ಡೇರಾ ಸಚ್ಚಾ ಸೌಧದ ಪ್ರಧಾನ ಕಚೇರಿಯಲ್ಲಿ 600 ಹೆಚ್ಚು ಅಸ್ಥಿಪಂಜರಗಳ ಪತ್ತೆ

ಡೇರಾ ಸಚ್ಚಾ ಸೌದದ ಮುಖ್ಯಸ್ಥ ಗುರ್ಮೆತ್ ರಾಮ್ ರಹೀಮ್ ಸಿಂಗ್ ಸೂಚನೆ ಮೇರೆಗೆ ಅಸ್ಥಿಪಂಜರಗಳ ಸಮಾಧಿ.

Last Updated : Sep 20, 2017, 01:04 PM IST
ಡೇರಾ ಸಚ್ಚಾ ಸೌಧದ ಪ್ರಧಾನ ಕಚೇರಿಯಲ್ಲಿ 600 ಹೆಚ್ಚು ಅಸ್ಥಿಪಂಜರಗಳ ಪತ್ತೆ title=

ಸಿರ್ಸಾ: ಸಿರ್ಸಾದಲ್ಲಿರುವ ಡೇರಾ ಸಚ್ಚಾ ಸೌದದ ಮುಖ್ಯ ಕಚೇರಿಯಲ್ಲಿ 600ಕ್ಕೂ ಹೆಚ್ಚು ಅಸ್ಥಿಪಂಜರಗಳನ್ನು ಸಮಾಧಿ ಮಾಡಲಾಗಿದೆ. ಡೇರಾ ಸಚ್ಚಾ ಸೌದದ ಬೃಹತ್ ಆವರಣದಲ್ಲಿ ಹಲವು ಅಸ್ಥಿಪಂಜರಗಳನ್ನು ಹೂತು ಹಾಕಲಾಗಿದೆ ಮತ್ತು ಅವುಗಳ ಮೇಲೆ ಸಸಿಗಳನ್ನು ನೆಡಲಾಗಿದೆ. ಇವುಗಳಲ್ಲಿ ಕೆಲವು ಸಸಿಗಳು ಈಗ ದೊಡ್ಡ ಮರಗಳಾಗಿವೆ ಎಂದು ವಿಶೇಷ ತನಿಖಾ ತಂಡ(ಎಸ್ಐಟಿ)ದ ಮೂಲಗಳು ಝೀ ನ್ಯೂಸ್ ಗೆ ತಿಳಿಸಿದೆ. 

ಡೇರಾ ಸಚ್ಚಾ ಸೌದದ ಮುಖ್ಯಸ್ಥ ಗುರ್ಮಿತ್ ರಾಮ್ ರಹಿಮ್ ಸಿಂಗ್ ಈ ಅಸ್ಥಿಪಂಜರಗಳನ್ನು ಹೂತುಹಾಕಲು ಸೂಚನೆ ನೀಡಿದ್ದರು ಮತ್ತು ಅಸ್ಥಿಪಂಜರಗಳನ್ನು ಸಮಾಧಿ ಮಾಡುವುದರಿಂದ 'ಮೋಕ್ಷ' ದೊರೆಯುತ್ತದೆ ಎಂದು ತಿಳಿಸಿದ್ದರು ಎಂದು ಬಾಬಾ ಅನುಯಾಯಿಗಳು ಹೇಳಿದ್ದಾರೆ. 

ಝೀ ನ್ಯೂಸ್ ಜೊತೆ ಮಾತನಾಡಿದ ಹರಿಯಾಣ ಮೂಲದ ಪತ್ರಕರ್ತ ರಮಾನಂದ್ ತಾತಿಯ ಅವರು ಡೇರಾ ಕ್ಯಾಂಪಸ್ ನಲ್ಲಿ ಪರಿಶೀಲನೆ ನಡೆಸಿದರೆ, ರಹಸ್ಯವಾಗಿ ಕಣ್ಮರೆಯಾದ ಸುಮಾರು 500 ಕ್ಕೂ ಹೆಚ್ಚು ಜನರ ಬಗ್ಗೆ ಮಾಹಿತಿ ದೊರೆಯುತ್ತದೆ ಹಾಗೂ ದೊಡ್ಡ ಪ್ರಮಾಣದಲ್ಲಿ ಮಾನವ ಅಸ್ಥಿಪಂಜರಗಳು ಕಾಣಬಹುದು ಎಂದು ತಿಳಿಸಿದರು.

ಗುರ್ಮಿತ್ ರಾಮ್ ರಹಿಮ್ ಸಿಂಗ್ ರನ್ನು ವಿರೋಧಿಸಿದ ಯಾರೇ ಆದರೂ ಕ್ರೂರವಾಗಿ ಕೊಲ್ಲಲ್ಪಡುತ್ತಿದ್ದರು ಮತ್ತು ನಂತರದಲ್ಲಿ ಅವರನ್ನು ರಹಸ್ಯವಾಗಿ ಸಮಾಧಿ ಮಾಡಿದ್ದಾರೆ ಎಂದು ಪತ್ರಕರ್ತ ವಿವರಿಸಿದರು. ಈ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳ ಉಪಸ್ಥಿತಿಯಲ್ಲಿ ತನಿಖೆ ಮಾಡಬೇಕೆಂಬ ಸಲಹೆಯನ್ನು ಸಹ ರಮಾನಂದ್ ತಾತಿಯ ನೀಡಿದರು.

15 ವರ್ಷಗಳ ಹಿಂದೆ ಇಬ್ಬರು ಸಾಧ್ವಿಗಳನ್ನು ಅಥವಾ ಸ್ತ್ರೀ ಅನುಯಾಯಿಗಳನ್ನು ಅತ್ಯಾಚಾರ ಮಾಡಿರುವ ಆರೋಪದಲ್ಲಿ, ಸಿಬಿಐ ವಿಶೇಷ ನ್ಯಾಯಾಲಯವು ಗುರ್ಮಿತ್ ರಾಮ್ ರಹಿಮ್ ಸಿಂಗ್ ಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಗುರ್ಮಿತ್ ರಾಮ್ ರಹಿಮ್ ಸಿಂಗ್ ಗೆ ಶಿಕ್ಷೆ ವಿಧಿಸಿದ ನಂತರ, ಡೇರಾ ಸಚ್ಚಾ ಸೌದ ಪ್ರಧಾನ ಕಚೇರಿಯಲ್ಲಿ  ಬೃಹತ್ ಹುಡುಕಾಟ ಮತ್ತು ನಿರ್ಮಲೀಕರಣ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.

ಈ ಕಾರ್ಯಾಚರಣೆಯು ವಿಶ್ವದ ಏಳು ಅದ್ಭುತಗಳನ್ನು ಮರುಸೃಷ್ಟಿಸಲು ಪ್ರಯತ್ನಿಸುತ್ತಿದ್ದ ರಾಜನಂತೆ ವಾಸಿಸುತ್ತಿದೆ ಎಂದು ಬಹಿರಂಗಪಡಿಸಿತು. ಆವರಣದೊಳಗೆ ಕಾನೂನು ಬಾಹಿರ ಗರ್ಭಪಾತ ಮತ್ತು ಚರ್ಮದ ಕಸಿ ಮಾಡುವ ಕ್ಲಿನಿಕ್ಗಳನ್ನು ಪೊಲೀಸರು ಪತ್ತೆ ಮಾಡಿದ್ದರು.

Trending News