Corona ಕುರಿತು ಭಾರತೀಯ ವಿಜ್ಞಾನಿಗಳ ಬೆಚ್ಚಿಬೀಳಿಸುವ ಅಧ್ಯಯನ ಪ್ರಕಟ, ಮಕ್ಕಳ ಮೇಲೆ ಅಪಾಯದ ಕಾರ್ಮೋಡ!

Covid-19: ಇತ್ತೀಚಿನ ದಿನಗಳಲ್ಲಿ  ಭಾರತದಲ್ಲಿ ಹೆಚ್ಚಾಗುತ್ತಿರುವ ಕೋವಿಡ್-19 ಪ್ರಕರಣಗಳಲ್ಲಿ ಮಧ್ಯೆ, ಓಮಿಕ್ರಾನ್ ಎಕ್ಸ್‌ಬಿಬಿ.1.16 ಸಬ್‌ವೇರಿಯಂಟ್‌ ಕುರಿತು ಭಾರತೀಯ ವಿಜ್ಞಾನಿಗಳು ನಡೆಸಿರುವ ಒಂದು ಅಧ್ಯಯನ ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಅದು ಕಾಂಜಂಕ್ಟಿವಿಟಿಸ್ ಅಪಾಯವನ್ನು ಹೆಚ್ಚಿಸುತ್ತದೆ ಎಂಬುದನ್ನೂ ಒತ್ತಿ ಹೇಳಿದೆ.  

Written by - Nitin Tabib | Last Updated : Apr 22, 2023, 10:44 PM IST
  • ಈ ಕುರಿತು ತಮ್ಮ ತಮ್ಮ ಶೋಧಪತ್ರದಲ್ಲಿ ಬರೆದುಕೊಂಡಿರುವ ಯುಪಿಯ ಬಿಜ್ನೋರ್‌ನಲ್ಲಿರುವ ಮಂಗಳಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಸಲಹೆಗಾರ ಮಕ್ಕಳ ವೈದ್ಯರೂ ಆಗಿರುವ ವಶಿಷ್ಠ ಅವರು,
  • "ನಮ್ಮ ಆರಂಭಿಕ ಫಲಿತಾಂಶಗಳಲ್ಲಿ ದೊಡ್ಡ ಮಕ್ಕಳ ಹೋಲಿಕೆಯಲ್ಲಿ ಚಿಕ್ಕ ಶಿಶುಗಳ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ತೋರಿಸಿವೆ ಹಾಗೂ ಅವುಗಳಲ್ಲಿ ಉಸಿರಾಟದ ತೊಂದರೆ ಹಾಗೂ ಇತರ ಪ್ರಸ್ತುತಿಗಳಿಗೆ ಪ್ರಾಮುಖ್ಯತೆಯನ್ನು ನೀಡಲಾಗಿದೆ" ಎಂದಿದ್ದಾರೆ.
Corona ಕುರಿತು ಭಾರತೀಯ ವಿಜ್ಞಾನಿಗಳ ಬೆಚ್ಚಿಬೀಳಿಸುವ ಅಧ್ಯಯನ ಪ್ರಕಟ, ಮಕ್ಕಳ ಮೇಲೆ ಅಪಾಯದ ಕಾರ್ಮೋಡ! title=

Covid-19: : ಇತ್ತೀಚಿನ ದಿನಗಳಲ್ಲಿ  ಭಾರತದಲ್ಲಿ ಹೆಚ್ಚಾಗುತ್ತಿರುವ ಕೋವಿಡ್-19 ಪ್ರಕರಣಗಳಲ್ಲಿ ಮಧ್ಯೆ, ಓಮಿಕ್ರಾನ್ ಎಕ್ಸ್‌ಬಿಬಿ.1.16 ಸಬ್‌ವೇರಿಯಂಟ್‌ ಕುರಿತು ಭಾರತೀಯ ವಿಜ್ಞಾನಿಗಳು ನಡೆಸಿರುವ ಒಂದು ಅಧ್ಯಯನ ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಅದು ಕಾಂಜಂಕ್ಟಿವಿಟಿಸ್ ಅಪಾಯವನ್ನು ಹೆಚ್ಚಿಸುತ್ತದೆ ಎಂಬುದನ್ನೂ ಒತ್ತಿ ಹೇಳಿದೆ. WHO ನ ಲಸಿಕೆ ಸುರಕ್ಷತಾ ಜಾಲದ ಸದಸ್ಯರಾಗಿರುವ ವಿಪಿನ್ ಎಂ.ವಶಿಷ್ಟ್ ನೇತೃತ್ವದಲ್ಲಿ ನಡೆಸಲಾಗಿರುವ ಈ ಸಂಶೋಧನೆಯು ಏಪ್ರಿಲ್ 4-16 ರ ನಡುವೆ ಚಿಕಿತ್ಸೆಗಾಗಿ ಉತ್ತರ ಪ್ರದೇಶದ ಮಕ್ಕಳ ಆಸ್ಪತ್ರೆಯ OPD ಗೆ ಹಾಜರಾದ 25 ಮಕ್ಕಳ ದತ್ತಾಂಶವನ್ನು ಆಧರಿಸಿದೆ.

