ಮುಸ್ಲಿಮರು 'ಬ್ಯಾಂಡ್ ಬಾಜಾ ಪಾರ್ಟಿ'ಯಂತೆ, ಅವರಿಗೆ ಯಾವುದೇ ನಾಯಕತ್ವವಿಲ್ಲ: ಅಸಾದುದ್ದೀನ್ ಓವೈಸಿ

AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮುಸ್ಲಿಮರ ರಾಜಕೀಯ ಸ್ಥಿತಿಯನ್ನು ಖಂಡಿಸುತ್ತಾ ಅವರು ಮದುವೆಗಳಲ್ಲಿ 'ಬ್ಯಾಂಡ್, ಬಾಜಾ ಪಾರ್ಟಿ'ಯಂತೆ ಇದ್ದಾರೆ ಎಂದು ಹೇಳಿದ್ದಾರೆ.ಉತ್ತರ ಪ್ರದೇಶದಲ್ಲಿ ಶೇ 19% ಜನಸಂಖ್ಯೆಯನ್ನು ಹೊಂದಿದ್ದರೂ ಮುಸ್ಲಿಮರಿಗೆ ಯಾವುದೇ ಪ್ರಾತಿನಿಧ್ಯವಿಲ್ಲ ಎಂದು ವಿಷಾದಿಸಿದರು.

Written by - Zee Kannada News Desk | Last Updated : Sep 28, 2021, 12:42 AM IST
  • AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮುಸ್ಲಿಮರ ರಾಜಕೀಯ ಸ್ಥಿತಿಯನ್ನು ಖಂಡಿಸುತ್ತಾ ಅವರು ಮದುವೆಗಳಲ್ಲಿ 'ಬ್ಯಾಂಡ್, ಬಾಜಾ ಪಾರ್ಟಿ'ಯಂತೆ ಇದ್ದಾರೆ ಎಂದು ಹೇಳಿದ್ದಾರೆ.
  • ಉತ್ತರ ಪ್ರದೇಶದಲ್ಲಿ 19% ಜನಸಂಖ್ಯೆಯನ್ನು ಹೊಂದಿದ್ದರೂ ಮುಸ್ಲಿಮರಿಗೆ ಯಾವುದೇ ಪ್ರಾತಿನಿಧ್ಯವಿಲ್ಲ ಎಂದು ವಿಷಾದಿಸಿದರು.
 ಮುಸ್ಲಿಮರು 'ಬ್ಯಾಂಡ್ ಬಾಜಾ ಪಾರ್ಟಿ'ಯಂತೆ, ಅವರಿಗೆ ಯಾವುದೇ ನಾಯಕತ್ವವಿಲ್ಲ: ಅಸಾದುದ್ದೀನ್ ಓವೈಸಿ title=
file photo

ನವದೆಹಲಿ: AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮುಸ್ಲಿಮರ ರಾಜಕೀಯ ಸ್ಥಿತಿಯನ್ನು ಖಂಡಿಸುತ್ತಾ ಅವರು ಮದುವೆಗಳಲ್ಲಿ 'ಬ್ಯಾಂಡ್, ಬಾಜಾ ಪಾರ್ಟಿ'ಯಂತೆ ಇದ್ದಾರೆ ಎಂದು ಹೇಳಿದ್ದಾರೆ.ಉತ್ತರ ಪ್ರದೇಶದಲ್ಲಿ ಶೇ 19% ಜನಸಂಖ್ಯೆಯನ್ನು ಹೊಂದಿದ್ದರೂ ಮುಸ್ಲಿಮರಿಗೆ ಯಾವುದೇ ಪ್ರಾತಿನಿಧ್ಯವಿಲ್ಲ ಎಂದು ವಿಷಾದಿಸಿದರು.

