Ghulam Nabi Azad: ಪ್ರಧಾನಿ ಮೋದಿಯನ್ನ ಹಾಡಿ ಹೊಗಳಿದ ಗುಲಾಮ್ ನಬಿ ಆಜಾದ್!

ಮುಂಬರುವ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ.

Last Updated : Feb 28, 2021, 06:16 PM IST
  • ಕಾಂಗ್ರೆಸ್ ನಾಯಕರು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಒಂದರ ಮೇಲೊಂದರಂತೆ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ.
  • ಮುಂಬರುವ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ.
  • ನರೇಂದ್ರ ಮೋದಿ ಪ್ರಧಾನಿಯಾದರೂ ತಾವು ನಡೆದು ಬಂದ ಹಾದಿಯನ್ನು ಮರೆತಿಲ್ಲ.
Ghulam Nabi Azad: ಪ್ರಧಾನಿ ಮೋದಿಯನ್ನ ಹಾಡಿ ಹೊಗಳಿದ ಗುಲಾಮ್ ನಬಿ ಆಜಾದ್! title=

ಶ್ರೀನಗರ: ಕಾಂಗ್ರೆಸ್ ನಾಯಕರು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಒಂದರ ಮೇಲೊಂದರಂತೆ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಇದರ ನಡುವೆ ಕಾಂಗ್ರೆಸ್‌ಗೆ ಹಿರಿಯ ನಾಯಕರಿಂದಲೇ ಇರಿಸು ಮುರಿಸು ಉಂಟಾಗುತ್ತಿದೆ. ಇದೀಗ ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಝಾದ್, ಮೋದಿ ಹೊಗಳೋ ಮೂಲಕ ಕಾಂಗ್ರೆಸ್‌ನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ನರೇಂದ್ರ ಮೋದಿ(Narendra Modi) ಪ್ರಧಾನಿಯಾದರೂ ತಾವು ನಡೆದು ಬಂದ ಹಾದಿಯನ್ನು ಮರೆತಿಲ್ಲ. ಇನ್ನು ಪ್ರಧಾನಿಯಾದರೂ ತಾವು ಚಾಯ್‌ವಾಲಾ ಅನ್ನೋದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಎಂದು ಅಝಾದ್ ಹೇಳಿದ್ದಾರೆ. ಶ್ರೀನಗರದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಅಝಾದ್ ಮೋದಿ ಗುಣಗಾನ ಮಾಡಿದ್ದಾರೆ.

Farmer Income: ರೈತರ ಆದಾಯ ಹೆಚ್ಚಳಕ್ಕೆ 'ಕೃಷಿ ಉತ್ಪನ್ನಗಳ ಪಟ್ಟಿ ಅಂತಿ'ಗೊಳಿಸಿದ ಸರ್ಕಾರ!

ಅಝಾದ್(Ghulam Nabi Azad) ಗುಣಗಾನ ಮಾಡಿರುವುದು ಕಾಂಗ್ರೆಸ್ ಮತ್ತಷ್ಟು ಇರಿಸು ಮುರಿಸು ತಂದಿದೆ. ಈಗಾಗಲೇ ಜಿ23 ಸಮಾವೇಶ ಮೂಲಕ ಕಾಂಗ್ರೆಸ್ ಹಾಗೂ ಗಾಂಧಿ ಪರಿವಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನಡೆ ಬೆನ್ನಲ್ಲೇ, ಇದೀಗ ಅಝಾದ್ ಮಾತು ಕಾಂಗ್ರೆಸ್‌ಗೆ ಭಾರಿ ಮುಖಭಂಗವಾಗಿದೆ.

Amit Shah: 'ಯುವಕರು ನಮಗೆ ಮತ ನೀಡಿದ್ರೆ ನಿರುದ್ಯೋಗವನ್ನು ಶೇ.40ಕ್ಕಿಂತ ಕಡಿಮೆ ಮಾಡುತ್ತೇವೆ'

ಹಲವು ನಾಯಕರ ಉತ್ತಮ ಗುಣಗಳನ್ನು ನಾನು ಇಷ್ಟಪಡುತ್ತೇನೆ. ಇದರಲ್ಲಿ ಪ್ರಧಾನಿ ಮೋದಿಯ ಹಲವು ಗುಣಗಳು ನನಗಿಷ್ಟ. ನಾನು ಹಳ್ಳಿ(Village)ಯಿಂದ ಬಂದವನು. ಮೋದಿ ಕೂಡ ಹಳ್ಳಿಯಿಂದ ಬಂದಿದ್ದಾರೆ. ತಾವು ಚಹಾ ಮಾರಾಟ ಮಾಡುತ್ತಿದ್ದರು ಅನ್ನೋದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಯಾರು ತಾವು ನಡೆದು ಬಂದ ಹಾದಿಯನ್ನು ಹಾಗೂ ತಮ್ಮತನವನ್ನು ಮರೆತಿಲ್ಲ ಎಂದು ಅಝಾದ್ ಹೇಳಿದ್ದಾರೆ.

Milk Price Hike: ಮಾರ್ಚ್ 1 ರಿಂದ ಲೀಟರ್ ಹಾಲಿನ ಬೆಲೆ 100 ರೂ.? ನಿಜಾನಾ ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News