ಮೋದಿ ತಾವು ಮಾಡಿದ್ದೆಲ್ಲವೂ ಐತಿಹಾಸಿಕ ಎನ್ನುತ್ತಾರೆ ಅದಕ್ಕೆ ಪೆಟ್ರೋಲ್ ಬೆಲೆ ಏರಿಕೆಯು ಐತಿಹಾಸಿಕ-ಮಾಯಾವತಿ

     

Last Updated : May 26, 2018, 11:54 AM IST
ಮೋದಿ ತಾವು ಮಾಡಿದ್ದೆಲ್ಲವೂ ಐತಿಹಾಸಿಕ ಎನ್ನುತ್ತಾರೆ ಅದಕ್ಕೆ ಪೆಟ್ರೋಲ್ ಬೆಲೆ ಏರಿಕೆಯು ಐತಿಹಾಸಿಕ-ಮಾಯಾವತಿ   title=

ನವದೆಹಲಿ: ಪೆಟ್ರೋಲ್ ದರ ಏರಿಕೆಯ ವಿರುದ್ದ ಮಾಯವತಿ ಮೋದಿ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.

ಈ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು" ಈ ಸರ್ಕಾರವು ಎಲ್ಲ  ವಿಭಾಗದಲ್ಲಿಯೂ ವೈಪಲ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ತಾವು ಮಾಡಿದ್ದೆಲ್ಲವನ್ನು ಐತಿಹಾಸಿಕ ಸಾಧನೆ ಎಂದು ಕರೆಯುತ್ತಾರೆ, ಇದರಿಂದಲೇ ಏನೂ ಅವರ ಸರ್ಕಾರದ ಅವಧಿಯಲ್ಲಿ ಇಂಧನ ಬೆಲೆಗಳು ಐತಿಹಾಸಿಕ ಏರಿಕೆ ಕಂಡಿವೆ ಎಂದು ಅವರು ವ್ಯಂಗವಾಡಿದ್ದಾರೆ.

ಇನ್ನೊಂದೆಡೆ ಬಿಜೆಪಿಯು ಮೋದಿ ಸರ್ಕಾರದ ಆಡಳಿತ ಸಾಧನೆಗಳ ಬಗ್ಗೆ ಸ್ಮರಿಸುತ್ತದೆ ಅಲ್ಲದೆ ಮುಂಬರುವ 2019 ಮತ್ತೆ ಮೋದಿ ಸರ್ಕಾರ ಎನ್ನುವ ಘೋಷಣೆಯೊಂದಿಗೆ ಅದು ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದೆ. ಇತ್ತಕಡೆ ಕಾಂಗ್ರೆಸ್ ಸಹಿತ ತೃತೀಯ ರಂಗದ ಶಕ್ತಿಗಳು ಸಹಿತ ಮುಂಬರುವ ಚುನಾವಣೆಯಲ್ಲಿ ಒಗ್ಗಟ್ಟಿನ ಮೂಲಕ ಬಿಜೆಪಿಯನ್ನು ಸೋಲಿಸಲು ರಣತಂತ್ರ ರೂಪಿಸುತ್ತಿವೆ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಎಲ್ಲ ಪ್ರಾದೇಶಿಕ ಪಕ್ಷಗಳು ಒಗ್ಗಟ್ಟನ್ನು ಪ್ರದರ್ಶಿಸಿರುವುದು ಎನ್ನಲಾಗಿದೆ.

Trending News