ಈ ಕುರಿತು ತಮ್ಮ ತಮ್ಮ ಶೋಧಪತ್ರದಲ್ಲಿ ಬರೆದುಕೊಂಡಿರುವ ಯುಪಿಯ ಬಿಜ್ನೋರ್‌ನಲ್ಲಿರುವ ಮಂಗಳಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಸಲಹೆಗಾರ ಮಕ್ಕಳ ವೈದ್ಯರೂ ಆಗಿರುವ ವಶಿಷ್ಠ ಅವರು, "ನಮ್ಮ ಆರಂಭಿಕ ಫಲಿತಾಂಶಗಳಲ್ಲಿ ದೊಡ್ಡ ಮಕ್ಕಳ ಹೋಲಿಕೆಯಲ್ಲಿ ಚಿಕ್ಕ ಶಿಶುಗಳ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ತೋರಿಸಿವೆ ಹಾಗೂ ಅವುಗಳಲ್ಲಿ ಉಸಿರಾಟದ ತೊಂದರೆ ಹಾಗೂ ಇತರ ಪ್ರಸ್ತುತಿಗಳಿಗೆ ಪ್ರಾಮುಖ್ಯತೆಯನ್ನು ನೀಡಲಾಗಿದೆ" ಎಂದಿದ್ದಾರೆ. 

"ಒಂದು ಕುತೂಹಲಕಾರಿ ಸಂಶೋಧನೆಯೆಂದರೆ ಶೇ. 42.8 ರಷ್ಟು ಧನಾತ್ಮಕ ಶಿಶುಗಳಲ್ಲಿ ಮ್ಯೂಕೋಯ್ಡ್ ಡಿಸ್ಚಾರ್ಜ್ ಮತ್ತು ಕಣ್ಣುರೆಪ್ಪೆಗಳ ಜಿಗುಟಾಗುವಿಕೆಯ ಜೊತೆಗೆ ತುರಿಕೆ, ನಾನ್-ಪ್ಯೂರಂಟ್ ಕಾಂಜಂಕ್ಟಿವಿಟಿಸ್ ಉಪಸ್ಥಿತಿಯನ್ನು ಗಮನಿಸಲಾಗಿದೆ" ಎಂದು ಅವರು ಹೇಳಿದ್ದಾರೆ. ಮುಖ್ಯವಾಗಿ, ಯಾವುದೇ ಮಕ್ಕಳಿಗೆ ಆಸ್ಪತ್ರೆಗೆ ದಾಖಲಿಸುವ ಅವಶ್ಯಕತೆ ಇರಲಿಲ್ಲ ಎಂದು ಅವರು ತಮ್ಮ ಪ್ರಿಪ್ರಿಂಟ್ ಸೈಟ್ ಮೆಡ್ರಿಕ್ಸಿವ್‌ನಲ್ಲಿ ಪ್ರಕಟವಾದ ಶೋಧಪತ್ರದಲ್ಲಿ ತಿಳಿಸಿದ್ದಾರೆ ಮತ್ತು ಎಲ್ಲಾ ಮಕ್ಕಳು ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ-Rahul Gandhi Bungalow: 'ನಿಜ ಹೇಳಿದ್ದಕ್ಕೆ ಸಿಕ್ಕ ಬೆಲೆ' ತುಘಲಕ್ ಲೇನ್ ಬಂಗಲೆ ತೊರೆದ ರಾಹುಲ್ ಗಾಂಧಿ

ತಮ್ಮ ಟ್ವಿಟ್ಟರ್ ಖಾತೆಯಲ್ಲಿ  ಪ್ರಕರಣಗಳ ಕುರಿತು ವಿವರಣೆ ನೀಡಿರುವ ವಶಿಷ್ಟ್, ಪ್ರಸ್ತುತ ಕೋವಿಡ್ ಏಕಾಏಕಿ ಕೇವಲ 1-3 ದಿನಗಳ ಕಾಲ ಸೌಮ್ಯವಾದ ಜ್ವರ ಕಾಯಿಲೆಗೆ ಕಾರಣವಾಗುತ್ತಿದೆ ಎಂದು ಹೇಳಿದ್ದಾರೆ. ಹಿರಿಯ ಮಕ್ಕಳಲ್ಲಿ ಉಸಿರಾಟದ ಲಕ್ಷಣಗಳು ಮೇಲುಗೈ ಸಾಧಿಸಿದರೆ, ಅತ್ಯಂತ ಕಿರಿಯ ಪ್ರಕರಣವು 13 ದಿನ ವಯಸ್ಸಿನ ನವಜಾತ ಶಿಶುವಿನ ಪ್ರಕರಣವಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-PM Modi Visit: 7 ಪಟ್ಟಣಗಳು, 8 ಕಾರ್ಯಕ್ರಮಗಳು 36 ಗಂಟೆಗಳಲ್ಲಿ ಪ್ರಧಾನಿ ಮೋದಿ 5300 ಕಿಮೀ ಯಾತ್ರೆ!

"ಹಿರಿಯ ಮಕ್ಕಳಿಗಿಂತ ಕಿರಿಯ ಮಕ್ಕಳ ಮೇಲೆ ಇದು ಹೆಚ್ಚು ಪ್ರಭಾವ ಬೀರುತ್ತಿದೆ.  ಅವುಗಳಲ್ಲಿ ಅತ್ಯಂತ ಕಿರಿಯ ಮಗು 13 ದಿನಗಳದ್ದಾಗಿದೆ" ಎಂದು ಅವರು ಟ್ವಿಟ್ಟರ್ನಲ್ಲಿ ಬರೆದಿದ್ದಾರೆ. "ಒಂದು ವರ್ಷದೊಳಗಿನ ಶಿಶುಗಳು ಹಿರಿಯ ಮಕ್ಕಳಿಗಿಂತ ಗಣನೀಯವಾಗಿ ಹೆಚ್ಚಿನ ಧನಾತ್ಮಕ ದರವನ್ನು (40.38 ಪ್ರತಿಶತ ಮತ್ತು 10.5 ಪ್ರತಿಶತ) ಹೊಂದಿದ್ದರು" ಎಂದು ಅವರು ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News