OMG: ದೇವಾಲಯ ನಿರ್ಮಾಣ ಕಾರ್ಯದ ವೇಳೆ ಮೊಘಲರ ಕಾಲದ 400 ನಾಣ್ಯಗಳು ಪತ್ತೆ!

Mughal Era's 400 Coins Found: ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಅರೇಬಿಕ್ ಭಾಷೆಯ ಶಾಸನಗಳನ್ನು ಹೊಂದಿರುವ ನಾಣ್ಯಗಳನ್ನು ಮೊಘಲರ ಕಾಲದಲ್ಲಿ ಬಳಸಲಾಗುತ್ತಿತ್ತು ಎಂದು ಹೇಳಲಾಗಿದೆ.

Written by - Puttaraj K Alur | Last Updated : May 23, 2023, 08:27 PM IST
  • ದೇವಸ್ಥಾನ ನಿರ್ಮಾಣದ ಕಾಮಗಾರಿ ವೇಳೆ ಮೊಘಲರ ಕಾಲದ 400 ನಾಣ್ಯಗಳು ಪತ್ತೆ
  • ಉತ್ತರಪ್ರದೇಶದ ಸಹರಾನ್‍ಪುರ್‍ದಲ್ಲಿ ಪುರಾತನ ಕಾಲದ ನಾಣ್ಯಗಳು ಪತ್ತೆಯಾಗಿವೆ
  • ಸತಿಧಾಮ ದೇವಾಲಯ ಆವರಣದ ಗೋಡೆ ತೆರವುಗೊಳಿಸಿ ಮಣ್ಣು ಅಗೆಯುತ್ತಿದ್ದ ವೇಳೆ ನಾಣ್ಯಗಳು ಪತ್ತೆ
OMG: ದೇವಾಲಯ ನಿರ್ಮಾಣ ಕಾರ್ಯದ ವೇಳೆ ಮೊಘಲರ ಕಾಲದ 400 ನಾಣ್ಯಗಳು ಪತ್ತೆ! title=
ಮೊಘಲರ ಕಾಲದ 400 ನಾಣ್ಯಗಳು ಪತ್ತೆ!

ಲಕ್ನೋ: ದೇವಸ್ಥಾನ ನಿರ್ಮಾಣದ ಕಾಮಗಾರಿ ವೇಳೆ ಮೊಘಲರ ಕಾಲದ 400 ನಾಣ್ಯಗಳು ಪತ್ತೆಯಾಗಿವೆ. ಉತ್ತರಪ್ರದೇಶದ ಸಹರಾನ್‍ಪುರ್‍ದಲ್ಲಿ ಪುರಾತನ ಕಾಲದ ನಾಣ್ಯಗಳು ಪತ್ತೆಯಾಗಿವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.  

ಸಹರಾನ್‍ಪುರದ ಹುಸೈನ್‍ಪುರ ಗ್ರಾಮದ ಸತಿಧಾಮ ದೇವಾಲಯದ ಆವರಣ ಗೋಡೆಯನ್ನು ತೆರವುಗೊಳಿಸಿ ಮಣ್ಣು ಅಗೆಯುತ್ತಿದ್ದ ವೇಳೆ ಈ ನಾಣ್ಯಗಳು ಪತ್ತೆಯಾಗಿವೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಸಾಗರ್‌ ಜೈನ್‌ ತಿಳಿಸಿದ್ದಾರೆ.

ಘಟನೆ ಕುರಿತು ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಬಳಿಕ ಸುಮಾರು 400 ನಾಣ್ಯಗಳನ್ನು ವಶಕ್ಕೆ ಪಡೆದಿದ್ದಾರೆ. ಮೊಘಲರ ಕಾಲದಲ್ಲಿ ಬಳಸುತ್ತಿದ್ದ ಈ ನಾಣ್ಯಗಳಲ್ಲಿ ಅರೆಬಿಕ್‌ ಭಾಷೆಯ ಲಿಪಿ ಇರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ಜೈನ್ ತಿಳಿಸಿದ್ದಾರೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ವಿವಾದಾತ್ಮಕ ಜಿ20 ಸಭೆ: ಬಹಿಷ್ಕರಿಸಿದ ಚೀನಾ ಮತ್ತು ಸೌದಿ ಅರೇಬಿಯಾ!

ಪುರಾತತ್ವ ಶಾಸ್ತ್ರ ಇಲಾಖೆ ಸಹ ನಾಣ್ಯಗಳನ್ನು ಪರಿಶೀಲಿಸುತ್ತಿದ್ದು, ಯಾವ ಲೋಹ ಬಳಸಿ ಈ ನಾಣ್ಯಗಳನ್ನು ತಯಾರಿಸಲಾಗಿದೆ ಎಂಬುದರ ಬಗ್ಗೆ ಇನ್ನಷ್ಟೇ ಮಾಹಿತಿ ನೀಡಬೇಕಿದೆ. ಪತ್ತೆಯಾಗಿರುವ ನಾಣ್ಯಗಳು ಅಂದಾಜು 350 ವರ್ಷಗಳ ಹಿಂದಿನದ್ದಾಗಿದ್ದು, ಪ್ರತಿಯೊಂದು ನಾಣ್ಯವು 11 ಗ್ರಾಂ ತೂಕವಿದೆ.

ಪ್ರತಿ ನಾಣ್ಯದ ಪ್ರಸ್ತುತ ಮಾರುಕಟ್ಟೆ ಬೆಲೆ 3,500 ರೂ. ಎಂದು ತಿಳಿದುಬಂದಿದೆ. ಹುಸೈನ್‍ಪುರ್‍ದಲ್ಲಿ ದೊರೆತ ಈ ನಾಣ್ಯಗಳು ಮೊಘಲ್‌ ದೊರೆ 2ನೇ ಶಾ ಅಲಾಂ ಕಾಲಘಟ್ಟದ್ದಾಗಿದೆ. ಇವುಗಳಲ್ಲಿರುವ ಪಾರ್ಸಿ ಭಾಷೆಯ ಲಿಪಿಯಾಗಿದೆ ಎಂದು ಇತಿಹಾಸಕಾರ ರಾಜೀವ್‌ ಉಪಾಧ್ಯಾಯ ತಿಳಿಸಿದ್ದಾರೆ.

ಇದನ್ನೂ ಓದಿ: UPSC ಅಂತಿಮ ಫಲಿತಾಂಶ ಪ್ರಕಟ : ʼಟಾಪ್‌ 3ʼನಲ್ಲಿ ಮಹಿಳೆಯರದ್ದೇ ಮೇಲುಗೈ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News