಾಡುತ್ತಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ-  Covid-19 RT-PCR Testing: ಇನ್ಮುಂದೆ ಕೇವಲ ರೂ.299 ಕ್ಕೆ RT-PCR ಟೆಸ್ಟ್ ಮಾಡಿಸಬಹುದು

ಹೊಸ ಸಚಿವಾಲಯದ ರಚನೆಯು "ಸಮುದಾಯ ಆಧಾರಿತ ಅಭಿವೃದ್ಧಿ ಸಹಭಾಗಿತ್ವಕ್ಕೆ ಕೇಂದ್ರ ಸರ್ಕಾರದ (Central Government) ಆಳವಾದ ಬದ್ಧತೆಯನ್ನು" ಸೂಚಿಸಿದೆ ಮತ್ತು ಪ್ರತ್ಯೇಕ ಸಚಿವಾಲಯದ ರಚನೆಯು ಕೇಂದ್ರ ಬಜೆಟ್ನಲ್ಲಿ ಹಣಕಾಸು ಸಚಿವರು ಮಾಡಿದ ಘೋಷಣೆಯನ್ನು ಸಹ ಪೂರೈಸುತ್ತದೆ ಎಂದು ಅದು ಹೇಳಿದೆ.

ಬುಧವಾರ ಕ್ಯಾಬಿನೆಟ್ ವಿಸ್ತರಣೆ:
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 2019 ರಲ್ಲಿ ಅಧಿಕಾರಕ್ಕೆ ಮರಳಿದ ನಂತರ ಮೊದಲ ಬಾರಿಗೆ ತಮ್ಮ ಕ್ಯಾಬಿನೆಟ್ ವಿಸ್ತರಣೆಗೆ ಸಜ್ಜಾಗಿದ್ದಾರೆ. ವಿಶೇಷವೆಂದರೆ, ಕೇಂದ್ರ ಸಚಿವ ಸಂಪುಟದಲ್ಲಿನ ಬದಲಾವಣೆಗಳಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ಬುಧವಾರ ಸಂಜೆ 6 ಗಂಟೆಗೆ ಮೋದಿ ಸಂಪುಟದಲ್ಲಿ ಬದಲಾವಣೆಗಳನ್ನು ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ. ಈ ಕ್ಯಾಬಿನೆಟ್ ವಿಸ್ತರಣೆಯಲ್ಲಿ ಒಬಿಸಿಗೆ ಹೆಚ್ಚಿನ ಪ್ರಾತಿನಿಧ್ಯ ಇರುತ್ತದೆ ಎಂದು ಮೂಲಗಳು ತಿಳಿಸಿವೆ. 

ಪಿಎಂ ನರೇಂದ್ರ ಮೋದಿಯವರ ಹೊಸ ಸಂಪುಟದಲ್ಲಿ 25 ಕ್ಕೂ ಹೆಚ್ಚು ಒಬಿಸಿ ಸಚಿವರು ಇರಲಿದ್ದಾರೆ. ಇದರಲ್ಲಿ ಎಸ್‌ಸಿ ಮತ್ತು ಎಸ್‌ಟಿಯ 10-10 ಮಂತ್ರಿಗಳು ಇರುವ ಸಾಧ್ಯತೆ ಇದೆ. ಪ್ರತಿ ರಾಜ್ಯವು ಪ್ರತಿನಿಧಿಸುವ ಅವಕಾಶವನ್ನು ಪಡೆಯುವ ರೀತಿಯಲ್ಲಿ ಹೊಸ ಕ್ಯಾಬಿನೆಟ್ ರಚನೆಯಾಗುತ್ತದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ- Central Government Jobs: 2022ರಿಂದ ಸರ್ಕಾರಿ ನೌಕರಿ ಪಡೆಯಲು CET Exam, ಕೇಂದ್ರ ಸರ್ಕಾರದ ಮಹತ್ವದ ಘೋಷಣೆ

ಭಾರತದ ಕಿರಿಯ ಕ್ಯಾಬಿನೆಟ್ :
ತಜ್ಞರ ಪ್ರಕಾರ, ಈ ಕ್ಯಾಬಿನೆಟ್ ವಿಸ್ತರಣೆಯ ನಂತರ, ಇದು ಭಾರತದ ಇತಿಹಾಸದಲ್ಲಿ ಅತ್ಯಂತ ಕಿರಿಯ ಕ್ಯಾಬಿನೆಟ್ ಆಗಲಿದೆ. ಈ ಬಾರಿ ಅನೇಕ ಯುವ ಮುಖಗಳಿಗೆ ಇದರಲ್ಲಿ ಆದ್ಯತೆ ನೀಡಲಾಗುವುದು, ಹೊಸ ಸಂಪುಟದಲ್ಲಿ ಮಹಿಳೆಯರ ಭಾಗವಹಿಸುವಿಕೆ ಅತ್ಯಧಿಕವಾಗಲಿದೆ ಎಂದು ಹೇಳಲಾಗುತ್ತಿದೆ.

ವೃತ್ತಿಪರರಿಗೆ ಅವಕಾಶ:
ವೃತ್ತಿಪರ, ನಿರ್ವಹಣೆ, ಎಂಬಿಎ, ಸ್ನಾತಕೋತ್ತರ ಯುವಕರನ್ನು ಸಂಪುಟದಲ್ಲಿ ಸೇರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News