ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ನಳಿನಿಯಿಂದ ಆತ್ಮಹತ್ಯೆಗೆ ಯತ್ನ

ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ಹತ್ಯೆಗೈದು ಜೈಲು ಶಿಕ್ಷೆಗೆ ಒಳಗಾಗಿರುವ ನಳಿನಿ ಶ್ರೀಹರನ್ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರು ಕಳೆದ ರಾತ್ರಿ ಜೈಲಿನಲ್ಲಿರುವ ಮತ್ತೊಬ್ಬ ಖೈದಿಯೊಂದಿಗೆ ಜಗಳವಾಡಿದ್ದರು ಎಂದು ತಿಳಿದುಬಂದಿದೆ.  

Last Updated : Jul 21, 2020, 02:10 PM IST
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ನಳಿನಿಯಿಂದ ಆತ್ಮಹತ್ಯೆಗೆ ಯತ್ನ title=

ಬೆಂಗಳೂರು: ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ (Rajiv Gandhi)ಯನ್ನು ಹತ್ಯೆಗೈದು ಜೈಲು ಶಿಕ್ಷೆಗೆ ಒಳಗಾಗಿರುವ ನಳಿನಿ ಶ್ರೀಹರನ್ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಜೈಲಿನ ಮೂಲಗಳಿಂದ ಲಭಿಸಿರುವ ಮಾಹಿತಿ ಪ್ರಕಾರ ಕಳೆದ ರಾತ್ರಿ ಜೈಲಿನಲ್ಲಿರುವ ಮತ್ತೊಬ್ಬ ಖೈದಿಯೊಂದಿಗೆ ಜಗಳವಾಡಿದ್ದ ನಳಿನಿ ಬಳಿಕ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎಂದು ತಿಳಿದುಬಂದಿದೆ. ಸದ್ಯ ನಳಿನಿ ಅವರಿಗೆ ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಜೀವ್ ಗಾಂಧಿ 1991ರ ಮೇ 21 ರಂದು ತಮಿಳುನಾಡಿನಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಬಾಂಬ್ ಸ್ಫೋಟದಲ್ಲಿ ಹತ್ಯೆಗೀಡಾದರು. ಆ ನಂತರ ಪೊಲೀಸ್ ತನಿಖೆಯಲ್ಲಿ ನಳಿನಿ ಸಿಕ್ಕಿಬಿದ್ದರು. ನ್ಯಾಯಾಲಯ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಅಂದಿನಿಂದ ನಳಿನಿ ತಮಿಳುನಾಡಿನ ವೆಲ್ಲೂರು ಜೈಲಿನಲ್ಲಿದ್ದಾರೆ. ಕಳೆದ ರಾತ್ರಿ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಳಿನಿ ಪರ ವಕೀಲ ಪುಗ್ಲೆಂಧಿ ಈ ಬಗ್ಗೆ ಮಾಹಿತಿ ನೀಡಿದರು.

ಸುದ್ದಿ ಸಂಸ್ಥೆ WION ಜೊತೆಗಿನ ದೂರವಾಣಿ ಸಂಭಾಷಣೆಯಲ್ಲಿ ಮಾತನಾಡಿದ ಪುಗ್ಲೆಂಧಿ ಅವರು ಕಳೆದ 29 ವರ್ಷಗಳಿಂದ ನಳಿನಿ ಜೈಲಿನಲ್ಲಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಜೈಲಿನಲ್ಲಿ ನಳಿನಿ ಮತ್ತು ಇನ್ನೊಬ್ಬ ಖೈದಿ ನಡುವೆ ಜಗಳವಾಗಿದೆ ಎಂದು ವಕೀಲರು ಮಾಹಿತಿ ಒದಗಿಸಿದ್ದಾರೆ.

ಪುಗ್ಲೆಂಧಿ ಅವರು ನಳಿನಿ ಹೋರಾಟಗಾರರು ಮತ್ತು ಅವರು ಎಂದಿಗೂ ಅಂತಹ ಕೃತ್ಯವನ್ನು ಮಾಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಹೊರಬಂದ ಪ್ರಾಥಮಿಕ ತನಿಖೆಯ ವರದಿಯಿಂದ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಆತ್ಮಹತ್ಯಾ ಪ್ರಯತ್ನದ ಬಗ್ಗೆ ಜೈಲು ಅಧಿಕಾರಿಗಳು ನೀಡುತ್ತಿರುವ ಕಾರಣಗಳ ಬಗ್ಗೆ ತಮಗೆ ಅನುಮಾನವಿದೆ ಎಂದು ವಕೀಲರು ಅನುಮಾನ ವ್ಯಕ್ತಪಡಿಸಿದ್ದಾರೆ.

Trending News