ಮೋದಿ ಸರ್ಕಾರ ರೈತರಿಗಾಗಿ 3 ಮಸೂದೆ ತಂದಿದ್ದು ಅದನ್ನು ಕಾಂಗ್ರೆಸ್ ವಿರೋಧಿಸುತ್ತಿದೆ: ಜೆ.ಪಿ.ನಡ್ಡಾ

ರೈತರಿಗೆ ಸಹಾಯ ಮಾಡಲು ಸಂಸತ್ತಿನಲ್ಲಿ 3 ಮಸೂದೆಗಳು ಅಂಗೀಕಾರಗೊಳ್ಳಲಿವೆ. ಕಿಸಾನ್ ಉತ್ಪನ್ನ ಮಸೂದೆ ರೈತರಿಗೆ ಸಹಾಯ ಮಾಡಲಿದೆ  ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Last Updated : Sep 16, 2020, 02:10 PM IST
  • ರೈತರನ್ನು ಗಮನದಲ್ಲಿಟ್ಟುಕೊಂಡು ಸಂಸತ್ತಿನಲ್ಲಿ ಮೂರು ಮಸೂದೆಗಳು ಬಂದಿವೆ
  • ಅಗತ್ಯ ಸರಕುಗಳ ಕಾಯ್ದೆ (ತಿದ್ದುಪಡಿ) ಮಸೂದೆ 2020 ಅನ್ನು ಲೋಕಸಭೆಯಲ್ಲಿ ಚರ್ಚಿಸಿ ಅಂಗೀಕರಿಸಲಾಗಿದೆ.
  • ವಿಶೇಷವೆಂದರೆ ಲೋಕಸಭೆಯು ನಿನ್ನೆ ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ 2020ಗೆ ಅನುಮೋದನೆ ನೀಡಿತು.
ಮೋದಿ ಸರ್ಕಾರ ರೈತರಿಗಾಗಿ 3 ಮಸೂದೆ ತಂದಿದ್ದು ಅದನ್ನು ಕಾಂಗ್ರೆಸ್ ವಿರೋಧಿಸುತ್ತಿದೆ: ಜೆ.ಪಿ.ನಡ್ಡಾ title=

ನವದೆಹಲಿ: ರೈತರಿಗೆ ಸಹಾಯ ಮಾಡಲು ಮೋದಿ ಸರ್ಕಾರ ಸಂಸತ್ತಿನಲ್ಲಿ 3 ಮಸೂದೆಗಳನ್ನು ತಂದಿದೆ. ಈ ಮಸೂದೆಗಳನ್ನು ವಿರೋಧ ಪಕ್ಷದ ಕಾಂಗ್ರೆಸ್ ಪಕ್ಷ ವಿರೋಧಿಸುತ್ತಿದೆ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ (JP Nadda) ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. 

ಈ ಮಸೂದೆಗಳು ಉತ್ಪನ್ನಗಳನ್ನು ಮಾರಾಟ ಮಾಡಲು ರೈತರಿಗೆ (Farmers) ಸಹಾಯ ಮಾಡಲಿವೆ. ಆದರೆ ಕಾಂಗ್ರೆಸ್ಸಿನ ದ್ವಂದ್ವ ಸ್ವರೂಪ ರೈತರ ಮೇಲೆ ಪ್ರಭಾವ ಬರುತ್ತಿದೆ. ಕಾಂಗ್ರೆಸ್ ರೈತರನ್ನು ದಾರಿ ತಪ್ಪಿಸುತ್ತಿದೆ ಎಂದವರು ಆರೋಪಿಸಿದರು.

