New Parliament building : ವಿವಿಧ ವಿರೋಧ ಪಕ್ಷಗಳ ಬಹಿಷ್ಕಾರದ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಭಾನುವಾರ ನೂತನ ಸಂಸತ್ ಭವನವನ್ನು ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿ, ಬ್ರಿಟಿಷರಿಂದ ಅಧಿಕಾರ ಹಸ್ತಾಂತರವಾದ ನಂತರ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಂದ ಸ್ವೀಕರಿಸಲ್ಪಟ್ಟ ಮತ್ತು ಅಲಹಾಬಾದ್‌ನ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದ್ದ ತಮಿಳುನಾಡಿನ ಐತಿಹಾಸಿಕ 'ರಾಜದಂಡ'ವನ್ನು ಹೊಸ ಕಟ್ಟಡದಲ್ಲಿ ಸ್ಥಾಪಿಸಲಾಯಿತು. ಲೋಕಸಭೆ ಸ್ಪೀಕರ್ ಪೀಠದ ಪಕ್ಕದಲ್ಲಿ ಸದನದಲ್ಲಿ ಇರಿಸಲಾಗಿದೆ.
ಹೊಸ ಸಂಸತ್ತಿನ ಕಟ್ಟಡವು ಭಾರತದ ವೈವಿಧ್ಯಮಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ.. ಹೌದು.. ದೇಶದ ವಿವಿಧ ರಾಜ್ಯಗಳ ಕಲಾವೈಭವ, ವಸ್ತುಗಳು ಈ ನೂತನ ಸಂಸತ್ ಭವನದಲ್ಲಿವೆ. ಉತ್ತರ ಪ್ರದೇಶದ ಮಿರ್ಜಾಪುರದಿಂದ ಕಾರ್ಪೆಟ್‌ಗಳು, ತ್ರಿಪುರಾದಿಂದ ಬಿದಿರಿನ ನೆಲಹಾಸುಗಳು ಮತ್ತು ರಾಜಸ್ಥಾನ ಕಲ್ಲುಗಳನ್ನು ಹೊಸ ಸಂಸತ್ತಿನ ಕಟ್ಟಡಕ್ಕೆ ಬಳಸಲಾಗಿದೆ. ಹೀಗೆ ದೇಶದ ವಿವಿಧ ಭಾಗಗಳಿಂದ ಸಾಕಷ್ಟು ವಸ್ತುಗಳು ಪಡೆದು ನಿರ್ಮಿಸಿರುವ ಈ ಭವನ ಭಾರತದ ವೈವಿಧ್ಯಮಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ.
ಇದನ್ನೂ ಓದಿ: ನೂತನ ಸಂಸತ್ ಭವನದ ವಿಡಿಯೋ ಹಂಚಿಕೊಂಡು ಜನರಿಗೆ ವಿಶೇಷ ಮನವಿ ಮಾಡಿದ ಪ್ರಧಾನಿ ಮೋದಿ
ಕಟ್ಟಡದಲ್ಲಿ ಬಳಸಲಾದ ತೇಗವನ್ನು ಮಹಾರಾಷ್ಟ್ರದ ನಾಗ್ಪುರದಿಂದ ತರಲಾಗಿದೆ. ಕೆಂಪು ಮತ್ತು ಬಿಳಿ ಮರಳುಗಲ್ಲು ರಾಜಸ್ಥಾನದ ಸರ್ಮದುರಾದಿಂದ ಪಡೆಯಲಾಗಿದೆ. ರಾಷ್ಟ್ರೀಯ ರಾಜಧಾನಿಯಲ್ಲಿರುವ ಕೆಂಪು ಕೋಟೆ ಮತ್ತು ಹುಮಾಯೂನ್ ಸಮಾಧಿಗೆ ಮರಳುಗಲ್ಲುಗಳು ಸರ್ಮದುರಾದಿಂದ ಬಂದಿವೆ ಎಂದು ತಿಳಿದುಬಂದಿದೆ. ಕೇಶರಿಯಾ ಹಸಿರು ಕಲ್ಲನ್ನು ಉದಯಪುರದಿಂದ, ಕೆಂಪು ಗ್ರಾನೈಟ್ ಅನ್ನು ಅಜ್ಮೀರ್ ಬಳಿಯ ಲಾಗಾದಿಂದ ಮತ್ತು ಬಿಳಿ ಅಮೃತಶಿಲೆಯನ್ನು ರಾಜಸ್ಥಾನದ ಅಂಬಾಜಿಯಿಂದ ಪಡೆಯಲಾಗಿದೆ.
