Nepal PM India Visit: ನೇಪಾಳದಲ್ಲಿ RuPay ಬಿಡುಗಡೆ ಮಾಡಿದ PM Modi, ಉಭಯ ದೇಶಗಳ ನಡುವೆ ಮಹತ್ವ ಒಪ್ಪಂದಗಳ ಮೇಲೆ ಹಸ್ತಾಕ್ಷರ

PM Deuba India Visit - ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರು ಶನಿವಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಉಭಯ ದೇಶಗಳ ನಾಯಕರ ಸಮ್ಮುಖದಲ್ಲಿ ಭಾರತ ಮತ್ತು ನೇಪಾಳ ನಡುವೆ ಹಲವು ಒಪ್ಪಂದಗಳಿಗೆ ಸಹಿ ಹಾಕಲಾಯಿತು ಮತ್ತು ದಾಖಲೆಗಳ ವಿನಿಮಯ ಮಾಡಿಕೊಳ್ಳಲಾಯಿತು.  

Written by - Nitin Tabib | Last Updated : Apr 2, 2022, 07:44 PM IST

    ನೇಪಾಳದಲ್ಲಿ ಬಿಡುಗಡೆಯಾದ ಭಾರತೀಯ ಪೇಮೆಂಟ್ ಸರ್ವಿಸ್ ಸಿಸ್ಟಂ RuPay.

  • ಮೂರು ದಿನಗಳ ಭಾರತ ಭೇಟಿಗಾಗಿ ಆಗಮಿಸಿದ ನೇಪಾಳ ಪ್ರಧಾನಿ.
  • ಎರಡು ದೇಶಗಳ ನಡುವೆ ಹಲವು ಶತಮಾನಗಳ ಹಳೆ ಸಂಬಂಧ.
Nepal PM India Visit: ನೇಪಾಳದಲ್ಲಿ RuPay ಬಿಡುಗಡೆ ಮಾಡಿದ PM Modi, ಉಭಯ ದೇಶಗಳ ನಡುವೆ ಮಹತ್ವ ಒಪ್ಪಂದಗಳ ಮೇಲೆ ಹಸ್ತಾಕ್ಷರ title=
Nepal PM India Visit

ನವದೆಹಲಿ: Rupay Launch In Nepal - ನೇಪಾಳದ ಪ್ರಧಾನಿ ಮೂರು ದಿನಗಳ ಭಾರತ ಭೇಟಿಗಾಗಿ ಆಗಮಿಸಿದ್ದಾರೆ. ಈ ಭೇಟಿಯಲ್ಲಿ ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ (Nepali Counterpart Sher Bahadur Deuba) ಅವರು ಶನಿವಾರ ಹೈದರಾಬಾದ್ ಹೌಸ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಭೇಟಿ ಮಾಡಿದ್ದಾರೆ. ಎರಡೂ ದೇಶಗಳ ನಾಯಕರ ಸಮ್ಮುಖದಲ್ಲಿ ಭಾರತ ಮತ್ತು ನೇಪಾಳ ನಡುವೆ ಹಲವು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಮತ್ತು ದಾಖಲೆಗಳ ವಿನಿಮಯ ಮಾಡಿಕೊಳ್ಳಲಾಗಿದೆ. 

ತೈಲ ವಲಯದಲ್ಲಿ ಈ ಎರಡು ವಿಷಯಗಳ ಕುರಿತು ಒಪ್ಪಂದ
ಪ್ರಧಾನಿ ಮೋದಿ ಮತ್ತು ನೇಪಾಳದ ಪ್ರಧಾನಿ ದೇವುಬಾ ಅವರ ಭೇಟಿಯ ಬಗ್ಗೆ ಮಾಹಿತಿ ನೀಡಿದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ  (Harshvardhan Shrangla) ಅವರು, ಈ ಸಭೆಯಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ಮತ್ತು ನೇಪಾಳ ತೈಲ ನಿಗಮವು 5 ವರ್ಷಗಳ ಅವಧಿಗೆ ಎರಡು ಒಪ್ಪಂದಗಳಿಗೆ ಸಹಿ ಹಾಕಿವೆ. ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆಯ ನವೀಕರಣ ಮತ್ತು ತಾಂತ್ರಿಕ ಪರಿಣತಿಯನ್ನು ಹಂಚಿಕೊಳ್ಳುವುದು ಇದರಲ್ಲಿ ಶಾಮೀಲಾಗಿವೆ. 

