ದಿಮಾಪುರ : ಮೊದಲ ಬಾರಿಗೆ ಬ್ರಿಟನ್‌ನ ಜನರು ವಿಶ್ವದ ಅತ್ಯಂತ ಖಾರವಾದ ಮೆಣಸಿನಕಾಯಿಗಳಲ್ಲಿ ಒಂದಾದ 'ಕಿಂಗ್ ಚಿಲ್ಲಿ' ರುಚಿ ನೋಡಲಿದ್ದಾರೆ. ನಾಗಾಲ್ಯಾಂಡ್‌ನಲ್ಲಿ ಬೆಳೆದ ಈ ಮೆಣಸಿನಕಾಯಿಯ ಮೊದಲ ಭಾರಿಗೆ ಬ್ರಿಟನ್‌ಗೆ ರಫ್ತು ಮಾಡಲಾಗುತ್ತಿದೆ.
ವಿಮಾನದ ಮೂಲಕ ಲಂಡನ್‌ಗೆ ರಫ್ತು :
ನಾಗಾಲ್ಯಾಂಡ್‌ನ ಪೆರೆನ್ ಜಿಲ್ಲೆಯಳ್ಳಿ ಬೆಳೆದ 'ಕಿಂಗ್ ಚಿಲ್ಲಿ'(King Chilli) ಅನ್ನು ಗುವಾಹಟಿಗೆ ಕಳುಹಿಸಲಾಗಿದೆ. ಅಲ್ಲಿ ಅದನ್ನು ಸರ್ಕಾರಿ ರಫ್ತು ಸಂಸ್ಥೆ ಎಪಿಎಡಿಎ ಗೋದಾಮಿನಲ್ಲಿ ಶೇಖರಿಸಿ ಇಡಲಾಗಿದೆ. ಅಲ್ಲಿಂದ ಅವುಗಳನ್ನ ಪ್ಯಾಕ್ ಮಾಡಿ ಮೆಣಸಿನಕಾಯಿಯನ್ನು ವಿಮಾನದ ಮೂಲಕ ಲಂಡನ್‌ಗೆ ಕಳುಹಿಸಲಾಗಿದೆ. ಸ್ಕೋವಿಲ್ಲೆ ಹೀಟ್ ಯೂನಿಟ್‌ಗಳು (ಎಸ್‌ಎಚ್‌ಯು) ಪ್ರಪಂಚದಾದ್ಯಂತ ಬೆಳೆದ ಮೆಣಸಿನಕಾಯಿ ಬಗ್ಗೆ ಈ ಸಮೀಕ್ಷೆಯನ್ನು ನಡೆಸಲಾಯಿತು. ಇದರಲ್ಲಿ, ನಾಗಾಲ್ಯಾಂಡ್‌ನ 'ಕಿಂಗ್ ಚಿಲ್ಲಿ' ಅನ್ನು ವಿಶ್ವದ ಅತ್ಯಂತ ಖಾರವಾದ ಮೆಣಸಿನಕಾಯಿ ಎಂದು ಪರಿಗಣಿಸಲಾಗಿದೆ.
ಇದನ್ನೂ ಓದಿ : ಕಾಲುವೆಯಲ್ಲಿ ಹರಿದು ಬಂತು ಸಾವಿರಾರು ಮೊಟ್ಟೆ : ಮೊಟ್ಟೆಗಾಗಿ ಮುಗಿಬಿದ್ದ ಜನ
ಭೂತ್ ಜೊಲೋಕಿಯಾ ಮತ್ತೊಂದು ಹೆಸರು :
ಈ ಮೆಣಸಿನಕಾಯಿಯನ್ನು ನಾಗಾಲ್ಯಾಂಡ್‌ನಲ್ಲಿ ಭೂತ ಜೊಲೋಕಿಯಾ(Bhoot Jolokia) ಅಥವಾ ಘೋಸ್ಟ್ ಪೆಪ್ಪರ್ ಎಂದೂ ಕರೆಯುತ್ತಾರೆ. ಈ ವಿಶೇಷತೆಯಿಂದಾಗಿ, ಈ ಮೆಣಸಿನಕಾಯಿಗೆ 2008 ರಲ್ಲಿ ಜಿಐ ಪ್ರಮಾಣೀಕರಣವನ್ನು ನೀಡಲಾಯಿತು.
ವಿಶ್ವದ ಅತ್ಯಂತ ಖಾರವಾದ ಮೆಣಸಿನಕಾಯಿ(Hottest Chilli) 'ಕಿಂಗ್ ಚಿಲ್ಲಿ'ಗೆ ದೇಶದ ಹೊರಗೆ ತುಂಬಾ ಬೇಡಿಕೆ ಇದೆ. ಇದು ನಾಗಾಲ್ಯಾಂಡ್‌ನ ರಾಜ್ಯ ಕೃಷಿ ಮಾರುಕಟ್ಟೆ ಮಂಡಳಿಯ (ಎನ್‌ಎಸ್‌ಎಎಂಬಿ) ಸಹಯೋಗದೊಂದಿಗೆ ಈ ಕಾರ್ಯವನ್ನು ಪ್ರಾರಂಭಿಸಿತು. ಈ ಕಾರಣದಿಂದಾಗಿ ಈ ಮೆಣಸಿನಕಾಯಿಯನ್ನು ದೇಶದ ಹೊರಗೆ ರಫ್ತು ಮಾಡಲು ಮೊದಲ ಬಾರಿಗೆ ತಯಾರಿ ನಡೆಸಲಾಗುತ್ತಿದೆ.