ಲೋಕಸಭೆ ಮತ್ತು ರಾಜ್ಯಸಭಾ ಚೇಂಬರ್‌ಗಳಲ್ಲಿ ಚಾವಣಿಯ ಕೆಲಸಕ್ಕಾಗಿ ಉಕ್ಕಿನ ರಚನೆಯನ್ನು ಕೇಂದ್ರಾಡಳಿತ ಪ್ರದೇಶವಾದ ದಮನ್ ಮತ್ತು ದಿಯುನಿಂದ ಪಡೆಯಲಾಗಿದ್ದು, ಹೊಸ ಕಟ್ಟಡದಲ್ಲಿನ ಪೀಠೋಪಕರಣಗಳನ್ನು ಮುಂಬೈನಲ್ಲಿ ವಿನ್ಯಾಸಗೊಳಿಸಲಾಗಿದೆ. ರಚನೆಯ ಸುತ್ತಲಿನ ಕಲ್ಲಿನ 'ಜಲಿ' (ಜಾಲಿ) ಕೆತ್ತನೆಗಳನ್ನು ರಾಜಸ್ಥಾನದ ರಾಜನಗರ ಮತ್ತು ಉತ್ತರ ಪ್ರದೇಶದ ನೋಯ್ಡಾದಿಂದ ಪಡೆಯಲಾಗಿದೆ.
ಇದನ್ನೂ ಓದಿ: ನೂತನ ಸಂಸತ್ ಭವನದಲ್ಲಿ ಸ್ವರ್ಣ ಖಚಿತ ʼಸೆಂಗೋಲ್ʼ..! ʼರಾಜದಂಡ ರಹಸ್ಯ..ʼ ಇಲ್ಲಿದೆ
ಹೊಸ ಸಂಸತ್ತಿನ ಕಟ್ಟಡವು ಭವ್ಯವಾದ ಸಂವಿಧಾನ ಭವನ, ಸಂಸದರ ವಿಶ್ರಾಂತಿ ಕೊಠಡಿ, ಗ್ರಂಥಾಲಯ, ಹಲವಾರು ಬೋರ್ಡ್ ಕೊಠಡಿಗಳು, ಊಟದ ಪ್ರದೇಶಗಳು ಈ ಭವನದಲ್ಲಿದೆ. ತ್ರಿಕೋನ ಆಕಾರದ ಈ ನಾಲ್ಕು ಅಂತಸ್ತಿನ ಕಟ್ಟಡವು 64,500 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಮೂರು ಮುಖ್ಯ ದ್ವಾರಗಳನ್ನು ಹೊಂದಿದೆ. ಜ್ಞಾನ ಧ್ವಾರ, ಶಕ್ತಿ ಧ್ವಾರ ಮತ್ತು ಕರ್ಮ ಧ್ವಾರ ಸೇರಿದಂತೆ ವಿಐಪಿಗಳು, ಸಂಸದರು ಮತ್ತು ಸಂದರ್ಶಕರಿಗೆ ಪ್ರತ್ಯೇಕ ಪ್ರವೇಶದ್ವಾರವಿದೆ. ಹೊಸ ಸಂಸತ್ ಕಟ್ಟಡದ ಲೋಕಸಭೆಯಲ್ಲಿ 888 ಸದಸ್ಯರು ಮತ್ತು ರಾಜ್ಯಸಭೆಯಲ್ಲಿ 300 ಸದಸ್ಯರು ಕುಳಿತುಕೊಳ್ಳಬಹುದು. ಉಭಯ ಸದನಗಳ ಜಂಟಿ ಅಧಿವೇಶನದಲ್ಲಿ ಒಟ್ಟು 1,280 ಸದಸ್ಯರು ಲೋಕಸಭೆಯ ಕೊಠಡಿಯಲ್ಲಿ ಕುಳಿತುಕೊಳ್ಳಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