ಮುಂದಿನ ದಿನಗಳಲ್ಲಿ ದೆಹಲಿಯಲ್ಲಿ ದಾಖಲೆಯ ಮಳೆ ಸಾಧ್ಯತೆ

ಮುಂದಿನ ಮೂರು ದಿನಗಳಲ್ಲಿ, ದೆಹಲಿ ಮತ್ತು ಎನ್ಸಿಆರ್ ಜನರು ಉತ್ತಮ ಮಳೆಗಾಲವನ್ನು ಅನುಭವಿಸಲು ಸಾಧ್ಯವಾಗುತ್ತದೆ.

Last Updated : Jul 6, 2018, 01:53 PM IST
ಮುಂದಿನ ದಿನಗಳಲ್ಲಿ ದೆಹಲಿಯಲ್ಲಿ ದಾಖಲೆಯ ಮಳೆ ಸಾಧ್ಯತೆ title=

ನವದೆಹಲಿ: ಮುಂದಿನ ಮೂರು ದಿನಗಳಲ್ಲಿ, ದೆಹಲಿ ಮತ್ತು ಎನ್ಸಿಆರ್ ಜನರು ಉತ್ತಮ ಮಳೆಗಾಲವನ್ನು ಅನುಭವಿಸುತ್ತಾರೆ. ಮುಂದಿನ ಕೆಲವು ದಿನಗಳಲ್ಲಿ, ದೆಹಲಿ, ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ಸೇರಿದಂತೆ ಸುತ್ತುವರೆದ ಪ್ರದೇಶಗಳಲ್ಲಿ ಜುಲೈ 09 ರಿಂದ ಉತ್ತಮ ಮಳೆ ದಾಖಲಾಗಲಿದೆ. ಹವಾಮಾನ ಇಲಾಖೆಯ ಪ್ರಕಾರ, ಈ ಭಾಗಗಳಲ್ಲಿ ಜುಲೈನಲ್ಲಿ ಉತ್ತಮ ಮಳೆಯನ್ನು ನಿರೀಕ್ಷಿಸಲಾಗಿದೆ.

ಮುಂದಿನ ಕೆಲವು ದಿನಗಳವರೆಗೆ ದೆಹಲಿ ಮತ್ತು ಅಕ್ಕ-ಪಕ್ಕದ ಪ್ರದೇಶಗಳಲ್ಲಿ ನಿರಂತರ ಮಳೆಯಾಗುತ್ತದೆ ಎಂದು ಪ್ರಾದೇಶಿಕ ಹವಾಮಾನ ಮುನ್ಸೂಚನಾ ಕೇಂದ್ರದ ಮುಖ್ಯಸ್ಥ ಕುಲ್ದೀಪ್ ಶ್ರೀವಾಸ್ತವ ಹೇಳಿದರು. ಜುಲೈ 09 ರಿಂದ ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶಗಳಿಗೆ ಮಾನ್ಸೂನ್ ಪ್ರವೇಶಿಸಲಿದೆ. ಹಾಗಾಗಿ ಈ ಪ್ರದೆಶಗಳಲ್ಲಿ ಉತ್ತಮ ಮಳೆ ಉಂಟಾಗುತ್ತದೆ. ಈ ಮಾನ್ಸೂನ್ ಲೈನ್ ಜುಲೈ 09 ರಂದು ದೆಹಲಿಯ ಬಳಿ ಹಾದು ಹೋಗುತ್ತದೆ, ಇದು ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ಸೇರಿದಂತೆ ಪಕ್ಕದ ಪ್ರದೇಶಗಳಲ್ಲಿ ಉತ್ತಮ ಮಳೆಗೆ ಕಾರಣವಾಗುತ್ತದೆ. ಪ್ರಸ್ತುತ ಮಾನ್ಸೂನ್ ಲೈನ್ ಪರ್ವತಗಳಲ್ಲಿ ಮತ್ತು ಕೆಳಭೂಮಿಯಲ್ಲಿದೆ. ಹಾಗಾಗಿ ಪರ್ವತ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದೆ ಎಂದು ಹೇಳಿದರು.

ಜೂನ್ 1 ರಿಂದ ಈ ವರೆಗೆ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 104.4 ಮಿ.ಮೀ ಮಳೆಯಾಗಿದೆ. ಇದು ಸಾಮಾನ್ಯಕ್ಕಿಂತ 15 ಪ್ರತಿಶತ ಹೆಚ್ಚು. ದೆಹಲಿ ಮತ್ತು ಪಕ್ಕದ ಪ್ರದೇಶಗಳಲ್ಲಿ, ಜೂನ್ ತಿಂಗಳಿನಲ್ಲಿ ಸಾಮಾನ್ಯಕ್ಕಿಂತ 50% ಗಿಂತ ಕಡಿಮೆ ಮಳೆ ಇತ್ತು.  ಜೂನ್ ತಿಂಗಳಲ್ಲಿ 40.1 ಮಿಲಿಮೀಟರ್ ಮಾತ್ರ ದಾಖಲಾಗಿದೆ.

Trending News