'ಮುಸ್ಲಿಮರ ಸ್ಥಿತಿ ಮದುವೆ ಮೆರವಣಿಗೆಯಲ್ಲಿ 'ಬ್ಯಾಂಡ್ ಬಾಜಾ ಪಾರ್ಟಿ'ಯಂತೆ ಮಾರ್ಪಟ್ಟಿದೆ, ಅಲ್ಲಿ ಅವರು (ಮುಸ್ಲಿಮರು) ಮೊದಲು ಸಂಗೀತವನ್ನು ಕೇಳಿದರು, ಆದರೆ ವಿವಾಹದ ಸ್ಥಳವನ್ನು ತಲುಪಿದಾಗ ಹೊರಗೆ ನಿಲ್ಲುವಂತೆ ಮಾಡಲಾಯಿತು' ಎಂದು ಒವೈಸಿ (Asaduddin Owaisi) ಹೇಳಿದರು.

'ಈಗ ಮುಸ್ಲಿಮರು ವಾದ್ಯವನ್ನು ನುಡಿಸುವುದಿಲ್ಲ.ಪ್ರತಿಯೊಂದು ಜಾತಿಯಲ್ಲೂ ಒಬ್ಬ ನಾಯಕ ಇದ್ದಾನೆ, ಆದರೆ ಮುಸ್ಲಿಮರಿಗೆ ನಾಯಕನಿಲ್ಲ. ಯುಪಿಯಲ್ಲಿ 19% ಮುಸ್ಲಿಂ ಜನಸಂಖ್ಯೆ ಇದೆ ಆದರೆ ಒಬ್ಬ ನಾಯಕನೂ ಇಲ್ಲ" ಎಂದು ಅಸಾದುದ್ದೀನ್ ಓವೈಸಿ ಕಾನ್ಪುರದಲ್ಲಿ ಹೇಳಿದರು.

ಇದನ್ನೂ ಓದಿ- WhatsAppನಿಂದ ಹೊಸ ವೈಶಿಷ್ಟ್ಯ ಪರಿಚಯ, ಬಳಕೆದಾರರಿಗೇನು ಲಾಭ?

ಮುಸ್ಲಿಮರಲ್ಲಿ ನಾಯಕತ್ವ ಸೃಷ್ಟಿಸುವ ಭರವಸೆಯ ಮೇಲೆ ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ಅಸೆಂಬ್ಲಿ ಚುನಾವಣೆಯಲ್ಲಿ ತಮ್ಮ ಪಕ್ಷ ಎಐಎಂಐಎಂ ಸ್ಪರ್ಧಿಸುವುದಾಗಿ ಒವೈಸಿ ಇತ್ತೀಚೆಗೆ ಘೋಷಿಸಿದ್ದಾರೆ.

ಇದನ್ನೂ ಓದಿ- Made in India App: ವಾಟ್ಸಾಪ್, ಟ್ವಿಟರ್‌ಗೆ ಟಕ್ಕರ್ ನೀಡುತ್ತಿರುವ ಟಾಪ್ 5 ಮೇಡ್ ಇನ್ ಇಂಡಿಯಾ ಆ್ಯಪ್‌ಗಳಿವು

ಉತ್ತರ ಪ್ರದೇಶದ ಜನಸಂಖ್ಯೆಯ ತುಲನಾತ್ಮಕವಾಗಿ ಸಣ್ಣ ಭಾಗವಾಗಿರುವ ಜಾಟರು, ಯಾದವರು, ರಾಜಭರ್‌ಗಳು ಮತ್ತು ನಿಷಾದ್‌ಗಳು ಸೇರಿದಂತೆ ವಿವಿಧ ಜಾತಿಗಳು ಹೆಚ್ಚು ಕಡಿಮೆ ತಮ್ಮದೇ ಆದ ನಾಯಕತ್ವವನ್ನು ಹೊಂದಿವೆ,ಆದರೆ ಮುಸ್ಲಿಮರು ರಾಜ್ಯದಲ್ಲಿ ಶೇ .19 ಕ್ಕಿಂತ ಹೆಚ್ಚು ಜನರನ್ನು ಹೊಂದಿದ್ದಾರೆ. ಆದರೆ ಅವರಿಗೆ ಯಾವುದೇ ನಾಯಕನಿಲ್ಲ.

