ಅಂಬಾನಿ ನಿವಾಸ ಎದುರು ಸ್ಫೋಟಕ ಪತ್ತೆ ಪ್ರಕರಣಕ್ಕೆ ಸ್ಫೋಟಕ ತಿರುವು, ಪೊಲೀಸ್ ಅಧಿಕಾರಿ ಸಚಿನ್ ವಾಝೆ ಅರೆಸ್ಟ್.!

ಮುಂಬಯಿ ಪೊಲೀಸ್ ನ  ವಿವಾದಾತ್ಮಕ ಅಧಿಕಾರಿ ಸಚಿನ್ ವಾಝೆಯನ್ನು  NIA ಕಳೆದ ಮಧ್ಯರಾತ್ರಿ ಬಂಧಿಸಿದೆ. ಅಂಬಾನಿ ನಿವಾಸ ಅಂಟಿಲಿಯಾ ಬಳಿ ಪತ್ತೆಯಾದ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೋ ಪ್ರಕರಣದಲ್ಲಿ ಸಚಿನ್ ವಾಝೆಯನ್ನು ಬಂಧಿಸಲಾಗಿದೆ.

Written by - Ranjitha R K | Last Updated : Mar 14, 2021, 10:56 AM IST
  • ಮುಂಬಯಿ ಪೊಲೀಸ್ ನ ವಿವಾದಾತ್ಮಕ ಅಧಿಕಾರಿ ಸಚಿನ್ ವಾಝೆ ಬಂಧನ
  • ಅಂಬಾನಿ ನಿವಾಸ ಅಂಟಿಲಿಯಾ ಬಳಿ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೋ ಪ್ರಕರಣದಲ್ಲಿ ಬಂಧನ
  • ವಾಝೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ರದ್ದು ಪಡಿಸಿತ್ತು.
ಅಂಬಾನಿ ನಿವಾಸ ಎದುರು ಸ್ಫೋಟಕ ಪತ್ತೆ ಪ್ರಕರಣಕ್ಕೆ ಸ್ಫೋಟಕ ತಿರುವು, ಪೊಲೀಸ್ ಅಧಿಕಾರಿ ಸಚಿನ್ ವಾಝೆ ಅರೆಸ್ಟ್.! title=
ಸಚಿನ್ ವಾಝೆ ಬಂಧನ (Photo twitter)

ಮುಂಬಯಿ : ಮುಂಬಯಿ ಪೊಲೀಸ್ ನ  ವಿವಾದಾತ್ಮಕ ಅಧಿಕಾರಿ ಸಚಿನ್ ವಾಝೆಯನ್ನು  NIA ಕಳೆದ ಮಧ್ಯರಾತ್ರಿ ಬಂಧಿಸಿದೆ. ಅಂಬಾನಿ ನಿವಾಸ (Ambani house) ಅಂಟಿಲಿಯಾ ಬಳಿ ಪತ್ತೆಯಾದ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೋ ಪ್ರಕರಣದಲ್ಲಿ ಸಚಿನ್ ವಾಝೆಯನ್ನು (Sachin Vaze) ಬಂಧಿಸಲಾಗಿದೆ. ಇದರೊಂದಿಗೆ ಈ ಪ್ರಕರಣ ಬಹುದೊಡ್ಡ ತಿರುವು ಪಡೆದುಕೊಂಡಿದ್ದು, ಕುತೂಹಲ ಹೆಚ್ಚಿಸಿದೆ. 

ನಿರೀಕ್ಷಣಾ ಜಾಮೀನು ನಿರಾಕರಿಸಿದ್ದ ಠಾಣೆ ನ್ಯಾಯಾಲಯ :
ಈ ಮೊದಲು ಶನಿವಾರ ಠಾಣೆ ಸೆಶನ್ ನ್ಯಾಯಾಲಯ ಸಚಿನ್ ವಾಝೆ (Sachin Vaze) ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ರದ್ದು ಪಡಿಸಿತ್ತು. ಮೇಲ್ನೋಟಕ್ಕೆ ವಾಝೆ ವಿರುದ್ಧ ಸಾಕ್ಷ್ಯಗಳಿರುವುದು ಗೊತ್ತಾಗಿದೆ ಎಂದು ಕೋರ್ಟ್ (Court) ಹೇಳಿತ್ತು.  ಬಂಧನದಿಂದ ಬಚಾವ್ ಆಗಲು ವಾಜೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ, ಮಾರ್ಚ್ 19ರಂದು ನಡೆಯಲಿದೆ. 

 

ಇದನ್ನೂ ಓದಿ : ನಾನ್ ವೆಜ್ ಪಿಜ್ಜಾ ಸ್ವೀಕರಿಸಿದ್ದಕ್ಕೆ ₹1 ಕೋಟಿ ರೂ ಪರಿಹಾರ ಕೇಳಿದ ಮಹಿಳೆ...!

ವಾಜೆ ವಿರುದ್ಧ ಆರೋಪಗಳೇನು.?
ಅಂಬಾನಿ (Ambani) ಮನೆ ಮುಂದೆ ಪತ್ತೆಯಾದ ಸ್ಕಾರ್ಪಿಯೋ ಕಾರಿನ ಮಾಲೀಕ ಮನ್‍ ಶುಕ್  ಹಿರೇನ್ ಸಾವಿನ ಪ್ರಕರಣದಲ್ಲಿ ಸಚಿನ್ ವಾಜೆ ಹೆಸರು ಕೇಳಿ ಬಂದಿದೆ. ತನ್ನ ಪತಿಯ ಸಾವಿನ ಹಿಂದೆ ಸಚಿನ್ ವಾಜೆ ಕೈವಾಡ ಇದೆ ಎಂದು ಮನ್‍ ಶುಕ್ ಹಿರೇನ್ ಪತ್ನಿ ವಿಮಲಾ ಹಿರೇನ್ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆಗೆ (Uddhav Thackeray) ಪತ್ರ ಬರೆದಿದ್ದರು. ಈ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ತಂಡ (NIA) ಮತ್ತು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ATS) ತನಿಖೆ ನಡೆಸುತ್ತಿವೆ.

ಇದನ್ನೂ ಓದಿ : West Bengal assembly election 2021: ಪ.ಬಂಗಾಳದ ನಂದಿಗ್ರಾಮದಲ್ಲಿ ಮೊಳಗಲಿದೆ ರೈತರ ಕಹಳೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News