ಚಂಡೀಗಢ: ಪಾಕಿಸ್ತಾನದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಕಾರ್ಯಕ್ರಮಕ್ಕೆ ಇಮ್ರಾನ್ ಖಾನ್ ಅವರು ನೀಡಿದ ಆಹ್ವಾನವನ್ನು ಸ್ವೀಕರಿಸಿದ್ದೇನೆ ಎಂದು ಪಂಜಾಬ್ ಕ್ಯಾಬಿನೆಟ್ ಸಚಿವ ನವಜೋತ್ ಸಿಂಗ್ ಸಿಧು ಹೇಳಿದರು.
ಈ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು "ಇದೊಂದು ಗೌರವ, ನಾನು ಆಮಂತ್ರಣವನ್ನು ಸ್ವೀಕರಿಸುತ್ತೇನೆ, ಪ್ರತಿಭಾವಂತ ವ್ಯಕ್ತಿಗಳು ಯಾವಾಗಲು ಮೆಚ್ಚುಗೆ ಪಡೆಯುತ್ತಾರೆ, ಅಧಿಕಾರದ ವ್ಯಕ್ತಿಗಳು ಭಯಭೀತರಾದರೆ, ವ್ಯಕ್ತಿತ್ವದ ವ್ಯಕ್ತಿಗಳು ವಿಶ್ವಾಸಾರ್ಹರಾಗಿದ್ದಾರೆ. ಖಾನ್ ಸಹಾಬ್ ಅಂತಹ ವ್ಯಕ್ತಿತ್ವದ ವ್ಯಕ್ತಿ. ಅವರು ವಿಶ್ವಾಸಾರ್ಹರಾಗಿದ್ದಾರೆ. ಕ್ರೀಡಾಪಟುಗಳು ಅಡೆ ತಡೆಗಳನ್ನು ಒಡೆದು ಸೇತುವೆಗಳನ್ನು ಕಟ್ಟಬಲ್ಲರು ಜನರನ್ನು ಒಟ್ಟುಗೂಡಿಸಬಲ್ಲರು ಎಂದು ಸಿಧು ಮಾಧ್ಯಮಗಳಿಗೆ ತಿಳಿಸಿದರು.
ಇಮ್ರಾನ್ ಖಾನ್ ಅವರು ತಮ್ಮ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಹ್ವಾನಿಸಿದ ವ್ಯಕ್ತಿಗಳಲ್ಲಿ ಸಿಧು ಅವರು ಕೂಡ ಒಬ್ಬರು. ಇತ್ತೀಚಿಗೆ ಪಾಕಿಸ್ತಾನದ ಲ್ಲಿ ನಡೆದ ಸಾರ್ವತ್ರಿಕಚುನಾವಣೆಯಲ್ಲಿ ಪಾಕಿಸ್ತಾನ ತೆಹ್ರಿಕ್-ಎ-ಇನ್ಸಾಫ್ (ಪಿಟಿಐ), ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೋಮ್ಮಿತ್ತು ಆದ್ದರಿಂದ ಈಗ ಇಮ್ರಾನ್ ಖಾನ್ ಅಗಸ್ಟ್ 11 ರಂದು ಪಾಕಿಸ್ತಾನದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.