ಈಗ ಓವೈಸಿ ನೇತೃತ್ವದ ಅಖಿಲ ಭಾರತ ಮಜ್ಲಿಸ್-ಎ-ಇತ್ತೇಹಾದುಲ್ ಮುಸ್ಲಿಮೀನ್ (AIMIM), ಸಮಾಜವಾದಿ ಪಕ್ಷ (SP), ಬಹುಜನ ಸಮಾಜ ಪಕ್ಷ (BSP) ಮತ್ತು ಕಾಂಗ್ರೆಸ್ ಕೈಯಲ್ಲಿ ಮುಸ್ಲಿಮರ "ಗುಲಾಮಗಿರಿಯನ್ನು" ಕೊನೆಗೊಳಿಸಲು ಬಯಸುತ್ತದೆ.ಪಕ್ಷದ ನಾಯಕರ ಪ್ರಕಾರ ಅವರನ್ನು ತಮ್ಮ "ವೋಟ್ ಬ್ಯಾಂಕ್" ಆಗಿ ಬಳಸುತ್ತಿದ್ದರು ಎಂದು ಹೇಳಿದೆ.

ಇದನ್ನೂ ಓದಿ: ಲಂಚದ ಆರೋಪದ ಮೇಲೆ ಏಮ್ಸ್ ಅಧಿಕಾರಿ ಬಂಧಿಸಿದ ಸಿಬಿಐ, ಕೋಟ್ಯಂತರ ರೂ.ಮೌಲ್ಯದ ಆಸ್ತಿ ವಶಕ್ಕೆ

ರಾಜ್ಯದಲ್ಲಿ 82 ಅಸೆಂಬ್ಲಿ ವಿಭಾಗಗಳಿದ್ದು, ಮುಸ್ಲಿಂ ಮತದಾರರು ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ರೂಪಿಸುವ ಅಥವಾ ಹಾಳು ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ.ಮುಸ್ಲಿಂ ಪ್ರಾಬಲ್ಯದ ಸೀಮಾಂಚಲ ಪ್ರದೇಶದಿಂದ ಕಳೆದ ವರ್ಷ ನಡೆದ ಬಿಹಾರ ಚುನಾವಣೆಯಲ್ಲಿ ಐದು ಸ್ಥಾನಗಳನ್ನು ಗೆಲ್ಲುವ ಮೂಲಕ ಉತ್ಸುಕರಾಗಿದ್ದ ಓವೈಸಿ, ಉತ್ತರ ಪ್ರದೇಶ ಚುನಾವಣೆಯಲ್ಲಿ 403 ಸ್ಥಾನಗಳಲ್ಲಿ 100 ರಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಿಸಿದ್ದಾರೆ.

ಒವೈಸಿ ಈ ತಿಂಗಳ ಆರಂಭದಲ್ಲಿ ತಮ್ಮ ಚುನಾವಣಾ ಪ್ರಚಾರವನ್ನು ಅಯೋಧ್ಯೆಯಿಂದ ಆರಂಭಿಸಿದರು ಮತ್ತು ಅಂದಿನಿಂದ ವಿವಿಧ ಸ್ಥಳಗಳಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.AIMIM ರಾಷ್ಟ್ರೀಯ ವಕ್ತಾರ ಸೈಯದ್ ಅಸಿಮ್ ವಕಾರ್ ಪ್ರಕಾರ, ಸಮುದಾಯದ ಪ್ರಗತಿ ಮತ್ತು ಉತ್ತಮ ಭವಿಷ್ಯಕ್ಕಾಗಿ ಮುಸ್ಲಿಮರಲ್ಲಿ ರಾಜಕೀಯ ನಿರೂಪಣೆ ಮತ್ತು ನಾಯಕತ್ವವನ್ನು ಸೃಷ್ಟಿಸುವುದು ಪಕ್ಷದ ಮುಖ್ಯ ಗುರಿಯಾಗಿದೆ ಎಂದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News