India Post ದೇಶದ ಎರಡನೇ ಅತಿ ದೊಡ್ಡ ಬ್ಯಾಂಕ್ ಆಗುವ ಸಾಧ್ಯತೆ, Niti Ayog ನೀಡಿದೆ ಈ ಸಲಹೆ

Niti Aayog ನೀಡಿರುವ ಸಲಹೆಯಂತೆ India Post, ಭಾರತೀಯ ಸ್ಟೇಟ್ ಬ್ಯಾಂಕ್ ಬಳಿಕ ಎರಡನೆಯ ಅತಿ ದೊಡ್ಡ ಬ್ಯಾಂಕ್ ಆಗುವ ಸಾಧ್ಯತೆ ಇದೆ.

Last Updated : Aug 8, 2020, 07:20 PM IST
India Post ದೇಶದ ಎರಡನೇ ಅತಿ ದೊಡ್ಡ ಬ್ಯಾಂಕ್ ಆಗುವ ಸಾಧ್ಯತೆ, Niti Ayog ನೀಡಿದೆ ಈ ಸಲಹೆ title=

ನವದೆಹಲಿ: Niti Aayog ನೀಡಿರುವ ಸಲಹೆಯಂತೆ India Post, ಭಾರತೀಯ ಸ್ಟೇಟ್ ಬ್ಯಾಂಕ್ ಬಳಿಕ ಎರಡನೆಯ ಅತಿ ದೊಡ್ಡ ಬ್ಯಾಂಕ್ ಆಗುವ ಸಾಧ್ಯತೆ ಇದೆ. ಇದಲ್ಲದೆ ಮೂರು ಸರ್ಕಾರಿ ಬ್ಯಾಂಕ್ ಗಳನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡುವ ಸಲಹೆಯನ್ನು ಕೂಡ ಆಯೋಗ ಪ್ರಸ್ತಾಪಿಸಿದೆ. ದೇಶದಲ್ಲಿ ಆರ್ಥಿಕ ಸೇರ್ಪಡೆಯ ಅಗತ್ಯವನ್ನು ಮನಗಂಡ ನೀತಿ ಆಯೋಗ್ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು ಅಂಚೆ ಬ್ಯಾಂಕುಗಳಲ್ಲಿ (ಅಂಚೆ ಬ್ಯಾಂಕುಗಳು) ವಿಲೀನಗೊಳಿಸಲು ಸೂಚಿಸಿದೆ. ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು (ಆರ್‌ಆರ್‌ಬಿ) ಇಂಡಿಯಾ ಪೋಸ್ಟ್‌ಗೆ ವಿಲೀನಗೊಳಿಸುವುದು ಸೇರಿದಂತೆ ಆಯೋಗವು ಸರ್ಕಾರಕ್ಕೆ ಹಲವಾರು ಶಿಫಾರಸುಗಳನ್ನು ಮಾಡಿದೆ. ಪ್ರಧಾನ ಮಂತ್ರಿಗಳ ಕಾಯಾಲಯ ಮತ್ತು ಹಣಕಾಸು ಸಚಿವಾಲಯಕ್ಕೆ ಆಯೋಗೆ ಇತ್ತೀಚಿಗೆ ನೀಡಿರುವ ಪ್ರೆಸೆಂಟೆಶನ್ ನಲ್ಲಿ ದೇಶದಲ್ಲಿ 1.5 ಲಕ್ಷಕ್ಕೂ ಹೆಚ್ಚು ಅಂಚೆ ಕಚೇರಿಗಳನ್ನು ಉದ್ದೇಶಿತ ಅಂಚೆ ಬ್ಯಾಂಕ್‌ಗೆ ಔಟ್ಲೆಟ್ ಗಳನ್ನಾಗಿ ಮಾಡಬೇಕು ಎಂದು ನೀತಿ ಆಯೋಗ ಸೂಚನೆ ನೀಡಿದೆ. ಇದಲ್ಲದೆ ಬ್ಯಾಂಕ್ ಪರವಾನಗಿ ಪಡೆಯುವ ನಿಯಮಗಳನ್ನು ಸಹ ಸರಳೀಕರಿಸಬೇಕು ಎಂದು ಥಿಂಕ್ ಟ್ಯಾಂಕ್ ಸೂಚಿಸಿದೆ.

ಈ ಬ್ಯಾಂಕ್ ಗಳ ವಿಲೀನಕ್ಕೆ ಪ್ರಸ್ತಾವನೆ
ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್, ಯುಕೋ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಮಹಾರಾಷ್ಟ್ರಗಳನ್ನು ಖಾಸಗೀಕರಣಗೊಳಿಸುವಂತೆ ನೀತಿ ಆಯೋಗ ಸಲಹೆ ನೀಡಿದೆ. ಸರ್ಕಾರಿ ಬ್ಯಾಂಕ್ ಗಳ ಖಾಸಗೀಕರಣದ ಬಳಿಕ ಸರ್ಕಾರ ತೀವ್ರ ಟೀಕೆಗೆ ಗುರಿಯಾಗುವ ಸಾಧ್ಯತೆ ಇದೆ. ಇದಲ್ಲದೇ ಬ್ಯಾಂಕ್ ಸಂಘಟನೆಗಳು ಕೂಡ ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದೆ. ಬ್ಯಾಂಕಿಂಗ್ ಸೆಕ್ಟರ್ ನಲ್ಲಿ ಇತ್ತೀಚೆಗಷ್ಟೇ ನಡೆಸಲಾಗಿರುವ ವಿಲೀನ ಪ್ರಕ್ರಿಯೆ ಏಪ್ರಿಲ್ 1ರಿಂದ ಜಾರಿಗೆ ಬಂದಿದೆ. ಪ್ರಸ್ತುತ ದೇಶದಲ್ಲಿ ಒಟ್ಟು 12 ಸರ್ಕಾರಿ ಬ್ಯಾಂಕ್ ಗಳಿದ್ದು, 2017ರಲ್ಲಿ ಇವುಗಳ ಸಂಖ್ಯೆ 27 ರಷ್ಟಿತ್ತು.

ಇದಕ್ಕೆ ನಷ್ಟ ಅತಿ ದೊಡ್ಡ ಕಾರಣವಾಗಿದೆ
ಈ ಬ್ಯಾಂಕುಗಳ ಖಾಸಗೀಕರಣದ ಸಲಹೆಯ ಹಿಂದಿನ ದೊಡ್ಡ ಕಾರಣವೆಂದರೆ ಈ ಬ್ಯಾಂಕುಗಳು ನಿರಂತರವಾಗಿ ನಷ್ಟವನ್ನು ಅನುಭವಿಸುತ್ತಿವೆ. ಈ ಬ್ಯಾಂಕುಗಳಲ್ಲಿ ಸರ್ಕಾರದ ಪಾಲು ಇರುವುದರಿಂದ ಈ ಕೊರತೆಯು ಸರ್ಕಾರದ ಆದಾಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ. ಇಂತಹ  ಪರಿಸ್ಥಿತಿಯಲ್ಲಿ, ಈ ನಷ್ಟವನ್ನು ಎದುರಿಸಲು ನೀತಿ ಆಯೋಗ ಅವುಗಳನ್ನು ಖಾಸಗೀಕರಣಗೊಳಿಸಲು ಸೂಚಿಸಿದೆ. 

Trending News