ಮೋದಿಯವರೇ ನಿಮ್ಮನ್ನು ನಾವು ಮಂಗಳ ಗ್ರಹಕ್ಕೆ ಹೋದರೂ ಬಿಡಲಾರೆವು- ಜಿಗ್ನೇಶ್ ಮೇವಾನಿ

    

Last Updated : Apr 27, 2018, 08:19 PM IST
 ಮೋದಿಯವರೇ ನಿಮ್ಮನ್ನು ನಾವು ಮಂಗಳ ಗ್ರಹಕ್ಕೆ ಹೋದರೂ ಬಿಡಲಾರೆವು- ಜಿಗ್ನೇಶ್ ಮೇವಾನಿ title=

ಕಲಬುರ್ಗಿ: ದೇಶಾದ್ಯಂತ ಮಹಿಳೆ ಮತ್ತು  ಬಾಲಕಿಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರಗಳನ್ನು ತಡೆಗಟ್ಟುವಲ್ಲಿ ವಿಫಲವಾದ ಬಗ್ಗೆ  ಮೋದಿ ಸರ್ಕಾರವನ್ನು ಜಿಗ್ನೇಶ್  ಮೇವಾನಿ ತರಾಟೆಗೆ ತೆಗೆದುಕೊಂಡರು.

ಈ ಕುರಿತಾಗಿ ಕಲಬುರ್ಗಿಯಲ್ಲಿ ಮಾತನಾಡಿದ ಗುಜರಾತ್ ಶಾಸಕ ಮತ್ತು ಸಾಮಾಜಿಕ ಹೋರಾಟಗಾರ ಜಿಗ್ನೇಶ್ ಮೇವಾನಿ "ಮೋದಿಜಿ ಅವರೇ, ದೇಶದಾದ್ಯಂತ ಬಾಲಕಿಯರ ಮೇಲಿನ ಅತ್ಯಾಚಾರ ಹೆಚ್ಚುತ್ತಲೇ ಇವೆ, ಮಹಿಳೆಯರು ಮತ್ತು ದಲಿತರ ಮೇಲಿನ ದೌರ್ಜನ್ಯಗಳಿಗೆ ನಾವು ನಿಮ್ಮಿಂದ ಉತ್ತರ ಪಡೆದೇ ತೀರುತ್ತೇವೆ ಎಂದರು.ಇನ್ನು ಮುಂದುವರೆದು "ನೀವು ಮಂಗಳ ಲೋಕಕ್ಕೂ ಹೋದರೂ ನಾವು ನಿಮ್ಮನ್ನು ಬಿಡಲಾರೆವು. ನಿಮ್ಮದು ಶೇಕಡ ತೊಂಬತ್ತರಷ್ಟು ಭ್ರಷ್ಟ ಸರ್ಕಾರ. 2019ರಲ್ಲಿ ನೀವು ಅಧಿಕಾರದಿಂದ ಕೆಳಗಿಳಿಯಲು ಬೇಕಿದೆ,ಆದ್ದರಿಂದ  ನಾವು ನಿಮ್ಮನ್ನು ಕೆಳಗಿಳಿಸಿಯೇ ತೀರುತ್ತೇವೆ", ಎಂದು ಪ್ರಧಾನಿ ಮೋದಿಯವರಿಗೆ ಸವಾಲು ಹಾಕಿದರು.

ಇದೇ ವೇಳೆ ಪ್ರಧಾನಿ ಮೋದಿ ನೀಡಿರುವ ಸುಳ್ಳು ಭರವಸೆಗಳಿಗೆ ಕಿಡಿಕಾರಿದ ಮೇವಾನಿ ಪ್ರತಿ ಭಾರತೀಯನ ಬ್ಯಾಂಕ್ ಖಾತೆಗೆ ತಲಾ ಹದಿನೈದು ಲಕ್ಷ ರೂಪಾಯಿ ಹಾಕುತ್ತೇನೆ ಎಂದು ಮೋದಿ ವಂಚಿಸಿದ್ದಾರೆ. ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆಂದು ಸುಳ್ಳು ಹೇಳಿದ್ದಾರೆ. ಆದ್ದರಿಂದ ಈ ಮೋಸಕ್ಕಾಗಿ ಜನರು ಅವರಿಗೆ ತಕ್ಕ ಪಾಠ ಕಲಿಸಲೇ ಬೇಕು ಎಂದು ತಿಳಿಸಿದರು 

Trending News