ಇದನ್ನೂ ಓದಿ-ಕರೋನಾ ನಂತರ ಜನರನ್ನು ಕಾಡಲಿದೆ ಈ ವೈರಸ್ , WHO ಎಚ್ಚರಿಕೆ !

ನೇಪಾಳದಲ್ಲಿ ಬಿಡುಗಡೆಯಾದ ಭಾರತೀಯ ಪೇಮೆಂಟ್ ಸರ್ವಿಸ್ ಸಿಸ್ಟಂ RuPay
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ನೇಪಾಳದ ಸಹವರ್ತಿಯೊಂದಿಗೆ ಜಂಟಿಯಾಗಿ ಹಿಮಾಲಯ ದೇಶದಲ್ಲಿ ಭಾರತೀಯ ಪಾವತಿ ಸೇವಾ ವ್ಯವಸ್ಥೆಗೆ ಚಾಲನೆ ನೀಡಿದ್ದಾರೆ ಮತ್ತು ಜಯನಗರ (ಭಾರತ) ಮತ್ತು ಕುರ್ತಾ (ನೇಪಾಳ) ನಡುವಿನ ಗಡಿಯಾಚೆ ಪ್ರಯಾಣಿಕ ರೈಲು ಸೇವೆಗೂ ಕೂಡ ಚಾಲನೆ ನೀಡಿದ್ದಾರೆ.  ಈ ಕುರಿತು ತನ್ನ ಜಂಟಿ ಹೇಳಿಕೆಯಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ನೇಪಾಳದ ಶಾಂತಿ, ಸಮೃದ್ಧಿ ಮತ್ತು ಅಭಿವೃದ್ಧಿಯ ಪ್ರಯಾಣದಲ್ಲಿ ಭಾರತವು ಒಂದು ದೃಢವಾದ ಪಾಲುದಾರ ರಾಷ್ಟ್ರವಾಗಿದ್ದು, ಎಂದಿಗೂ ಕೂಡ ಇರಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ-Alcohol Addiction: ಮನುಷ್ಯರಿಗೆ ಮದ್ಯ ಸೇವನೆಯ ಅಭ್ಯಾಸ ಏಕೆ ಬೀಳುತ್ತದೆ? ವಿಜ್ಞಾನಿಗಳು ಕಂಡು ಹಿಡಿದ ವಿಶಿಷ್ಟ ಕಾರಣ ಇಲ್ಲಿದೆ

ಗಡಿ ವಿಷಯಗಳ ಮೇಲೆ ಚರ್ಚೆ
ಇನ್ನೊಂದೆಡೆ, ಭಾರತದೊಂದಿಗೆ ನೇಪಾಳದ ಸಂಬಂಧಗಳು ತುಂಬಾ ಮುಖ್ಯವಾಗಿವೆ ಎಂದು ಶೇರ್ ಬಹದ್ದೂರ್ ದೇವುಬಾ ತಮ್ಮ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ರಧಾನಿ ಮೋದಿ ಮತ್ತು ನಾನು ಉಭಯ ದೇಶಗಳ ನಡುವಿನ ಗಡಿ ವಿವಾದದ ಬಗ್ಗೆ ಚರ್ಚಿಸಿದ್ದೇವೆ. ದ್ವಿಪಕ್ಷೀಯ ಕಾರ್ಯವಿಧಾನವನ್ನು ಸ್ಥಾಪಿಸುವ ಮೂಲಕ ಇದನ್ನು ಪರಿಹರಿಸಬೇಕೆಂದು ನಾನು ಪ್ರಧಾನಿ ಮೋದಿಯವರನ್ನು ಒತ್ತಾಯಿಸಿದ್ದೇನೆ. ಭಾರತ ಮತ್ತು ನೇಪಾಳ ತಮ್ಮ ಸಂಬಂಧಗಳನ್ನು ವಿಸ್ತರಿಸಲು ಮತ್ತು ಹೊಸ ಎತ್ತರವನ್ನು ತಲುಪಲು ರೈಲ್ವೆ, ಶಕ್ತಿಯಂತಹ ಕ್ಷೇತ್ರಗಳಲ್ಲಿ 4 ಒಪ್ಪಂದಗಳನ್ನು ಅಂತಿಮಗೊಳಿಸಿವೆ ಎಂದು ಅವರು ಹೇಳಿದ್ದಾರೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News