ನಿರ್ಭಯಾ ಪ್ರಕರಣ: ರಾಷ್ಟ್ರಪತಿಗೆ ದಯಾ ಅರ್ಜಿ ಸಲ್ಲಿಸಿದ ಅಪರಾಧಿ ಮುಖೇಶ್ ಸಿಂಗ್

ನಿರ್ಭಯಾ ಸಾಮೂಹಿಕ ಅತ್ಯಾಚಾರ-ಕೊಲೆ ಪ್ರಕರಣದ ಅಪರಾಧಿಗಳಲ್ಲಿ ಒಬ್ಬರಾದ ಮುಖೇಶ್ ಸಿಂಗ್ ಮಂಗಳವಾರ (ಜನವರಿ 14) ಸುಪ್ರೀಂ ಕೋರ್ಟ್ ಮರಣದಂಡನೆ ವಿರುದ್ಧದ ಕ್ಯುರೆಟಿವ್ ಅರ್ಜಿಯನ್ನು ತಿರಸ್ಕರಿಸಿದ ನಂತರ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಮುಂದೆ ದಯಾ ಅರ್ಜಿಯನ್ನು ಸಲ್ಲಿಸಿದ್ದಾರೆ.

Last Updated : Jan 14, 2020, 11:11 PM IST
ನಿರ್ಭಯಾ ಪ್ರಕರಣ: ರಾಷ್ಟ್ರಪತಿಗೆ ದಯಾ ಅರ್ಜಿ ಸಲ್ಲಿಸಿದ ಅಪರಾಧಿ ಮುಖೇಶ್ ಸಿಂಗ್  title=
ಸಾಂದರ್ಭಿಕ ಚಿತ್ರ

ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ-ಕೊಲೆ ಪ್ರಕರಣದ ಅಪರಾಧಿಗಳಲ್ಲಿ ಒಬ್ಬರಾದ ಮುಖೇಶ್ ಸಿಂಗ್ ಮಂಗಳವಾರ (ಜನವರಿ 14) ಸುಪ್ರೀಂ ಕೋರ್ಟ್ ಮರಣದಂಡನೆ ವಿರುದ್ಧದ ಕ್ಯುರೆಟಿವ್ ಅರ್ಜಿಯನ್ನು ತಿರಸ್ಕರಿಸಿದ ನಂತರ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಮುಂದೆ ದಯಾ ಅರ್ಜಿಯನ್ನು ಸಲ್ಲಿಸಿದ್ದಾರೆ.

ವಿಶೇಷವೆಂದರೆ, ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಒಳಪಡಿಸುವ ಅಧಿಕಾರ ರಾಷ್ಟ್ರಪತಿ ಕೋವಿಂದ್‌ಗೆ ಇದೆ. ಇದಕ್ಕೂ ಮುನ್ನ ಮಂಗಳವಾರ, ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಸುಪ್ರೀಂಕೋರ್ಟ್‌ನ ಐದು ನ್ಯಾಯಾಧೀಶರ ನ್ಯಾಯಪೀಠದ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಆರ್.ಎಫ್.ನಾರಿಮನ್, ಆರ್.ಭಾನುಮತಿ ಮತ್ತು ಅಶೋಕ್ ಭೂಷಣ್ ಅವರು ಮುಖೇಶ್ ಮತ್ತು ವಿನಯ್ ಅವರ ಅರ್ಜಿಯಲ್ಲಿ ಯಾವುದೇ ಅರ್ಹತೆ ಇಲ್ಲದ ಕಾರಣ ವಜಾಗೊಳಿಸಿದ್ದಾರೆ.

ಈಗ ಮುಖೇಶ್ ದಯಾ ಅರ್ಜಿ ಮನವಿ ಸಲ್ಲಿಸಿದ್ದಾರೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ಖಚಿತಪಡಿಸಿದ್ದಾರೆ. ನಿರ್ಭಯಾ ಸಾಮೂಹಿಕ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳಾದ ವಿನಯ್ ಶರ್ಮಾ (26), ಮುಖೇಶ್ ಕುಮಾರ್ (32), ಅಕ್ಷಯ್ ಕುಮಾರ್ ಸಿಂಗ್ (31) ಮತ್ತು ಪವನ್ ಗುಪ್ತಾ (25) ಅವರನ್ನು ದೆಹಲಿಯ ತಿಹಾರ್ ಒಳಗೆ ಜೈಲು ಸಂಖ್ಯೆ 3 ರಲ್ಲಿ ಜನವರಿ 22 ರಂದು ಬೆಳಿಗ್ಗೆ 7 ಗಂಟೆಗೆ ಗಲ್ಲಿಗೇರಿಸಲಾಗುವುದು. ಜನವರಿ 7 ರಂದು ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ನಾಲ್ವರು ಅಪರಾಧಿಗಳಿಗೆ ಡೆತ್ ವಾರಂಟ್ ಹೊರಡಿಸಿತ್ತು. ಆದಾಗ್ಯೂ ಕೋರ್ಟ್ ಅವರಿಗೆ ದಯಾ ಅರ್ಜಿಯನ್ನು ಸಲ್ಲಿಸಲು ನ್ಯಾಯಾಲಯವು ಅವರಿಗೆ ಎರಡು ವಾರಗಳ ಕಾಲಾವಕಾಶ ನೀಡಿತು.

2012 ರ ಡಿಸೆಂಬರ್ 16 ರ ರಾತ್ರಿ ದೆಹಲಿಯಲ್ಲಿ ಚಲಿಸುವ ಬಸ್‌ನಲ್ಲಿ 23 ವರ್ಷದ ಯುವತಿಯ ಮೇಲೆ ನಾಲ್ವರು ಅಪರಾಧಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ನಂತರ ನಿರ್ಭಯಾ ಎಂದು ಹೆಸರಿಸಲ್ಪಟ್ಟ ಸಂತ್ರಸ್ತೆ ಸಿಂಗಾಪುರದ ಆಸ್ಪತ್ರೆಯಲ್ಲಿ ನಿಧನರಾದರು, 

Trending News