ಶ್ರೀದೇವಿ ಪ್ರಕರಣಕ್ಕೆ ಹೊಸ ಟ್ವಿಸ್ಟ್; ದಾವೂದ್ ಹೆಸರು ಹೇಳಿದ ಸಂಸದ ಸುಬ್ರಹ್ಮಣ್ಯಂ ಸ್ವಾಮಿ

 ಬಿಜೆಪಿ ಸಂಸದ ಮತ್ತು ಪ್ರಸಿದ್ಧ ವಕೀಲ ಸುಬ್ರಮಣ್ಯಂ ಸ್ವಾಮಿ ಕೂಡಾ ಸಾವಿನ ಬಗ್ಗೆ ಪ್ರಶ್ನಿಸಿದ್ದಾರೆ. 

Last Updated : Feb 27, 2018, 02:08 PM IST
ಶ್ರೀದೇವಿ ಪ್ರಕರಣಕ್ಕೆ ಹೊಸ ಟ್ವಿಸ್ಟ್; ದಾವೂದ್ ಹೆಸರು ಹೇಳಿದ ಸಂಸದ ಸುಬ್ರಹ್ಮಣ್ಯಂ ಸ್ವಾಮಿ title=

ನವದೆಹಲಿ : ಬಾಲಿವುಡ್ ನಟಿ ಶ್ರೀದೇವಿ ಬಾತ್ ಟಬ್ನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಅವರ ಸಾವು ಆಕಸ್ಮಿಕವಾಗಿದೆ ಎಂದು ಶ್ರೀದೇವಿಯವರ ಮರಣೋತ್ತರ ವರದಿಯಲ್ಲಿ ತಿಳಿಸಲಾಗಿದೆ. ಅವರ ರಕ್ತದಲ್ಲಿ ಆಲ್ಕೋಹಾಲ್ ಕೂಡ  ಕಂಡುಬಂದಿದೆ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೂ ಶ್ರೀದೇವಿ ಅವರ ಸಾವಿನ ಬಗ್ಗೆ ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಅಂತೆಯೇ ಬಿಜೆಪಿ ಸಂಸದ ಮತ್ತು ಪ್ರಸಿದ್ಧ ವಕೀಲ ಸುಬ್ರಮಣ್ಯಂ ಸ್ವಾಮಿ ಕೂಡಾ ಸಾವಿನ ಬಗ್ಗೆ ಪ್ರಶ್ನಿಸಿದ್ದಾರೆ. 

ಶ್ರೀದೇವಿ ಅವರ ಸಾವಿನ ಕುರಿತು ಹೇಳಿಕೆ ನೀಡಿರುವ ಸುಬ್ರಹ್ಮಣ್ಯಂ ಸ್ವಾಮಿ, "ನಾವು ನ್ಯಾಯಾಲಯ ಏನು ಹೇಳುತ್ತದೆ ಅದನ್ನು ಒಪ್ಪಬೇಕಿದೆ. ಮಾಧ್ಯಮಗಳಲ್ಲಿ ಬರುವ ಸತ್ಯಗಳು ವಿಶ್ವಾಸಾರ್ಹವಲ್ಲ. ಹಾಗೆ ನೋಡಿದರೆ ಶ್ರೀದೇವಿ ಅವರು ಎಂದಿಗೂ ಹಾರ್ಡ್ ಲಿಕ್ಕರ್ಗಳನ್ನು ಸೇವಿಸುತ್ತಿರಲಿಲ್ಲ. ಆದರೂ ಹೇಗೆ ಅವರ ರಕ್ತದಲ್ಲಿ ಆಲ್ಕೊಹಾಲ್ ಅಂಶ ಕಂಡುಬಂದಿತು? ಸಿಸಿಟಿವಿ ಕ್ಯಾಮರಾ ದೃಶ್ಯಗಳು ಏನಾದವು? ಇದ್ದಕ್ಕಿದ್ದಂತೆ ಮಾಧ್ಯಮಗಳ ಮುಂದೆ ಬಂದ ವೈದ್ಯರು, ಶ್ರೀದೇವಿ ಹೃದಯಾಘಾತದಿಂದ ಮರಣಹೊಂದಿದರು ಎಂದು ಹೇಳಿದ್ದಾರೆ. ಇದೆಲ್ಲಾ ನಂಬುವ ಮಾತೇ? ಎಂದು ಪ್ರಶ್ನಿಸಿದ್ದಾರೆ.

ಅಷ್ಟೇ ಅಲ್ಲ, ಈ ವಿಷಯದ ಸಂಬಂಧ ಸುಬ್ರಮಣ್ಯಂ ಸ್ವಾಮಿ ಅವರು, ಭೂಗತ ಪಾತಕಿ ದಾವೂದ್ ಇಬ್ರಾಹಿಮ್ ಹೆಸರು ಉಚ್ಚರಿಸುವ ಮೂಲಕ ಮತ್ತೊಂದು ಅನುಮಾನ ಹುಟ್ಟುಹಾಕಿದ್ದಾರೆ. ANI ನ ವರದಿಯ ಪ್ರಕಾರ, "ಸಿನಿಮಾ ನಟಿಯರು ದಾವೂದ್ನೊಂದಿಗಿನ ಸಂಬಂಧ ಹೊಂದಿದ್ದು, ಅದಕ್ಕೂ ನಾವು ಸ್ವಲ್ಪ ಗಮನ ಕೊಡಬೇಕು" ಎಂದು ಅವರು ಹೇಳಿದ್ದಾರೆ.

ದುಬೈ ಪೊಲೀಸರು ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್ಗೆ ಶ್ರೀದೇವಿ ಪ್ರಕರಣವನ್ನು ವರ್ಗಾಯಿಸಿದೆ. ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್ ಶ್ರೀದೇವಿ ಅವರ ಕುಟುಂಬವನ್ನೂ ವಿಚಾರಣೆ ನಡೆಸಿದೆ. ಹತ್ತಿರದ ಸಂಬಂಧಿ ಮೊಹಿತ್‌ ಮಾರ್ವಾ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಮ್ಮ ಪತಿ ಬೋನಿ ಕಪೂರ್ ಹಾಗೂ ಕಿರಿಯ ಪುತ್ರಿ ಖುಷಿ ಜೊತೆ ಅವರು ಬುಧವಾರ ದುಬೈಗೆ ಶ್ರೀದೇವಿ ತೆರಳಿದ್ದರು. ಅಲ್ಲಿನ ಹೋಟೆಲ್‌ನ ಸ್ನಾನಗೃಹದಲ್ಲಿ ಫೆ.24ರಂದು ರಾತ್ರಿ 11 ಗಂಟೆ ಸುಮಾರಿನಲ್ಲಿ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. 

ಈ ಸಂಬಂಧ ಸೋಮವಾರ ಸಂಜೆ ಬಿಡುಗಡೆಯಾದ ಫೋರೆನ್ಸಿಕ್ ವರದಿಯ ಪ್ರಕಾರ ಸ್ನಾನದ ತೊಟ್ಟಿಯಲ್ಲಿ ಅವರ ಸಾವಿನ ಕಾರಣದಿಂದಾಗಿ ಈ ಪ್ರಕರಣವನ್ನು ದುಬೈ ಸಾರ್ವಜನಿಕ ಪ್ರಾಸಿಕ್ಯೂಷನ್ (ಡಿಪಿಪಿ) ಗೆ ವರ್ಗಾಯಿಸಲಾಗಿದೆ. ಈಗ ಈ ವಿಷಯವನ್ನು ಡಿಪಿಪಿ ತನಿಖೆ ಮಾಡುತ್ತಿದೆ. 

Trending News