ರೈಲು ಡಿಕ್ಕಿಯಾಗಿ ಸತ್ತ ಕೋತಿಗೆ ಹಿಂದೂ ವಿಧಿಯಂತೆ ಅಂತಿಮ ಸಂಸ್ಕಾರ! ಸಮಾಧಿ ಸ್ಥಳದಲ್ಲಿ ಮಂದಿರ ನಿರ್ಮಿಸಲು ಸಿದ್ಧತೆ

Monkey Last Rite in Jharkhand: ಧನ್‌’ಬಾದ್‌’ನ ನಿರ್ಸಾ ವಿಧಾನಸಭಾ ಕ್ಷೇತ್ರದ ಗಲ್ಫಾರ್ ಬರಿಯಲ್ಲಿರುವ ನಂಬರ್ 4 ರೈಲ್ವೇ ಗೇಟ್ ಬಳಿ ಮಂಗವೊಂದು ರೈಲಿಗೆ ಡಿಕ್ಕಿ ಹೊಡೆದಿತ್ತು. ಇದರಿಂದ ಕೋತಿ ತೀವ್ರವಾಗಿ ಗಾಯಗೊಂಡಿತ್ತು.

Written by - Bhavishya Shetty | Last Updated : Aug 3, 2023, 11:50 AM IST
    • ಸಾವನ್ನಪ್ಪಿದ ಆ ಕೋತಿಗೆ ಹಿಂದೂ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆಯನ್ನು ಮಾಡಲಾಗಿದೆ.
    • ಮಂಗನ ಮೃತದೇಹವನ್ನು ಹೂಳಿರುವ ಜಾಗದಲ್ಲಿ ಹನುಮಾನ್ ಮಂದಿರ ನಿರ್ಮಿಸಲು ಜನರ ಸಿದ್ಧತೆ
    • ಗಲ್ಫಾರ್ ಬರಿಯಲ್ಲಿರುವ ನಂಬರ್ 4 ರೈಲ್ವೇ ಗೇಟ್ ಬಳಿ ಮಂಗವೊಂದು ರೈಲಿಗೆ ಡಿಕ್ಕಿ ಹೊಡೆದಿತ್ತು
ರೈಲು ಡಿಕ್ಕಿಯಾಗಿ ಸತ್ತ ಕೋತಿಗೆ ಹಿಂದೂ ವಿಧಿಯಂತೆ ಅಂತಿಮ ಸಂಸ್ಕಾರ! ಸಮಾಧಿ ಸ್ಥಳದಲ್ಲಿ ಮಂದಿರ ನಿರ್ಮಿಸಲು ಸಿದ್ಧತೆ title=
Monkey Death news

Monkey Last Rite in Jharkhand: ಜಾರ್ಖಂಡ್‌ ನಲ್ಲಿ ವಿಶಿಷ್ಟ ಪ್ರಕರಣವೊಂದು ಬೆಳಕಿಗೆ ಬಂದಿದೆ. ಚಲಿಸುತ್ತಿದ್ದ ರೈಲಿಗೆ ಗಾಯಗೊಂಡಿದ್ದ ಕೋತಿಗೆ ಚಿಕಿತ್ಸೆ ನೀಡದರೂ ಪ್ರಯೋಜನವಾಗಿರಲಿಲ್ಲ. ಇದೀಗ ಸಾವನ್ನಪ್ಪಿದ ಆ ಕೋತಿಗೆ ಹಿಂದೂ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆಯನ್ನು ಮಾಡಲಾಗಿದೆ. ಅಷ್ಟೇ ಅಲ್ಲದೆ, ಮಂಗನ ಮೃತದೇಹವನ್ನು ಹೂಳಿರುವ ಜಾಗದಲ್ಲಿ ಹನುಮಾನ್ ಮಂದಿರ ನಿರ್ಮಿಸಲು ಜನರು ಸಿದ್ಧತೆ ನಡೆಸಿದ್ದಾರೆ.

ಇದನ್ನೂ ಓದಿ: Asia Cup 2023: Tಏಷ್ಯಾ ಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ಟಾಪ್ 10 ಬ್ಯಾಟ್ಸ್ಮನ್ ಗಳು

ಧನ್‌’ಬಾದ್‌’ನ ನಿರ್ಸಾ ವಿಧಾನಸಭಾ ಕ್ಷೇತ್ರದ ಗಲ್ಫಾರ್ ಬರಿಯಲ್ಲಿರುವ ನಂಬರ್ 4 ರೈಲ್ವೇ ಗೇಟ್ ಬಳಿ ಮಂಗವೊಂದು ರೈಲಿಗೆ ಡಿಕ್ಕಿ ಹೊಡೆದಿತ್ತು. ಇದರಿಂದ ಕೋತಿ ತೀವ್ರವಾಗಿ ಗಾಯಗೊಂಡಿತ್ತು. ಸ್ಥಳೀಯರು ಕೂಡಲೇ ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಗಾಯಗೊಂಡ ಕೋತಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಚಿಕಿತ್ಸೆ ವೇಳೆ ಕೋತಿ ಸಾವನ್ನಪ್ಪಿದೆ.

ಇನ್ನು ಈ ಕೋತಿಯ ಅಂತ್ಯಸಂಸ್ಕಾರಕ್ಕೆ ಮುಂದಾದ ಸ್ಥಳೀಯ ಜನರು ಹಿಂದೂ ಸಂಪ್ರದಾಯದಂತೆ ಕಾರ್ಯ ಮಾಡಿದ್ದಾರೆ. ಇದಾದ ಬಳಿಕ ಇದೀಗ ಮಂಗನ ಸಮಾಧಿ ನಿರ್ಮಿಸಿದ ಜಾಗದಲ್ಲಿ ಹನುಮಾನ್ ಮಂದಿರ ನಿರ್ಮಿಸಲು ಜನ ಸಿದ್ಧತೆ ನಡೆಸಿದ್ದಾರೆ.

ಇದನ್ನೂ ಓದಿ: ಶೀಘ್ರದಲ್ಲೇ ನಟನೆಗೆ ಮುಂದಾಗಲಿದ್ದಾರೆಯೇ ಎಂ.ಎಸ್.ಧೋನಿ..?

ಇಂದಿಗೂ ಜನರು ಮಂಗಗಳ ಮೇಲೆ ಅಪಾರ ನಂಬಿಕೆ ಹೊಂದಿದ್ದಾರೆ. ಜನರು ಕೋತಿಯನ್ನು ಹನುಮಂತನ ರೂಪವೆಂದು ಪರಿಗಣಿಸುತ್ತಾರೆ. ಈ ಕಾರಣಕ್ಕಾಗಿ ಜನರು ಗಾಯಗೊಂಡ ಸ್ಥಿತಿಯಲ್ಲಿ ಮಲಗಿದ್ದ ಕೋತಿಗೆ ಚಿಕಿತ್ಸೆ ನೀಡಿದ್ದು ಮಾತ್ರವಲ್ಲದೆ, ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ ಆ ಕೋತಿಗೆ ಸಂಪ್ರದಾಯಗಳ ಪ್ರಕಾರ ಅಂತ್ಯಕ್ರಿಯೆಯನ್ನು ಮಾಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News