ನಾನು ರೈತರಿಗಾಗಿ ಜೈಲಿಗೆ ಹೋಗಿ ಬಂದಿದ್ದೇನೆ: ಕೃಷಿ ಸಚಿವ ಬಿ.ಸಿ. ಪಾಟೀಲ್

ರೈತರನ್ನು ಗಮನದಲ್ಲಿಟ್ಟುಕೊಂಡು ಸಂಸತ್ತಿನಲ್ಲಿ ಮೂರು ಮಸೂದೆಗಳು ಬಂದಿವೆ. ಅಗತ್ಯ ಸರಕುಗಳ ಕಾಯ್ದೆ (ತಿದ್ದುಪಡಿ) ಮಸೂದೆ 2020 ಅನ್ನು ಲೋಕಸಭೆಯಲ್ಲಿ ಚರ್ಚಿಸಿ ಅಂಗೀಕರಿಸಲಾಗಿದೆ. ಅದೇ ರೀತಿಯಲ್ಲಿ ರೈತರು ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆ (Farmers Produce Trade and Commerce Act‌) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಒಪ್ಪಂದದ ಮಸೂದೆ ಆಗಿದೆ. ಮೂರೂ ಮಸೂದೆಗಳು ಕ್ರಾಂತಿಕಾರಿ ಮಸೂದೆಗಳಾಗಿವೆ. ಪ್ರಸ್ತುತ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಚರ್ಚಿಸಲಾಗುತ್ತಿರುವ ಈ ಮೂರು ಮಸೂದೆಗಳು ಬಹಳ ದೂರದೃಷ್ಟಿ ಹೊಂದಿವೆ ಎಂದು ಜೆಪಿ ನಡ್ಡಾ ವಿವರಿಸಿದರು.

ದಕ್ಷಿಣ ಭಾರತದ ಮೊದಲ ಕಿಸಾನ್ ರೈಲು, ಆಂಧ್ರ ಪ್ರದೇಶದಿಂದ ನೇರವಾಗಿ ದೆಹಲಿ ತಲುಪಲಿರುವ ಹಣ್ಣು-ತರಕಾರಿಗಳು

ಈ ಮೂರು ಮಸೂದೆಗಳು ಕೃಷಿ ಕ್ಷೇತ್ರದಲ್ಲಿ ಹೂಡಿಕೆಯನ್ನು ಹೆಚ್ಚಿಸಲು ಬಹಳ ಮುಖ್ಯ ಮತ್ತು ಪ್ರಯೋಜನಕಾರಿ. ಈ ಮೂರು ಮಸೂದೆಗಳು ರೈತರ ಉತ್ಪನ್ನಗಳ ಬೆಲೆಯನ್ನು ಅತ್ಯಂತ ವೇಗದಲ್ಲಿ ಹೆಚ್ಚಿಸಲಿವೆ.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ದ ಹರಿಹೈದ ಜೆಪಿ ನಡ್ಡಾ, ಇಂದು ಕಾಂಗ್ರೆಸ್ ಪಕ್ಷ ಈ ಮಸೂದೆಗಳನ್ನು ವಿರೋಧಿಸುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಎರಡು ಮುಖವಿದೆ, ಎಲ್ಲದರಲ್ಲೂ ರಾಜಕೀಯ ಮಾಡುವುದು ಯಾವಾಗಲೂ ಅವರ ಕೆಲಸ. ಕಾಂಗ್ರೆಸ್ ರಾಜಕೀಯವನ್ನು ಹೊರತುಪಡಿಸಿ ಬೇರೇನೂ ತಿಳಿದಿಲ್ಲ ಎಂದು ಕಿಡಿಕಾರಿದರು.

ವಿಶೇಷವೆಂದರೆ ಲೋಕಸಭೆಯು ನಿನ್ನೆ ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ 2020ಗೆ ಅನುಮೋದನೆ ನೀಡಿತು. ಈ ಮಸೂದೆಯು ಧಾನ್ಯಗಳು, ಬೇಳೆಕಾಳುಗಳು, ಎಣ್ಣೆಕಾಳುಗಳು, ಖಾದ್ಯ ಎಣ್ಣೆ, ಈರುಳ್ಳಿ ಆಲೂಗಡ್ಡೆಗಳನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ತೆಗೆದುಹಾಕಲು ಅವಕಾಶ ಕಲ್ಪಿಸುತ್ತದೆ.
 

Trending News