ಎಪಿಇಡಿಎ, ಎನ್‌ಎಸ್‌ಎಎಂಬಿ ಸಹಯೋಗದೊಂದಿಗೆ ಈ ಮೆಣಸಿನಕಾಯಿ(Chilli)ಯ ಮಾದರಿಗಳನ್ನು ಈ ವರ್ಷದ ಜುಲೈನಲ್ಲಿ ಪ್ರಯೋಗಕ್ಕಾಗಿ ಲ್ಯಾಬ್‌ಗೆ ಕಳುಹಿಸಿತು. ಈ ಮೆಣಸಿನಕಾಯಿಯನ್ನು ಸಂಪೂರ್ಣವಾಗಿ ಸಾವಯವವಾಗಿ ಬೆಳೆಸಲಾಗಿದೆ ಮತ್ತು ಅವುಗಳನ್ನ ಯಾವುದೇ ರಾಸಾಯನಿಕಗಳನ್ನು ಬಳಸಲಾಗಿಲ್ಲ ಎಂದು ಅದರಲ್ಲಿ ಕಂಡುಬಂದಿದೆ.
ಇದನ್ನೂ ಓದಿ : PM Awas Yojana 2021 : ಪಿಎಂ ಆವಾಸ್ ಯೋಜನೆಯಲ್ಲಿ ಮತ್ತೊಂದು ಸೌಲಭ್ಯ : ಈ ಲಾಭ ಪಡೆಯುವುದು ಹೇಗೆ ಇಲ್ಲಿದೆ!
ಹಾಳಾಗುವ ಹೆಚ್ಚಿನ ಅಪಾಯ
ನಾಗಾಲ್ಯಾಂಡ್(Nagaland) ಸರ್ಕಾರ ಮತ್ತು ಅದನ್ನು ಬೆಳೆಯುವ ರೈತರು ಮೊದಲ ಬಾರಿಗೆ 'ಕಿಂಗ್ ಚಿಲ್ಲಿ'ಯನ್ನು ರಫ್ತು ಮಾಡುತ್ತಿರುವುದು ಬಹಳ ಸಂತೋಷ ತಂದಿದೆ. ಆದರೆ, ಇದರೊಂದಿಗೆ, ಅವರ ಮುಂದೆ ಒಂದು ದೊಡ್ಡ ಸವಾಲು ಕೂಡ ಉದ್ಭವಿಸಿದೆ. ವಾಸ್ತವವಾಗಿ, ಈ ಮೆಣಸಿನಕಾಯಿಯನ್ನು ಗಿಡದಿಂದ ಕಿತ್ತಿದ ನಂತರ, ಅದನ್ನು ಬೇಗ ಬಳಸಬೇಕಾಗುತ್ತದೆ. ನೀವು ಇದನ್ನು ಮಾಡದಿದ್ದರೆ, ಅದು ಹಾಳಾಗುತ್ತದೆ. APEDA ಮತ್ತು NSAMB ಈ ಮೆಣಸಿನಕಾಯಿಯನ್ನು ಸುರಕ್ಷಿತವಾಗಿ ಸಂಗ್ರಹಿಸುವ ಮಾರ್ಗಗಳನ್ನು ಅನುಸರಿಸಲಾಗುತ್ತಿದೆ.
ಈಶಾನ್ಯ ರಾಜ್ಯಗಳಲ್ಲಿ ಬೆಳೆದ ಹಣ್ಣುಗಳು ಮತ್ತು ತರಕಾರಿಗಳ ರಫ್ತು ಉತ್ತೇಜಿಸಲು ಎಪಿಇಡಿಎ ಈ ವರ್ಷ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಅಪೆಡಾ ಈ ವರ್ಷ ತ್ರಿಪುರದಲ್ಲಿ ಬೆಳೆದ ಜಾಕ್‌ಫ್ರೂಟ್ ಅನ್ನು ಬ್ರಿಟನ್(Britain) ಮತ್ತು ಜರ್ಮನಿಗೆ ರಫ್ತು ಮಾಡಿದೆ. ಅಸ್ಸಾಂನಲ್ಲಿ ಬೆಳೆದ ನಿಂಬೆಯನ್ನು ಬ್ರಿಟನ್‌ಗೆ ಮತ್ತು ಕೆಂಪು ಅಕ್ಕಿಯನ್ನು ಅಮೆರಿಕಕ್ಕೆ ರಫ್ತು ಮಾಡಲಾಯಿತು. ಇದರೊಂದಿಗೆ ಅಸ್ಸಾಂನಲ್ಲಿ ಬೆಳೆದ ಬರ್ಮೀಸ್ ದ್ರಾಕ್ಷಿ ಲೆಟೆಕುವನ್ನು ದುಬೈಗೆ ರಫ್ತು ಮಾಡಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.